More

    ಪ್ರತಿಷ್ಠಿತರ 29ನೇ ವಾರ್ಡ್‌ನಲ್ಲಿವೆ ಸಣ್ಣ ಸಣ್ಣ ಸಮಸ್ಯೆಗಳು

    ಹೊಸಪೇಟೆ: ಹೊಸ ಹೊಸ ವಿನ್ಯಾಸದ ಕಟ್ಟಡಗಳು. ಅಲ್ಲಲ್ಲಿ ನಿರ್ಮಾಣಗೊಳ್ಳುತ್ತಿರುವ ಅಪಾರ್ಟ್‌ಮೆಂಟ್‌ಗಳು. ರಾಜೀವನಗರ, ಗೋಕುಲನಗರ, ಭಾರತಿನಗರಗಳಂತಹ ಪ್ರತಿಷ್ಠಿತರ ಪ್ರದೇಶಗಳನ್ನು ಒಳಗೊಂಡ 29ನೇ ವಾರ್ಡ್‌ನಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ.

    ಭಾಗಶಹ ಎಂ.ಜೆ.ನಗರ ಈ ವಾರ್ಡ್‌ನಲ್ಲಿದ್ದು, ಭಗತ್ ಸಿಂಗ್ ನಗರ ಮಾತ್ರ ಸ್ಲಂ ಪ್ರದೇಶವಾಗಿದೆ. ಆದರೂ ಇತ್ತೀಚೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 4,500 ಮತದಾರರಿರುವ ಇಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳಿಲ್ಲ. ಆದರೆ, ಸ್ವಚ್ಛತೆಯ ಕೊರತೆಯಂತಹ ಸಣ್ಣ-ಪುಟ್ಟ ಸಮಸ್ಯೆಗಳು ಬೇಸರ ತರಿಸುತ್ತಿವೆ.

    ವಾರ್ಡ್‌ನ ಕೆಲ ಚರಂಡಿಗಳು ತ್ಯಾಜ್ಯದಿಂದ ತುಂಬಿವೆ. ಇನ್ನೂ ಕೆಲವೆಡೆ ಜಾಲಿ ಮತ್ತಿತರ ನಿರುಪಯುಕ್ತ ಗಿಡಗಳು ಬೆಳೆದಿವೆ. ಘನತ್ಯಾಜ್ಯದ ಪರಿಣಾಮ ಕೊಚ್ಚೆ ನೀರು ಮುಂದೆ ಹರಿಯುವುದಿಲ್ಲ. ನಾರುವ ನೀರಿನಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚುತ್ತಿದೆ. ಖಾಲಿ ನಿವೇಶನಗಗಳು, ರಸ್ತೆಗಳ ತಿರುವುಗಳು ತ್ಯಾಜ್ಯ ವಿಲೇವಾರಿ ಕೇಂದ್ರಗಳಾಗಿ ಮಾರ್ಪಟ್ಟಿವೆ.

    ರಾಜೀವನಗರದ ಪ್ರಮುಖ ರಸ್ತೆಗಳು ಸಿಸಿ ರಸ್ತೆಗಳಾಗಿವೆ. ಇನ್ನುಳಿದಂತೆ ಅನೇಕ ಒಳ ರಸ್ತೆಗಳು ಮಣ್ಣಿನಿಂದ ಕೂಡಿವೆ. ಆ ಪೈಕಿ ರಾಜೀವ ಉದ್ಯಾನ ಸುತ್ತಲೂ, 1ನೇ ಕ್ರಾಸ್, ಎಂ.ಜೆ.ನಗರ, ಗೋಕುಲನಗರ ಮತ್ತು ಭಗತ್‌ಸಿಂಗ್ ನಗರದ ಹಲವು ರಸ್ತೆಗಳು ಇನ್ನಷ್ಟೇ ಅಭಿವೃದ್ಧಿಯಾಗಬೇಕಿದೆ. ವಾರ್ಡ್‌ನಲ್ಲಿ ಒಂದು ವರ್ಷದಲ್ಲಿ ಆಗಿರುವ ಕೆಲಸಗಳು ಬೆರಳೆಣಿಕೆಯಷ್ಟು. ಹಿಂದಿನ ಅವಧಿಗಳಲ್ಲಿ ವಾರ್ಡ್ ಪ್ರತಿನಿಧಿಸಿದ ಸದಸ್ಯರು ಮೂಲ ಸೌಕರ್ಯಕ್ಕೆ ಒತ್ತು ನೀಡಿದ್ದರಿಂದ ಸುಸಜ್ಜಿತ ಬಡಾವಣೆ ಎನಿಸಲು ಸಾಧ್ಯವಾಗಿದೆ ಎನ್ನುತ್ತಾರೆ ವಾರ್ಡ್‌ನ ಹಿರಿಯರು.

    ಈ ಕುರಿತು ಪ್ರತಿಕ್ರಿಯಿಸಿರುವ ವಾರ್ಡ್ ಸದಸ್ಯ ರಮೇಶ ಗುಪ್ತಾ, ಸಣ್ಣ-ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ 29ನೇ ವಾರ್ಡ್ ಸುಸಜ್ಜಿತವಾಗಿದೆ. ಮೂರು ದಶಕಗಳಿಂದ ನೀರು ಪೂರೈಕೆಯಾಗದ ಬಡಾವಣೆಗಳಿಗೆ ಒಂದು ವರ್ಷದಲ್ಲಿ ನೀರು ಒದಗಿಸಿದ ಖುಷಿಯಿದೆ. ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts