More

    ಮಾದಿನಕಟ್ಟೆ ಪುನಶ್ಚೇತನ ಭರವಸೆ

    ಕಡೂರು: ಚಿಕ್ಕಿಂಗಳ, ರಾಂಪುರದ ಗೇಟ್ ಬಳಿಯಿರುವ ಮಾದಿನಕಟ್ಟೆ ಪುನಶ್ಚೇತನಗೊಳಿಸಿ ರೈತರು, ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವುದಾಗಿ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ಚಿಕ್ಕ್ಕಿಂಗಳ, ಹೆಳವರಹಟ್ಟಿ, ರಾಂಪುರ, ಪಾರ್ವತಿ ನಗರದ ಗ್ರಾಮಸ್ಥರು, ಗ್ರಾಪಂ ಸದಸ್ಯರು, ರೈತರು ಭಾನುವಾರ ಪಟ್ಟಣದಲ್ಲಿ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಮಾದನಕಟ್ಟೆ ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದರು.
    ಐತಿಹಾಸಿಕ ಮದಗದಕೆರೆ ನೀರು ಈ ಹಿಂದೆ ಮಾದಿನಕಟ್ಟೆಗೆ ಹರಿಯುತ್ತಿದ್ದು, ಕಟ್ಟೆ ಅನೇಕ ವರ್ಷಗಳಿಂದ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ನಾನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಅಂದಾಜು ವೆಚ್ಚದ ಮಾಹಿತಿ ತರಿಸಿಕೊಂಡು ಅನುದಾನ ಒದಗಿಸಿಕೊಟ್ಟು ಕಾಮಗಾರಿಗೆ ಚುರುಕು ನೀಡುತ್ತೇನೆ ಎಂದು ಹೇಳಿದರು.
    ಗ್ರಾಮಸ್ಥರು ಅಂದಾಜು 40 ಲಕ್ಷ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇರುವುದಾಗಿ ಮನದಟ್ಟು ಮಾಡಿದಾಗ, ಶಾಸಕ ಮಾತನಾಡಿ, ಒಂದು ವಾರದೊಳಗೆ ಕಟ್ಟೆಯನ್ನು ಪುನಶ್ಚೇತನ ಮಾಡಿ ಕೊಡುತ್ತೇನೆ. ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಬೇಕಾದರೆ 6 ತಿಂಗಳು ಕಾಯಬೇಕಾಗುತ್ತದೆ ಎಂದು ತಿಳಿಸಿದರು. ನಂತರ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗೆ ಮಾಹಿತಿ ನೀಡಿ, ಮಾದಿನಕಟ್ಟೆ ದುರಸ್ತಿ ಪಡಿಸುವಂತೆ ತಿಳಿಸಿದರು.
    ಚಿಕ್ಕ್ಕಿಂಗಳ ಗ್ರಾಪಂ ಸದಸ್ಯ ಪ್ರಕಾಶ್‌ನಾಯ್ಕ, ಬಸವರಾಜ್, ಸೇವಾನಾಯ್ಕ, ಶಿವಣ್ಣ, ದಾಸಯ್ಯನಗುತ್ತಿ ಚಂದ್ರಪ್ಪ, ಮಲ್ಲಿಕಾರ್ಜುನ್, ರಾಂಪುರದ ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts