More

    ಹೊಸದುರ್ಗಕ್ಕೆ ಮಧ್ಯಪ್ರದೇಶದ ಜನ

    ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯಲ್ಲಿ ಎರಡು ದಿನದಿಂದ ಸಂಚರಿಸುತ್ತಿರುವ ಉತ್ತರ ಭಾರತೀಯರ ತಂಡ ತಾಲೂಕಿನ ಜನರಲ್ಲಿ ಕರೊನಾ ಆತಂಕ ಉಂಟು ಮಾಡಿದೆ.

    ಚಿಕ್ಕಮಗಳೂರು ಗಡಿ ಮೂಲಕ ಜಿಲ್ಲೆ ಪ್ರವೇಶಿಸಿರುವ ಈ ತಂಡ ಸದ್ಯ ತಾಲೂಕು ಆಡಳಿತದ ವಶದಲ್ಲಿದೆ.

    ಮಧ್ಯಪ್ರದೇಶದ ಪನ್ನಾ ಜಿಲ್ಲೆಗೆ ಸೇರಿದ 9 ಜನ ಯುವಕರ ತಂಡ ಮಂಗಳೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದು, ಸೋಮವಾರ ಬೆಳಗ್ಗೆ ಅಹಮದ್ ನಗರ ಗ್ರಾಮದ ಮೂಲಕ ತಾಲೂಕಿನ ಗಡಿ ಪ್ರವೇಶಿಸಿದೆ. ಹಿಂದಿ ಮಾತನಾಡುತ್ತಿದ್ದ ಇವರ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆ ಗಮನ ಸೆಳೆದಿದ್ದಾರೆ.

    ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ನೀರಗುಂದ ಗೇಟ್ ಬಳಿ ಇವರನ್ನು ಆಂಬುಲೆನ್ಸ್ ಮೂಲಕ ಕರೆತಂದು ಹೊಸದುರ್ಗದ ಫೀವರ್ ಟೆಸ್ಟಿಂಗ್ ಸೆಂಟರ್‌ನಲ್ಲಿ ಆರೋಗ್ಯ ತಪಾಸಣೆ ನಡೆಸಿ ಮಂಗಳೂರಿಗೆ ವಾಪಸು ತೆರಳುವಂತೆ ಸೂಚಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಸಾಣೇಹಳ್ಳಿ, ಶೆಟ್ಟಿಹಳ್ಳಿ ಮಾರ್ಗವಾಗಿ ಬಾಗೂರಿಗೆ ಬಂದ ತಂಡ ಪೊಲೀಸ್ ಉಪಠಾಣೆ ಬಳಿ ಕುಳಿತು ವಿಶ್ರಾಂತಿ ಪಡೆದಿದೆ. ಊರಿನ ಜನರು ಆಹಾರ, ಚಹಾ ನೀಡಿ ಉಪಚರಿಸಿದ್ದಾರೆ. ಅಲ್ಲಿಂದ ಗೂಡ್ಸ್ ವಾಹನದ ಮೂಲಕ ಮಲ್ಲಪ್ಪನಹಳ್ಳಿಗೆ ತೆರಳಿದ್ದಾರೆ.

    ವಿಷಯ ತಿಳಿದ ತಾಲೂಕು ಆಡಳಿತ ಅವರನ್ನು ವಶಕ್ಕೆ ಪಡೆದು ಮಂಗಳೂರಿಗೆ ಮರಳಿ ಕಳುಹಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಆರೇಂಜ್ ಜೋನ್‌ನಲ್ಲಿರುವ ಮಂಗಳೂರಿನಿಂದ ಬಂದವರನ್ನು ತಾಲೂಕು ಆಡಳಿತ ಲಘುವಾಗಿ ಪರಿಗಣಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts