More

    ಖಾಕಿ ಪಡೆಗೆ ಹೂ ಮಳೆ ಸ್ವಾಗತ

    ಹೊಸದುರ್ಗ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಧಿಕಾ ನೇತೃತ್ವದಲ್ಲಿ ಜರುಗಿದ ಪೊಲೀಸರ ಪಥ ಸಂಚಲ ನಡೆಸುವ ವೇಳೆ ಜನತೆ ಹೂ ಮಳೆ ಸುರಿಸುವ ಮೂಲಕ ಗೌರವ ಸಮರ್ಪಿಸಿದರು.

    ಎರಡು ಗಂಟೆ ತಡವಾಗಿ ಆರಂಭವಾದ ಪಥ ಸಂಚಲನಕ್ಕೆ ಜನರಿಂದ ಅಭೂತಪೂರ್ವವಾದ ಬೆಂಬಲ ವ್ಯಕ್ತವಾಯಿತು. ಜನತೆಯ ಒತ್ತಾಸೆ ಹಾಗೂ ಕರೊನಾ ಕುರಿತು ಜಾಗೃತಿ ಮೂಡಿಸಲು ಸಂಜೆ ಮೂರು ಗಂಟೆಗೆ ಆಯೋಜಿಸಲಾಗಿದ್ದ ಪಥ ಸಂಚಲನ ಕಾರ್ಯಕ್ರಮವು ಮಳೆಯ ಕಾರಣದಿಂದ ಐದು ಗಂಟೆಗೆ ಆರಂಭವಾಯಿತು.

    ಮಳೆಯ ನಡುವೆಯೂ ಪೊಲೀಸರ ಬರುವಿಕೆಗಾಗಿ ಪಟ್ಟಣದ ರಸ್ತೆ ಬದಿ, ಮಹಡಿ ಮೇಲೆ ಕಾದು ನಿಂತಿದ್ದ ಸಾವಿರಾರು ಜನ ಸಂಭ್ರಮದಿಂದ ಸ್ವಾಗತಿಸಿದರು.

    ಬಸವೇಶ್ವರ ವೃತ್ತದಿಂದ ಆರಂಭವಾದ ಪಥ ಸಂಚಲನವು ಪ್ರಮುಖ ರಸ್ತೆಯ ಮೂಲಕ ಕೊಬ್ಬರಿ ಪೇಟೆ, ಚಾಮರಾಜಪೇಟೆ, ಕೋಟೆ, ಈಶ್ವರ ದೇವಾಲಯ, ದುರ್ಗಾಂಬಿಕಾ ದೇವಾಲಯ, ವಿನಾಯಕ ಬಡಾವಣೆ, ಎನ್.ಎಸ್ ಬಡಾವಣೆ ಸುಮಾರು ನಾಲ್ಕು ಕಿ.ಮೀ. ಸಂಚರಿಸಿ ಟಿ.ಬಿ.ವೃತ್ತದಲ್ಲಿ ಮುಕ್ತಾಯಗೊಂಡಿತು.

    ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ನಿಂತಿದ್ದ ಸಾವಿರಾರು ಸಂಖ್ಯೆಯಲ್ಲಿ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಪೋಲಿಸರ ಮೇಲೆ ಹೂ ಮಳೆ ಸುರಿಸಿ ಕರೊನಾ ತಡೆಗಾಗಿ ಸಲ್ಲಿಸುತ್ತಿರುವ ಸೇವೆಗೆ ಧನ್ಯವಾದ ಅರ್ಪಿಸಿದರು.

    ಮಹಿಳೆಯರು ಎಸ್ಪಿ ರಾಧಿಕಾ ಅವರನ್ನು ಆರತಿ ಬೆಳಗಿ ಸ್ವಾಗತಿಸಿದರು. ರಸ್ತೆಗಳು ಹೂವಿನಿಂದ ತುಂಬಿ ಹೋಗಿದ್ದವು. ಜನರ ಅಭಿಮಾನಕ್ಕೆ ಪೊಲೀಸರು ಪುಳಕಿತರಾಗಿದ್ದರು.

    ಡಿವೈಎಸ್‌ಪಿ ತಿಪ್ಪೇಸ್ವಾಮಿ, ಸಿಪಿಐ ಫೈಜುಲ್ಲಾ, ಪಿಎಸ್‌ಐ ಶಿವಕುಮಾರ್, ಟಿಎಚ್‌ಒ ಡಾ.ಚಂದ್ರಶೇಖರ್ ಕಂಬಾಳಿಮಠ, ಹೊಸದುರ್ಗ ಠಾಣೆಯ ಪೋಲಿಸರು, ಗೃಹರಕ್ಷಕ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು.

    ಎಸ್ಪಿ ಕೆ.ರಾಧಿಕಾ ಹೇಳಿಕೆ: ಕರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಎಲ್ಲರೂ ಒಂದಾಗಿ ಹೋರಾಡುವ ಅಗತ್ಯವಿದೆ. ನಾವು ಸದ್ಯಕ್ಕೆ ಯಾವುದೇ ಪಾಸಿಟಿವ್ ಲಕ್ಷಣಗಳಿಲ್ಲದೆ ಹಸಿರು ವಲಯದ್ದೇವೆ. ಸ್ವಲ್ಪ ಎಚ್ಚರ ತಪ್ಪಿದರೂ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts