More

    19ರಂದು ಎಲ್ಲ ತಾಲೂಕಿನಲ್ಲೂ ಬೃಹತ್ ಇ-ಲೋಕ್ ಅದಾಲತ್

    ಚಿಕ್ಕಮಗಳೂರು: ಕರೊನಾ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಮೊಕದ್ದಮೆಗಳ ತ್ವರಿತ ವಿಲೇವಾರಿಗೆ ಸೆ.19ರಂದು ಬೃಹತ್ ಇ-ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಶುಭಾ ಗೌಡರ್ ತಿಳಿಸಿದರು.

    ಹೈಕೋರ್ಟ್ ನಿರ್ದೇಶನದಂತೆ 19ರಂದು ಜಿಲ್ಲೆಯ ಎಲ್ಲ ತಾಲೂಕಿನ ನ್ಯಾಯಾಲಯ ಸಂಕೀರ್ಣಗಳಲ್ಲಿ ಅದಾಲತ್ ನಡೆಯಲಿದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಮುಂಚಿತವಾಗಿ ವಕೀಲರ ಮೂಲಕ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರವಾಣಿ ಕರೆ ಮಾಡಿ ಇಲ್ಲವೆ ಇ-ಮೇಲ್ ಮೂಲಕ ಸಂರ್ಪಸಿ ವಿಡಿಯೋ ಸಂವಾದದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ವಿಡಿಯೋ ಕಾನ್ಪರೆನ್ಸ್ ಮೂಲಕ ಈಗಾಗಲೇ ಇತರ ನ್ಯಾಯಾಲಯಗಳಲ್ಲಿ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ. ಆ ನ್ಯಾಯಾಲಯಗಳಲ್ಲಿ ಒಬ್ಬರು ನ್ಯಾಯಾಧೀಶರು, ಒಬ್ಬರು ವಕೀಲರು, ಇಬ್ಬರು ಸಂಧಾನಕಾರರು ಇರುವರು ಎಂದು ತಿಳಿಸಿದರು.

    ಕಕ್ಷಿದಾರರು ತಮ್ಮ ವಕೀಲರು ಅಥವಾ ಮನೆಯಲ್ಲಿ ಮೊಬೈಲ್ ಅಥವಾ ಲ್ಯಾಪ್​ಟಾಪ್ ಮೂಲಕ ಪ್ರಕರಣದ ಕುರಿತು ಸಂಧಾನಕಾರರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ವ್ಯಾಜ್ಯಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದರಿಂದ ಸಮಯ ಹಾಗೂ ಹಣ ಉಳಿಯುವ ಜತೆಗೆ ಪ್ರಕರಣಗಳು ಶೀಘ್ರ ಬಗೆಹರಿಯಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts