More

    ಆಯೋಗದ ನಿಯಮ ಪಾಲಿಸುವಂತೆ ಸಲಹೆ, ಡಿಸಿಗಳಿಗೆ ನಿರ್ದೇಶನ ನೀಡಲು ಸಭಾಪತಿ ಪತ್ರ

    ಹುಬ್ಬಳ್ಳಿ: ಲೋಕಸಭಾ ಚುನಾವಣೆ 2024ರ ಹಿನ್ನಲೆಯಲ್ಲಿ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಸಂಹಿತೆ ಹೆಸರಲ್ಲಿ ಎಲ್ಲ ಸವಲತ್ತುಗಳಿಗೆ ಕಡಿವಾಣ ಹಾಕಿರುವುದು ಸರಿಯಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಈ ಕುರಿತು ಸರ್ಕಾರದ ಮುಖ್ಯ ಕಾರ್ಯದಶಿರ್ಗೆ ಪತ್ರ ಬರೆದಿರುವ ಅವರು, ಜಿಲ್ಲೆಯ ಸರ್ಕಾರಿ ವಸತಿ ಗೃಹಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ (ಡಿಸಿ) ಸುಪದಿರ್ಗೆ ನೀಡಲಾಗಿದೆ. ಇವುಗಳಲ್ಲಿ ರಾಜಕೀಯ ಪಗಳ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿರುವುದು ಸರಿ.

    ಆದರೆ, ವಿಷಾದದ ಸಂಗತಿ ಎಂದರೆ ನೀತಿ ಸಂಹಿತೆ ಹೆಸರಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸರ್ಕಾರಿ ಅತಿಥಿ ಗೃಹಗಳಿಗೆ ಬೀಗಮುದ್ರೆ ಹಾಕಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.

    ಭಾರತೀಯ ಚುನಾವಣಾ ಆಯೋಗದ ಸಚಿವಾಲಯ ಹೊರಡಿಸಿರುವ ನೀತಿ ಸಂಹಿತೆ ಜಾರಿ ಪತ್ರ ಕ್ರಮ ಸಂಖ್ಯೆ: ನಂ. 437/6/ಐಎನ್ಎಸ್ಟಿ/ಇಸಿಐ/ಎ್ಯುಎನ್ಸಿಟಿ/ಎಂಸಿಸಿ/2024, ದಿನಾಂಕ. 02.01.2024ರಲ್ಲಿ ಸೂಚಿಸಿರುವಂತೆ ಸರ್ಕಾರಿ ಅತಿಥಿ ಗೃಹಗಳನ್ನು ರಾಜಕೀಯ ಪಗಳು/ ಅಭ್ಯಥಿರ್ಗಳು ಚುನಾವಣಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಳಕೆ ಮಾಡಲು ನಿರ್ಬಂಧಿಸಲಾಗಿದೆ.

    ಆದರೆ, ಸರ್ಕಾರಿ ಬಂಗಲೆಗಳನ್ನು ರಾಜಕೀಯ ಚಟುವಟಿಕೆಗಳಿಗೆ ಹೊರತಾಗಿ ತಾತ್ಕಾಲಿಕವಾಗಿ (ಪ್ರತಿ ವ್ಯಕ್ತಿ 48 ಗಂಟೆ ಮೀರದಂತೆ) ವಾಸಕ್ಕಾಗಿ ಮತ್ತು ಚುನಾವಣಾ ಚಟುವಟಿಕೆಗೆ ಹೊರತಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಈ ವಿಷಯದ ಗಂಭೀರತೆಯನ್ನು ಅರಿತು ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ತಾವು ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದ ಸಚಿವಾಲಯದಿಂದ ಹೊರಡಿಸಿರುವ ಸೂಚನೆಗಳನ್ನು ಪಾಲಿಸುವಂತೆ ಅಗತ್ಯ ನಿರ್ದೇಶನ ನೀಡುವಂತೆ ಹೊರಟ್ಟಿ ಅವರು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts