More

    ಸದ್ದಿಲ್ಲದೇ ಸೇವಾ ಕಾರ್ಯ

    ಹೊಸದುರ್ಗ: ಕರೊನಾ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರ್ಗತಿಕರಿಗೆ ಹಲವು ಸಂಘ, ಸಂಸ್ಥೆಗಳು ಸಹಾಯ ಮಾಡುತ್ತಿವೆ.

    ತಾಲೂಕಿನ ಸಂಘವೊಂದು ಪ್ರತಿದಿನ 500 ಜನರಿಗೆ ಗುಣಮಟ್ಟದ ಸಿದ್ಧ ಆಹಾರ ಮತ್ತು ಶುದ್ಧ ಕುಡಿಯುವ ನೀರು ವಿತರಣೆ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದೆ.

    ಪಟ್ಟಣ ಸಮಾನ ಮನಸ್ಕ ಸ್ನೇಹಿತರು ಸೇರಿ ಹುಟ್ಟು ಹಾಕಿರುವ ಸ್ವಾಮಿ ವಿವೇಕಾನಂದ ಸೇವಾ ಬಳಗ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿದೆ.

    ಶಿವನೆಕಟ್ಟೆ ರಸ್ತೆಯಲ್ಲಿರುವ ರಾಗಿ ಕುಮಾರ್ ಅವರ ಕಟ್ಟಡದಲ್ಲಿ ಸಂಘದ ಸದಸ್ಯರೆ ಸ್ವತಃ ಅಡುಗೆ ತಯಾರಿಸಿ ಐದು ನೂರು ಪ್ಯಾಕೇಟ್ ಮಾಡಿ ವಾಹನಗಳ ಮೂಲಕ ಮಧ್ಯಾಹ್ನದ ಆಹಾರ ಅಗತ್ಯವಿರುವ ಜನರ ಬಳಿ ತೆರಳಿ ಪೂರೈಸುವ ಕೆಲಸ ಮಾಡುತ್ತಿದ್ದಾರೆ.

    ಲಾಕ್‌ಡೌನ್ ಆರಂಭದ ದಿನದಿಂದ ಆಹಾರ ಪೂರೈಕೆ ಆರಂಭಿಸಿರುವ ಬಳಗದ ಸದಸ್ಯರು ಪ್ರತಿಯೊಬ್ಬರಿಗೂ ಒಂದು ಪ್ಯಾಕೇಟ್ ಆಹಾರ, ಒಂದು ಕುಡಿಯುವ ನೀರಿನ ಬಾಟಲಿ ಹಾಗೂ ಅಡಕೆ ತಟ್ಟೆ ನೀಡುತ್ತಿದ್ದಾರೆ.

    ಮಧ್ಯಾಹ್ನ 1ರಿಂದ ಸಂಜೆ 4ರ ವರೆಗೆ ಆಹಾರ ವಿತರಿಸಲಾಗುತ್ತದೆ. ಯಾವುದೇ ಪ್ರಚಾರ ಬಯಸದೆ ಜನಸೇವೆಯಲ್ಲಿ ತೊಡಗಿರುವ ವಿವೇಕಾನಂದ ಬಳಗಕ್ಕೆ ಲಾಕ್‌ಡೌನ ಮುಗಿವವರೆಗೆ ಸೇವೆ ಮುಂದುವರಿಸುವ ಇಂಗಿತವಿದೆ. ಜತೆಗೆ, ನಮ್ಮಿಂದ ಆಹಾರ ಪಡೆಯುವರ ಜತೆ ಫೋಟೋ ತೆಗೆಸಿಕೊಳ್ಳುವ ಕಾರ್ಯ ಸರಿಯಲ್ಲ ಎಂಬುದು ಸದಸ್ಯರ ಅಭಿಪ್ರಾಯ.

    ಪುರಸಭೆ ಮಾಜಿ ಸದಸ್ಯ ಶಶಿಧರ, ಕಾಂತರಾಜು, ತ್ಯಾಗರಾಜ್, ಗಾಂಧಿ ಪೀಲಾಪುರ, ಲೋಕೇಶ್, ಜಗದೀಶ ಮತ್ತಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts