More

    ಬೂದೀಶ್ವರ ಶ್ರೀಗಳ ಹುಟ್ಟುಹಬ್ಬ

    ವಿಜಯವಾಣಿ ಸುದ್ದಿಜಾಲ ಗದಗ
    ತಾಲೂಕಿನ ಹೊಸಹಳ್ಳಿಯ ಬೂದೀಶ್ವರ ಮಠದಲ್ಲಿ ಬೂದೀಶ್ವರ ಶ್ರೀಗಳು 44ನೇ ಹುಟ್ಟು ಹಬ್ಬವನ್ನು ಮಂಗಳವಾರ ಅರ್ಥರ್ಪೂಣವಾಗಿ ಆಚರಿಲಾಯಿತು. ಕಾರ್ಯಕ್ರಮದಲ್ಲಿ ಗುರುಕಾರುಣ್ಯ ಪ್ರಶಸ್ತಿ ಸ್ವೀಕರಿಸಿ ಅಥಣಿ ಮೊಟಗಿಮಠದ ಪ್ರಭುಚನ್ನಬಸವ ಶ್ರೀಗಳು ಮಾತನಾಡಿ, ಹೊಸಹಳ್ಳಿ ಬೂದೀಶ್ರೀಗಳು ಗ್ರಾಮೀಣ ಬಡಮಕ್ಕಳನ್ನು ದತ್ತು ಸ್ವೀಕರಿಸಿ ಬಡ ಮಕ್ಕಳ ಬದುಕಿಗೆ ಬೆಳಕು ನೀಡುವ ಾನ ದಾಸೋಹಿಗಳಾಗಿದ್ದಾರೆ. ಅವರು ಬೂದೀಶ್ವರಮಠವನ್ನು ಬಸವ ಧರ್ಮಪ್ರಸಾರ ಮಾಡುವುದರ ಜೊತೆಗೆ ಬೂದೀಶ್ವರ ವಿದ್ಯಾಪಿಠದ ಮೂಲಕ ಮಕ್ಕಳ ಬದುಕಿಗೆ ಬೆಳಕು ತೋರುವ ಮಹಾ ಕ್ರಿಯಾಶಕ್ತಿ ಆಗಿದ್ದಾರೆ ಎಂದರು.
    ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ನಾಡಿಗೆ ಕೊಡುಗೆಯಾಗಿ ಕೊಡುವ ಮೂಲಕ ಬೂದೀಶ್ರೀಗಳು ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಭುಚನ್ನಬಸವ ಶ್ರೀಗಳು ಹೇಳಿದರು.
    ಸಾನ್ನಿಧ್ಯ ವಹಿಸಿದ ಬೂದೀಶ್ರೀಗಳು ಮಾತನಾಡಿ, “ಬೂದೀಶ್ವರ ವಿದ್ಯಾಪಿಠದಲ್ಲಿ ಅಭ್ಯಾಸ ಮಾಡುವ ಮಕ್ಕಳೇ ಭಾಗ್ಯವಂತರು. ಸಂಸತಿ, ಸಂಸ್ಕಾರ ಸುಾನಗಳ ಸಂಗಮವಾಗಿರುವ ಬೂದೀಶ್ವರ ವಿದ್ಯಾಪಿಠವು ದೇಶದ ಭವಿಷ್ಯಕ್ಕೆ ಸಮರ್ಥ ನಾಗರಿಕರನ್ನು ಸುಂಸತ ಪ್ರಜೆಗಳನ್ನು ರೂಪಿಸುವ ಾನ ಕಮ್ಮಟವಾಗಿದೆ. ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡುವ ಮಠದ ಭಕ್ತರೇ ಮಠದ ಆಸ್ತಿ ಆಗಿದ್ದಾರೆ. ಮಕ್ಕಳು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡರೆ ನಮ್ಮ ವಿದ್ಯಾಪಿಠಕ್ಕೆ ಅವರು ನೀಡುವ ಶ್ರೇಷ್ಠ ಕೊಡುಗೆಯಾಗಿದೆ ಎಂದು ಬೂದೀಶ್ವರ ಶ್ರೀಗಳು ನುಡಿದರು.
    ಸಿ.ಎನ್​. ನಾಯ್ಕರ, ಅಪ್ಪಣ್ಣ ಇನಾಮತಿ, ಸಿ.ಬಿ. ಕರಕಟ್ಟಿ, ವಿಜಯಕುಮಾರ ಪಾಟೀಲ, ಡಾ. ಎಸ್​. ಎನ್​. ವೆಂಕಟಾಪೂರ, ಸುಮನ್​ ಹುಲಕೋಟಿ, ಟಿ.ವಿ. ರೋಣದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts