More

    ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ

    ಹೊನ್ನಾಳಿ: ಮಲೆನಾಡು ಭಾಗದಲ್ಲಿ ಒಂದು ವಾರದಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ನೀರಿನ ಮಟ್ಟ ದಿನೇದಿನೆ ಏರಿಕೆಯಾಗುತ್ತಿದೆ.

    ಜೂನ್‌ನಲ್ಲಿ ಬಿದ್ದ ಮಳೆಗೆ ಬಹುತೇಕ ರೈತರು ಬಿತ್ತನೆ ಮಾಡಿದ್ದರು. ನಂತರದ ದಿನಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಜುಲೈ ಮೊದಲ ವಾರ ಮಳೆ ಬಂದಿದ್ದರಿಂದ ಬಾಡುವ ಸ್ಥಿತಿಯಲ್ಲಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ.

    ಸ್ಥಳಾಂತರಕ್ಕೆ ಸಿದ್ಧತೆ: ಚಿಕ್ಕ ಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

    ಮಳೆ ವಿವರ: ಹೊನ್ನಾಳಿ 7.0 ಮಿ.ಮೀ., ಸವಳಂಗ 49.0, ಬೆಳಗುತ್ತಿ 34.4, ಹರಳಹಳ್ಳಿ 26.8, ಗೋವಿನಕೋವಿ 27.4, ಕುಂದೂರು 17.2, ಸಾಸ್ವೇಹಳ್ಳಿಯಲ್ಲಿ 14.8 ಮಿ.ಮೀ. ಮಳೆಯಾಗಿದೆ. ಪ್ರಸ್ತುತ ತುಂಗಭದ್ರಾ ನದಿ ನೀರಿನ ಮಟ್ಟ 8.150 ಮೀಟರ್ ಇದ್ದು, 12 ಮೀಟರ್‌ಗೆ ತಲುಪಿದರೆ ಅಪಾಯದ ಮಟ್ಟ ಮೀರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts