More

    ಮಠಾಧೀಶರು ಮಠ ಬಿಟ್ಟು ಹೊರ ಬರಲಿಲ್ಲ

    ಹೊಸದುರ್ಗ: ಜನತಾ ಕರ್ಫ್ಯೂಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.

    ಬೆಳಗ್ಗೆ 7ರಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದ ಜನತೆ ಸಂಜೆ 5ಕ್ಕೆ ಸರಿಯಾಗಿ ಮನೆ ಮುಂದೆ ಮತ್ತು ಛಾವಣಿ ಮೇಲೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಹಾಗೂ ಸೈನಿಕರಿಗೆ ಗೌರವ ಅರ್ಪಿಸಿದರು.

    ಕರ್ಪ್ಯೂನಿಂದಾಗಿ ತಾಲೂಕಿನಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂತು. ಪಟ್ಟಣದ ರಸ್ತೆಗಳು, ಖಾಸಗಿ ಬಸ್, ಕೆಎಸ್‌ಆರ್‌ಟಿಸಿ ನಿಲ್ದಾಣ, ಆಟೋ ಸ್ಟ್ಯಾಂಡ್, ಟ್ಯಾಕ್ಸಿ ನಿಲ್ದಾಣಗಳೆಲ್ಲವೂ ಜನರು ಹಾಗೂ ವಾಹನಗಳಿಲ್ಲದೆ ಖಾಲಿಯಾಗಿದ್ದವು. ಆಸ್ಪತ್ರೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.

    ನಸುಕಿನಿಂದಲೇ ಆರಂಭವಾಗಿದ್ದ ಹಾಲು, ತರಕಾರಿ ಮಾರಾಟ ಬೆಳಗ್ಗೆ 7 ಗಂಟೆ ಹೊತ್ತಿಗೆ ಬಂದ್ ಆಯಿತು. ನಿತ್ಯ ಜನಸಂದಣಿಯಿಂದ ಕೂಡಿರುತ್ತಿದ್ದ ಮಾರ್ಕೆಟ್ ಸ್ತಬ್ಧವಾಗಿತ್ತು. ಶತಮಾನಗಳ ಕಾಲ ಬಾಗಿಲು ಮುಚ್ಚದ ಐತಿಹಾಸಿಕ ದೇವಾಲಯಗಳು ಮೊದಲ ಬಾರಿಗೆ ಬಂದ್ ಆಗಿದ್ದವು.

    ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನವಳ್ಳಿಯ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಮುಂಜಾನೆಯಿಂದ ರಾತ್ರಿ ವರೆಗೆ ಒಬ್ಬರೆ ಏಕಾಂತದಲ್ಲಿ ಪೂಜಾನುಷ್ಟಾನ ನೆರವೇರಿಸುವ ಮೂಲಕ ಕರೊನಾ ಸೊಂಕು ನಿವಾರಿಸುವಂತೆ ಪ್ರಾರ್ಥನೆ ಸಲ್ಲಿಸಿ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿದರು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ತರಳಬಾಳು ಮಠದಲ್ಲೇ ಬೆಳಗ್ಗೆ ರಾತ್ರಿ ವರೆಗೆ ಇರುವ ಮೂಲಕ ಜನತಾ ಕರ್ಫ್ಯೂ ಬೆಂಬಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts