More

    ಹೊರ್ತಿಯಲ್ಲಿ ಲಕ್ಷ ದೀಪೋತ್ಸವ

    ಹೊರ್ತಿ: ‘ಜ್ಞಾನದ ಸಂಕೇತ ದೀಪಾವಳಿ ಹಬ್ಬ. ಜೀವನದಲ್ಲಿ ಸದಾ ಬೆಳಕನ್ನು ನೀಡುವ ಹಬ್ಬವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
    ಗ್ರಾಮದ ಆರಾಧ್ಯದೈವ ರೇವಣಸಿದ್ಧೇಶ್ವರ ಹಳೇ ದೇವಸ್ಥಾನ ಹಾಗೂ ರಾಜಗೋಪುರದ ಮುಂದೆ ದೀಪಾವಳಿ ಹಬ್ಬದ 4ನೇ ವರ್ಷದ ಲಕ್ಷ ದೀಪೋತ್ಸವ ಪ್ರಯುಕ್ತ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ರೇವಣಸಿದ್ಧೇಶ್ವರ ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ-13ರ ಪಕ್ಕದಲ್ಲಿನ ರೇವಣಸಿದ್ಧೇಶ್ವರ ಹಳೆಯ ಐತಿಹಾಸಿಕ ದೇವಸ್ಥಾನ ಈಗಾಗಲೇ ಭಕ್ತರ ಆಕರ್ಷಣೀಯ ತಾಣವಾಗಿ ಹೊರಹೊಮ್ಮಿದ್ದು, ಸಕಲ ಭಕ್ತರ ಸಹಾಯ-ಸಹಕಾರದಿಂದ ಆವರಣದಲ್ಲಿ ನಿರ್ಮಾಣಗೊಂಡ 108 ಅಡಿ ಎತ್ತರದ ಬೃಹತ್ ರಾಜಗೋಪುರ ಭಕ್ತರ ಕಣ್ಮನ ಸೆಳೆಯುತ್ತಿದೆ. ಈಗಾಗಲೇ 1 ಕೋಟಿ ರೂ. ವೆಚ್ಚದಲ್ಲಿ ಅನ್ನ ಪ್ರಸಾದ ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ. ಮುಂದೆ ಇನ್ನೂ ಮೂರು 108 ಅಡಿ ಎತ್ತರದ ರಾಜಗೋಪುರ, ಬೃಹತ್ ಶಿವಲಿಂಗ, ಶಿವನಮೂರ್ತಿ, ಕೋಟಿ ಲಿಂಗಗಳ ಸ್ಥಾಪನೆ ನಿರ್ಮಾಣ ಗುರಿ ಹೊಂದಿ ಐತಿಹಾಸಿಕ ತಾಣವನ್ನಾಗಿ ಮಾಡಲಾಗುವುದು ಎಂದರು.
    ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ದೀಪಗಳ ಬೆಳಕಿನ ಹಬ್ಬವು ಎಲ್ಲರ ಬದುಕನ್ನು ಬೆಳಗಲಿ ಎಂದರು. 2009ರಲ್ಲಿ ಮಹಾಮಳೆಗೆ ತುಂಬಿದ ಕೆರೆಗಳು ಅದರ ನಂತರ 2020 ಪ್ರಸಕ್ತ ವರ್ಷ ಸತತ ವರುಣನ ಕೃಪೆಗೆ ಬಹುತೇತ ಎಲ್ಲ ಕೆರೆಗಳು ತುಂಬಿವೆ. ಪ್ರತಿ ವರ್ಷ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ಸದಾ ಗಂಗಾಮಾತೆ ತುಂಬಿ ಹರಿಯುತ್ತಿರಲಿ ಎಂದು ಹೇಳಿದರು.
    ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಂತೇಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀಮಂತ ಇಂಡಿ, ಜಿ.ಎಸ್.ಪೂಜಾರಿ, ಬಿ.ಬಿ. ಗಡ್ಡದ, ಗುರನಗೌಡ ಪಾಟೀಲ, ಗುರಪ್ಪ ಪೂಜಾರಿ, ಗುರಪ್ಪ ರೂಗಿ, ಅಣ್ಣಪ್ಪಗೌಡ ಪಾಟೀಲ, ಶ್ರೀಶೈಲ ಜೇವೂರ, ಶ್ರೀನಿವಾಸ ಕಂದಗಲ್, ಸಂಗಪ್ಪ ಕಡಿಮನಿ, ರಫೀಕ್ ಸೋೆಘರ್, ಗುರುನಾಥ ಬಗಲಿ, ರಮೇಶ ಭೋಸ್ಲೆ, ಶಿವಾನಂದ ಪಾಟೀಲ, ಪವನ ಕುಲಕರ್ಣಿ ಸೇರಿ ಸಾವಿರಾರು ಭಕ್ತರು ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts