More

    2014ರಲ್ಲಿ ಭರವಸೆ 2019ರಲ್ಲಿ ನಂಬಿಕೆ 2024ರಲ್ಲಿ ಗ್ಯಾರಂಟಿ

    ನಲ್ಬಾರಿ (ಅಸ್ಸಾಂ): ‘ನಾವು ಜನರ ಬಳಿಗೆ 2014ರಲ್ಲಿ ಭರವಸೆಯೊಂದಿಗೆ ಹೋದೆವು. 2019ರ ವೇಳೆಗೆ ನಂಬಿಕೆಯೊಂದಿಗೆ ತೆರಳಿದೆವು. ಈ ಬಾರಿ, ಅಂದರೆ 2024ರಲ್ಲಿ ಗ್ಯಾರಂಟಿಯೊಂದಿಗೆ ಹೋಗುತ್ತಿದ್ದೇವೆ…’

    ಇದು ಕೇಂದ್ರ ಮಟ್ಟದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ ಪರಿ. ನಲ್ಬಾರಿಯ ಬೋರ್ಕರಾ ಮೈದಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಮುಂದಿನ 5 ವರ್ಷ ದೇಶಾದ್ಯಂತ ಯಾವುದೇ ತಾರತಮ್ಯ ಇಲ್ಲದೇ ಎಲ್ಲರಿಗೂ ಉಚಿತ ರೇಷನ್ ನೀಡಲಾಗುವುದು. 70 ವರ್ಷ ಮೀರಿದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

    ತ್ರಿಪುರಾದಲ್ಲೂ ವಾಗ್ದಾಳಿ: ನಂತರ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಲೂಟ್ ಈಸ್ಟ್ (ಈ ರಾಜ್ಯಗಳನ್ನು ಲೂಟಿ ಮಾಡುವ) ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿತ್ತು. ಬಿಜೆಪಿ ಈಗ ಆಕ್ಟ್ ಈಸ್ಟ್ (ಅಭಿವೃದ್ಧಿ ಕಾರ್ಯ ಕೈಗೊಳ್ಳುವ) ನೀತಿ ಅಳವಡಿಸಿಕೊಂಡಿದೆ. ಭಾರತದಲ್ಲಿ ಬಡವರಿಗಾಗಿ 3 ಕೋಟಿ ಮನೆಗಳನ್ನು ನಿರ್ವಿುಸುತ್ತಿದ್ದು, ಅದರಲ್ಲಿ ತ್ರಿಪುರಾದ ಜನರಿಗೂ ಪ್ರಯೋಜನವಾಗಲಿದೆ. ಮೊಬೈಲ್ ಬಿಲ್ ಅನ್ನು ತಿಂಗಳಿಗೆ 500 ರೂ.ಗೆ ಇಳಿಸಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ 5000 ರೂ. ಬಿಲ್ ಬರುತ್ತಿತ್ತು’ ಎಂದರು.

    ರಾಹುಲ್ ಪ್ರತಿಸ್ಪರ್ಧಿ ವಿರುದ್ಧ ಅತಿ ಹೆಚ್ಚು ಕ್ರಿಮಿನಲ್ ಕೇಸ್

    ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಕಣದಲ್ಲಿರುವ ಉಳಿದೆಲ್ಲ ಅಭ್ಯರ್ಥಿಗಳಿಗಿಂತ ವಯನಾಡ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ಕೆ. ಸುರೇಂದ್ರನ್ ಅತಿ ಹೆಚ್ಚು ಕ್ರಿಮಿನಲ್ ಕೇಸ್ ಹೊಂದಿದ್ದಾರೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್್ಸ (ಎಡಿಆರ್) ವರದಿ ಈ ವಿಷಯವನ್ನು ಬಹಿರಂಗಪಡಿಸಿದೆ.

    2014ರಲ್ಲಿ ಭರವಸೆ 2019ರಲ್ಲಿ ನಂಬಿಕೆ 2024ರಲ್ಲಿ ಗ್ಯಾರಂಟಿ

    ಈ ಹಂತದಲ್ಲಿ ಒಟ್ಟು 1192 ಅಭ್ಯರ್ಥಿಗಳಿದ್ದು, ಆ ಪೈಕಿ 250 ಅಭ್ಯರ್ಥಿಗಳು, ಅಂದರೆ ಶೇಕಡ 21ರಷ್ಟು ಜನರು ಕ್ರಿಮಿನಲ್ ಕೇಸ್ ಹೊಂದಿದ್ದಾರೆ. ಶೇಕಡ 14ರಷ್ಟು ಅಭ್ಯರ್ಥಿಗಳ ಮೇಲೆ ಗಂಭೀರ ಅಪರಾಧ ಪ್ರಕರಣಗಳಿವೆ. ಮೂವರು ಕೊಲೆ ಆರೋಪವನ್ನೂ ಎದುರಿಸುತ್ತಿದ್ದಾರೆ. ರಾಜಸ್ಥಾನದ ಅಜ್ಮೇರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಚಂದ್ರ ಚೌಧರಿ ಮೇಲೆ ಅತ್ಯಾಚಾರ ಪ್ರಕರಣ ಇದೆ. 21 ಅಭ್ಯರ್ಥಿಗಳು ದ್ವೇಷ ಭಾಷಣದ ಆರೋಪ ಎದುರಿಸುತ್ತಿದ್ದಾರೆ. ಬಿಜೆಪಿಯ 69 ಅಭ್ಯರ್ಥಿಗಳಲ್ಲಿ 31 ಅಭ್ಯರ್ಥಿಗಳು, ಕಾಂಗ್ರೆಸ್​ನ 68 ಅಭ್ಯರ್ಥಿಗಳ ಪೈಕಿ 35, ಸಿಪಿಐನ ಎಲ್ಲ ಐವರು, ಎಸ್ಪಿಯ ಎಲ್ಲ ನಾಲ್ವರು, ಶಿವಸೇನೆಯ ಮೂವರ ಪೈಕಿ ಇಬ್ಬರು, ಜೆಡಿಯುನ ಐವರ ಪೈಕಿ ಇಬ್ಬರು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳೇ ಸಲ್ಲಿಸಿರುವ ಅಫಿಡವಿಟ್​ಗಳನ್ನು ವಿಶ್ಲೇಷಿಸಿ ಎಡಿಆರ್ ಈ ವರದಿ ಸಿದ್ಧಪಡಿಸಿದೆ.

    ರ‍್ಯಾಲಿಯಲ್ಲಿಯಲ್ಲೇ ರಾಮನಿಗೆ ಮೋದಿ ಗೌರವ

    ನಲ್ಬಾರಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿರುವ ಹೊತ್ತಿನಲ್ಲೇ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಹಣೆ ಮೇಲೆ ಸೂರ್ಯ ತಿಲಕ ಬೀಳುವ ಸಮಯ ಇತ್ತು. ಇದನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ‘ಎಲ್ಲರೂ ಮೊಬೈಲ್ ಫೋನ್​ನ ಟಾರ್ಚ್ ಆನ್ ಮಾಡಿ. ಈ ಮೂಲಕ ನಾವು ರಾಮನಿಗೆ ಗೌರವ ಸಮರ್ಪಿಸೋಣ’ ಎಂದರು. ಎಲ್ಲರಿಂದ ಜೈಶ್ರೀರಾಂ ಘೊಷಣೆ ಮತ್ತು ರಾಮ ಲಕ್ಷ್ಮಣ ಜಾನಕಿ, ಜೈ ಬೋಲೋ ಹನುಮಾನ ಕಿ ಘೊಷಣೆ ಕೂಗಿಸಿದರು. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಮತ್ತಿತರ ನಾಯಕರು ಕೂಡ ತಮ್ಮ ಮೊಬೈಲ್ ಫೋನ್ ಟಾರ್ಚ್ ಆನ್ ಮಾಡಿ ಕೈಬೀಸುತ್ತಿರುವುದು ಕಂಡುಬಂತು.

    ಡಿಕೆಶಿ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದ ರಾಜೀವ್

    ತಿರುವನಂತಪುರಂ: ಕೇರಳದ ಅಭಿವೃದ್ಧಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೊಡುಗೆ ಏನು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್ ಚಂದ್ರಶೇಖರ್, ‘ಜಾಮೀನಿನ ಮೇಲೆ ಹೊರಗೆ ಬಂದಿರುವ ಡಿಕೆಶಿಯಂತಹ ಭ್ರಷ್ಟ ರಾಜಕಾರಣಿಯ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

    ತಿರುವನಂತಪುರದಲ್ಲಿ ಗೆದ್ದರೆ ಯಾವ್ಯಾವ ಕೆಲಸಗಳನ್ನು ಮಾಡುತ್ತೇನೆ ಎಂಬುದಾಗಿ ಚುನಾವಣಾ ಪ್ರಚಾರದ ಆರಂಭದಿಂದಲೂ ಜನರಿಗೆ ವಿವರಿಸುತ್ತಿದ್ದೇನೆ. ಕೇರಳದ ಅಭಿವೃದ್ಧಿಗಾಗಿ ನನ್ನ ವಿಜನ್ ಡಾಕ್ಯುಮೆಂಟ್ ಅನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ. ಆಯ್ಕೆಯಾದ ನಂತರ ಐದು ವರ್ಷಗಳಲ್ಲಿ ಅದನ್ನು ಜಾರಿಗೆ ತರುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

    ರಾಹುಲ್-ಪ್ರಿಯಾಂಕಾ ಅಮುಲ್ ಬೇಬಿಗಳು

    ನವದೆಹಲಿ: ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅಮುಲ್ ಬೇಬಿಗಳು ಎಂದು ಅಸ್ಸಾಂ ಸಿಎಂ ಹಿಮಂತ ಬಿಶ್ವ ಶರ್ಮಾ ಟೀಕಿಸಿದ್ದಾರೆ.

    2014ರಲ್ಲಿ ಭರವಸೆ 2019ರಲ್ಲಿ ನಂಬಿಕೆ 2024ರಲ್ಲಿ ಗ್ಯಾರಂಟಿ

    ‘ನೀವು ಅಸ್ಸಾಂ ಜನತೆ ಯಾಕೆ ಗಾಂಧಿ ಕುಟುಂಬದ ಅಮುಲ್ ಬೇಬಿಗಳನ್ನು ನೋಡಲು ಹೋಗುತ್ತೀರಿ? ಅವರನ್ನು ನೋಡಿದರೆ ಅವರು ಪ್ರಚಾರಕ್ಕೆ ಸೂಕ್ತವಲ್ಲ ಅನಿಸುತ್ತದೆ. ಜನರು ಅವರನ್ನು ನೋಡುವ ಬದಲು ಕಾಜಿರಂಗಕ್ಕೆ ಹೋಗಿ ಹುಲಿ-ಘೇಂಡಾಮೃಗಗಳನ್ನು ನೋಡುವುದು ಉತ್ತಮ’ ಎಂದು ವ್ಯಂಗ್ಯವಾಡಿದ್ದಾರೆ.

    2014ರಲ್ಲಿ ಭರವಸೆ 2019ರಲ್ಲಿ ನಂಬಿಕೆ 2024ರಲ್ಲಿ ಗ್ಯಾರಂಟಿ

    ಅಮಿತ್ ಷಾ ಶ್ರೀರಾಮಪೂಜೆ: ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮಂಗಳವಾರ ಸಂಜೆ ರೋಡ್​ಶೋ ನಡೆಸಿ ಅಲ್ಲಿಯೇ ತಂಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬುಧವಾರ ಬೆಳಗ್ಗೆ ರಾಮನವಮಿ ಅಂಗವಾಗಿ ಅಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಾಗಪುರಕ್ಕೆ ತೆರಳಿದರು.

    ಬಾಲಕಿ ಅಪಹರಿಸಿ ಜಮೀನು ಬರೆಸಿಕೊಂಡ ಡಿಕೆ ಶಿವಕುಮಾರ್: ಮಾಜಿ ಪ್ರಧಾನಿ ದೇವೇಗೌಡ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts