More

    ಮೈಸೂರಿನಲ್ಲಿ ಹೋಳಿ ಸಡಗರ; ಬಣ್ಣದ ಲೋಕದಲ್ಲಿ ಮಿಂದೆದ್ದ ಯುವ ಸಮೂಹ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹಲವೆಡೆ ಜನರು ಸೋಮವಾರ ರಂಗುರಂಗಿನ ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.


    ಪರಸ್ಪರ ವಿವಿಧ ಬಗೆಯ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸಪಟ್ಟರು. ವಯಸ್ಸಿನ ಭೇದ-ಭಾವವಿಲ್ಲದೇ ಬಣ್ಣದ ಲೋಕದಲ್ಲಿ ಮುಳುಗೆದ್ದರು. ಚಿಣ್ಣರು, ಬಾಲಕ-ಬಾಲಕಿಯರು, ಯುವ ಜನರು ರಂಗಿನಾಟದಲ್ಲಿ ತಲ್ಲೀನರಾಗಿ ಸಂತಸದ ಕೇಕೆ ಹಾಕಿದರು


    ಉತ್ತಮ ಕರ್ನಾಟಕದಂತೆ ಇಡೀ ಊರಿಗೆ ಊರೇ ಓಕುಳಿಯಾಟದಲ್ಲಿ ಮೈಸೂರು ಸಕ್ರಿಯವಾಗಿರಲಿಲ್ಲ. ಕೆಲ ಬಡಾವಣೆಗಳು, ಬೀದಿಗಳಲ್ಲಿ ಮಾತ್ರ ಹೋಳಿ ರಂಗು ಕಂಡು ಬಂತು. ಜೈನ ಸಮುದಾಯ ಜನರು, ಪ್ರತಿಷ್ಠಿತ ಬಡಾವಣೆಗಳ ಕೆಲ ಭಾಗದ ಜನರು ಪರಸ್ಪರ ಬಣ್ಣ ಎರಚಿಕೊಂಡರು. ಪರಿಚಿತರು ಮತ್ತು ಸ್ನೇಹಿತರು, ಸಂಬಂಧಿಕರ ನಡುವೆ ಮಾತ್ರ ಈ ಬಣ್ಣದಾಟ ಸೀಮಿತವಾಗಿತ್ತು. ಉಳಿದ ಪ್ರದೇಶದಲ್ಲಿ ಹೋಳಿ ಸಂಭ್ರಮ ಕಂಡು ಬರಲಿಲ್ಲ. ಹೀಗಾಗಿ, ಎಂದಿನ ಜೀವನ ಶೈಲಿಯಲ್ಲಿಯೇ ಬಹುತೇಕರು ದಿನ ಕಳೆದರು. ಇನ್ನೂ ಕೆಲವರಿಗೆ ಹೋಳಿ ಹಬ್ಬದ ಕುರಿತು ಮಾಹಿತಿಯೇ ಇರಲಿಲ್ಲ.

    ಮೈಸೂರಿನಲ್ಲಿ ಹೋಳಿ ಸಡಗರ; ಬಣ್ಣದ ಲೋಕದಲ್ಲಿ ಮಿಂದೆದ್ದ ಯುವ ಸಮೂಹ


    ಕೆಲ ಪ್ರದೇಶಗಳಂತೂ ಹೋಳಿ ಆಚರಣೆ ಗಮನ ಸೆಳೆಯಿತು. ಯುವಕರು-ಯುವತಿಯರು ಪರಸ್ಪರ ತಮ್ಮ ಗೆಳೆಯ-ಗೆಳೆತಿಯರಿಗೆ ಬಣ್ಣದ ನೀರು, ಬಗೆಬಗೆಯ ಬಣ್ಣವನ್ನು ಹಾಕಿ ಹೋಳಿ ಸಂಭ್ರಮವನ್ನು ಹಂಚಿಕೊಂಡರು. ಯುವತಿಯರು ಅವರವರ ಮನೆಯಲ್ಲೇ ಮತ್ತು ಅಕ್ಕಪಕ್ಕದ ಮನೆಯ ಗೆಳತಿಯರಿಗೆ ಬಣ್ಣದ ನೀರು ಹಾಕಿ ಕುಣಿದಾಡಿದರು. ಕೆಲ ಯುವಕರು ಮೊಟ್ಟೆಗಳನ್ನು ತಮ್ಮ ಸ್ನೇಹಿತರ ತಲೆಗೆ ಹೊಡೆದು ಆನಂದಿಸಿದರು. ಬಿಸಿಲ ಬೇಗೆ ಈ ಹಬ್ಬದ ಉತ್ಸಾಹಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಲಿಲ್ಲ

    .
    ಬಹುತೇಕ ಶಾಲೆಗಳು ಬೇಸಿಗೆ ರಜೆ ಘೋಷಿಸಿರುವ ಹಿನ್ನೆಲೆ ಹಾಗೂ ಪರೀಕ್ಷೆ ನಡೆಯುತ್ತಿರುವ ಕಾರಣಕ್ಕೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಹೋಳಿ ರಂಗು ಕಾಣಲಿಲ್ಲ. ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜುಗಳಲ್ಲಿ ಹೋಳಿ ಹಬ್ಬದ ಸಡಗರ ಗೋಚರವಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts