More

    ಹೊನ್ನಾಳಿ ಕೆಎಸ್ಸಾರ್ಟಿಸಿ ಡಿಪೋ ಸಿಬ್ಬಂದಿಗೆ ಕರೊನಾ

    ಹೊನ್ನಾಳಿ: ಪಟ್ಟಣದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕರು, ನಿರ್ವಾಹಕರು, ಮೆಕಾನಿಕ್ ಹಾಗೂ ಸ್ವೀಪರ್ ಸೇರಿದಂತೆ ಒಟ್ಟು 14 ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದೆ.

    ಡಿಪೊದಲ್ಲಿ ಕೆಲಸ ಮಾಡುವ ಪಟ್ಟಣದ ದುರ್ಗಿಗುಡಿ ಹಾಗೂ ಎಚ್.ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ತಲಾ ಇಬ್ಬರು, ಪಟ್ಟಣದ ಖಾಜಿ ಮೊಹಲ್ಲಾ, ದಿಡಗೂರು, ಹೊರ ತಾಲೂಕಿನ ಹರಪನಹಳ್ಳಿ, ಹರಿಹರ, ಹಿರೇಕೆರೂರು, ರಟ್ಟಿಹಳ್ಳಿ, ಮಾಸೂರು, ರಾಣೇಬೆನ್ನೂರು, ಶಿವಮೊಗ್ಗ, ಕಮ್ಮಾರಗಟ್ಟೆ ಗ್ರಾಪಂ ವ್ಯಾಪ್ತಿಯ ತಲಾ ಒಬೊಬ್ಬರಲ್ಲಿ ಒಟ್ಟು 14 ಜನರಲ್ಲಿ ಕರೊನಾ ದೃಢಪಟ್ಟಿದೆ.

    ಜು.7ರಂದು ಇವರೆಲ್ಲರ ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಪ್ರಯೋಗಾಯಲಕ್ಕೆ ಕಳಿಸಲಾಗಿತ್ತು. ಭಾನುವಾರ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ ತಕ್ಷಣ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಡಿಪೋ ಸೀಲ್‌ಡೌನ್‌ಗೆ ಸಿಬ್ಬಂದಿ ಮನವಿ: ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ಡಿಪೋನಲ್ಲಿ ಕಾರ್ಯ ನಿರ್ವಹಿಸುವ ಸಹೋದ್ಯೋಗಿಗಳಿಗೆ ಕರೊನಾ ದೃಢಪಟ್ಟಿರುವುದರಿಂದ ಕೆಲ ಕಾಲ ಡಿಪೋ ಸೀಲ್‌ಡೌನ್ ಮಾಡುವಂತೆ ಸಿಬ್ಬಂದಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಲ್ಲಿ ಮನವಿ ಮಾಡಿದರು.

    ಈ ವೇಳೆ ಮಾತನಾಡಿದ ಶಾಸಕ ಪ್ರತಿಕ್ರಿಯಿಸಿ, ಯಾರೂ ಭಯಪಡುವ ಅಗತ್ಯವಿಲ್ಲ. ಸಧ್ಯ ಇಡೀ ಡಿಪೋವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಿದ್ದಾರೆ,ನೀವು ಯಾರೂ ಹೆದರಬೇಡಿ,ಯಾರಿಗೂ ಏನು ಆಗಲ್ಲ ಆತ್ಮವಿಶ್ವಾಸದಿಂದಿರಿ ಹಾಗೂ ಕರೋನಾ ಸೋಂಕಿತರು ಸಧ್ಯ ಕೆಲಸಗಳಿಗೆ ಹಾಜರಾಗುವುದಿಲ್ಲ ಎಂದು ಸಿಬ್ಬಂಧಿಗಳಿಗೆ ಸಮಧಾನ ಹೇಳಿದರು.

    ಇಡೀ ಡಿಪೋಗೆ ಸ್ಯಾನಿಟೈಸ್: ಇಲ್ಲಿನ ಸರ್ಕಾರಿ ಬಸ್‌ಡಿಪೋನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 14 ಸಿಬ್ಬಂದಿಗಳಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಇಡೀ ಬಸ್ ಡಿಪೋಗೆ ಸ್ಯಾನಿಟೈಸ್ ಮಾಡಿದರು.

    ಸೀಲ್‌ಡೌನ್: ಪಟ್ಟಣದ 3 ಹಾಗೂ ತಾಲೂಕಿನ 4 ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದೆಂದು ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts