More

    ಭವಿಷ್ಯದಲ್ಲಿ ಮನೆಯ ಕಟ್ಟಡಗಳ ವಿನ್ಯಾಸ ಬದಲು

    | ಬೇಲೂರು ಹರೀಶ ಬೆಂಗಳೂರು

    ಜನರ ಜೀವನಶೈಲಿ ಬದಲಾದಂತೆ ಮನೆಯ ಕಟ್ಟಡಗಳ ವಿನ್ಯಾಸವೂ ಕಾಲಕ್ಕೆ ತಕ್ಕಂತೆ ಬದಲಾಗಲಿವೆ. ಬರುವ ದಿನಗಳಲ್ಲಿ ಚಿಕ್ಕ ವಸತಿ ಸಮುಚ್ಚಯಗಳಿರಲಿ, ಗಗನಚುಂಬಿ ಕಟ್ಟಡಗಳಿರಲಿ ಹಾಗೂ ವಾಸದ ಮನೆಗಳಿರಲಿ ಈ ಎಲ್ಲ ಕಟ್ಟಡಗಳ ವಿನ್ಯಾಸದಲ್ಲಿ ಮಹತ್ವ ಬದಲಾವಣೆ ಆಗುವ ಸಾಧ್ಯತೆಯಿದೆ. ಕರೊನಾ ಕಾರಣದಿಂದ ಹೆಚ್ಚು ಜನಸಂದಣಿ ಇರದ ಮತ್ತು ಆರೋಗ್ಯಕರ ಚಟುವಟಿಕೆಗಳಿಗೆ ಬಳಸುವ ಕಟ್ಟಡಗಳು ಮುಂದೆ ತಲೆ ಎತ್ತಲಿದೆ. ಭವಿಷ್ಯದಲ್ಲಿ ಗಗನಚುಂಬಿ ಕಟ್ಟಡಗಳು ಕೇವಲ ವಾಣಿಜ್ಯ ಉದ್ದೇಶಕ್ಕೆ ಮಾತ್ರವಲ್ಲದೆ ವಸತಿ, ವಾಣಿಜ್ಯ ಹಾಗೂ ಆತಿಥ್ಯ ಉದ್ದೇಶಗಳಿಗೂ ಬಳಸುವ ಸಲುವಾಗಿ ವಿನ್ಯಾಸಗಳನ್ನು ರಚಿಸಲಾಗುತ್ತಿದೆ. ಇದನ್ನು ಮನಗಂಡಿರುವ ಸರ್ಕಾರ ಸೇರಿ ಇನ್ನಿತರ ಡೆವಲಪರ್ಸ್ ಸಂಸ್ಥೆಗಳು, ಕಚೇರಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಟೌನ್​ಶಿಪ್​ಗಳನ್ನು ರಚನೆ ಮಾಡಲು ಚಿಂತಿಸಿವೆ. ಅಲ್ಲದೆ, ಮುಂದಿನ ವರ್ಷಗಳಲ್ಲಿ 2 ಹಾಗೂ 3ನೇ ಹಂತದ ಪ್ರಮುಖ ನಗರಗಳಲ್ಲಿ ಟೌನ್​ಶಿಪ್​ಗಳಲ್ಲಿ ಮನೆ ಹೊಂದುವುದು ಜನರ ಪ್ರಮುಖ ಆದ್ಯತೆ ಆಗಿರುವ ಹಿನ್ನೆಲೆಯಲ್ಲಿ ವಿಶೇಷ ವಿನ್ಯಾಸಗಳ ಮೂಲಕ ಮನೆಗಳನ್ನು ನಿರ್ವಿುಸಲು ಡೆವಲಪರ್​ಗಳು ಚಿಂತನೆ ನಡೆಸುತ್ತಿದ್ದಾರೆ.

    ಎಲ್ಲರ ಅಭಿಲಾಷೆ

    ಮನೆ ಎಂದರೆ ಎಲ್ಲ ಗೋಜಿಲಿನಿಂದ ದೂರ ಉಳಿಸುವ ಜಾಗ, ಎಲ್ಲೇ ಹೋದರೂ ಮನಸ್ಸು ಮತ್ತೆ ಮತ್ತೆ ಬಯಸುವುದು ಮನೆಯನ್ನು. ಮನೆ ಎಂದರೆ ಆರಾಮಾಗಿರುವ ಜಾಗ. ಆದ್ದರಿಂದ, ಸಾಧ್ಯವಾದಷ್ಟು ಜನರು ವಿಶೇಷ ವಿನ್ಯಾಸದ ಮೂಲಕ ನಿರ್ವಿುಸಲು ಆದ್ಯತೆ ನೀಡಲಾಗುತ್ತಿದೆ. ಎಲ್ಲ ಒತ್ತಡಗಳಿಂದ ಕಳೆಯಲು ಮನೆ ಚೆಂದವಿರಬೇಕು ಎಂಬುದು ಎಲ್ಲರ ಅಭಿಲಾಷೆ. ಮನೆ ಸುಂದರವಾಗಿ ಇರಬೇಕು. ಮನೆಯ ವಿನ್ಯಾಸದ ನಮ್ಮ ಅಭಿರುಚಿಯೂ ತೋರಿಸುತ್ತದೆ. ಆದ್ದರಿಂದ, ಅದು ತುಂಬಾ ಮುಖ್ಯವಾಗುತ್ತದೆ ಎನ್ನುತ್ತಾರೆ ತಂತ್ರಜ್ಞರು.

    ಆರೋಗ್ಯಕ್ಕೆ ಆದ್ಯತೆ

    ಅಪಾರ್ಟ್​ವೆುಂಟ್, ಮನೆಗಳು ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಆರೋಗ್ಯಕಾರಿ ಜೀವನಶೈಲಿ ನಡೆಸುವುದು ಜನರ ಪ್ರಮುಖ ಆದ್ಯತೆ. ಪರಿಸರಸ್ನೇಹಿ ಉದ್ದೇಶಗಳನ್ನು ಇಟ್ಟುಕೊಂಡು ಮನೆ ನಿರ್ವಣಕ್ಕೆ ಜನರು ಆಲೋಚಿಸುತ್ತಿದ್ದಾರೆ. ಭವಿಷ್ಯದಲ್ಲಿ ಸ್ವಚ್ಛ ಗಾಳಿ ಮತ್ತು ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡುತ್ತಿದ್ದಾರೆ. ಕಟ್ಟಡಗಳ ಒಳಗೆ ವಿಶಾಲವಾದ ಜಾಗ, ಮಾಲಿನ್ಯ ನಿಯಂತ್ರಣ ಅಗತ್ಯ ಕ್ರಮ ಸೇರಿ ಭೌಗೊಳಿಕ ಅಗತ್ಯಗಳ ತಕ್ಕಂತೆ ವಿನ್ಯಾಸ ಮೂಲಕ ಕಟ್ಟಡಗಳನ್ನು ನಿರ್ವಿುಸುವ ಬಗ್ಗೆ ಚಿಂತನೆಯಿದೆ.

    ಮೊದಲೆಲ್ಲಾ ಮನೆಯ ಒಳಗಿನ ವಿನ್ಯಾಸ ಅಂದಾಕ್ಷಣ ಟಿವಿ ಇದ್ದರೆ ಅದಕ್ಕೊಂದು ಟಿವಿ ಸ್ಟಾ್ಯಂಡ್, ಒಂದೆರಡು ಕಪಾಟುಗಳು ಬಿಟ್ಟರೆ ವಿನ್ಯಾಸ ಅಂತೇನೂ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮನೆ ಅಂದಾಕ್ಷಣ ಮನೆಯ ಒಳಾಂಗಣ ವಿನ್ಯಾಸಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಟಿವಿ, ಕಪಾಟುಗಳು, ಟೀಪಾಯಿ, ಕಂಪ್ಯೂಟರ್ ಟೇಬಲ್, ಡೈನಿಂಗ್ ಟೇಬಲ್ ಸೇರಿ ಇನ್ನಿತರ ಸೌಲಭ್ಯಗಳು ಇರಬೇಕು ಎಂದು ಯೋಚಿಸಲಾಗುತ್ತಿದೆ. ಕೆಲವರು ವಿನ್ಯಾಸಕಾರರ ಕಲ್ಪನೆಯಂತೆ ಮನೆ ನಿರ್ವಣಕ್ಕೆ ಮುಂದಾಗುತ್ತಿದ್ದಾರೆ. ಖಾಲಿ ಜಾಗಗಳನ್ನು ಹೇಗೆ ವಿಶೇಷವಾಗಿ ಬಳಸಬಹುದು, ಮನೆಯೊಳಗಿನ ಖಾಲಿ ಜಾಗವನ್ನು ಅಲಂಕರಿಸುವುದು, ಪೀಠೋಪಕರಣಗಳನ್ನು ಜೋಡಿಸುವುದು, ಗೋಡೆಯ ಬಣ್ಣಗಳಿಗೆ ಅನುಗುಣವಾಗಿ ಕಿಟಕಿ ಪರದೆಗಳನ್ನು ಆಯ್ಕೆ ಸೇರಿ ಇನ್ನಿತರ ಬಗ್ಗೆ ತಂತ್ರಜ್ಞರು ಸಲಹೆಗಳ ಆಧಾರದಲ್ಲಿ ಮನೆ ಗಳನ್ನು ನಿರ್ವಿುಸಲಾಗುತ್ತಿದೆ.

    ಪೂಜಾಗೃಹಕ್ಕೂ ವಿಶೇಷ ಮಹತ್ವ

    ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಪ್ರಕಾರ, ಪೂಜಾಗೃಹವು ಮನೆಯೊಂದರ ಅವಿಭಾಜ್ಯ ಅಂಗ. ಪ್ರಾರ್ಥನೆಯು ಒಂದು ವಿಧವಾದ ಧ್ಯಾನವೇ ಆಗಿದ್ದು, ಈ ಪ್ರಕ್ರಿಯೆಯು ನಮಗೆ ಮಾನಸಿಕ ಚೈತನ್ಯವನ್ನು ಒದಗಿಸುವುದು ಮಾತ್ರವಲ್ಲದೆ ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿಯೂ ಕೂಡ ಪ್ರಾರ್ಥನೆಯ ಅವಶ್ಯಕತೆ ಇದೆ. ಎಲ್ಲ ಹಿಂದೂ ಧರ್ವಿುಯರ ಮನೆಗಳಲ್ಲಿಯೂ ಸಹ, ಪೂಜಾಗೃಹ ಅಥವಾ ಪೂಜಾ ಕೊಠಡಿಯು ಇರಲೇಬೇಕು. ದೇವರ ಮನೆ ಅಥವಾ ಪೂಜೆ ಕೋಣೆಯು ಮನೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ಇದಕ್ಕೆ ಅಡುಗೆ ಮನೆ ಮತ್ತು ಮಲಗುವ ಕೋಣೆಗೆ ಇದ್ದಷ್ಟೇ ಮಹತ್ವವಿರುತ್ತದೆ. ಮನೆ ಮಾಡುವಾಗ ಅಥವಾ ಮನೆಯನ್ನು ಕಟ್ಟುವಾಗ ಪೂಜೆ ಕೋಣೆಯನ್ನು ಸಹ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತವೆ. ಅಲ್ಲದೆ ಹಬ್ಬ ಹರಿದಿನದಂದು ನಮ್ಮ ದೇವರ ಮನೆಯನ್ನು ಸಿಂಗರಿಸಿ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಈ ದೇವರ ಮನೆಯು ಮನೆಗೆ ಅಗತ್ಯವಾದ ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂಬ ಮನೋಭಾವ ಎಲ್ಲರಲ್ಲಿ ಇರುತ್ತದೆ. ಹಾಗಾಗಿಯೇ ದೇವರ ಮನೆಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts