More

    ಮುಖ್ಯಶಿಕ್ಷಕ ಗೈರು, ವಿದ್ಯಾರ್ಥಿಗಳ ಪ್ರತಿಭಟನೆ

    ಹೊಳಲ್ಕೆರೆ: ತಾಲೂಕಿನ ರಾಮಗಿರಿಯ ಕರಿಸಿದ್ದೇಶ್ವರ ಗ್ರಾಮಾಂತರ ಪ್ರೌಢಶಾಲೆ ಮುಖ್ಯಶಿಕ್ಷಕ ನಿರಂತರ ಗೈರು ಆಗುತ್ತಿದ್ದು, ಇದರಿಂದ ವಿದ್ಯಾಭ್ಯಶಕ್ಕೆ ಸಮಸ್ಯೆ ಆಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.

    ನಾವು ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಪಾಠನೇ ಮಾಡಿಲ್ಲ, ಪರೀಕ್ಷೆಯಲ್ಲಿ ಏನು ಬರಿಯಬೇಕು. ಕನ್ನಡ, ಇಂಗ್ಲಿಷ್, ಗಣಿತಕ್ಕೆ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರು ಬಂದರೆ ಅವರಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಇದರಿಂದ ಶೈಕ್ಷಣಿಕ ಪ್ರಗತಿಯಲ್ಲಿ ತೀವ್ರ ಹಿನ್ನೆಡೆ ಆಗಿದೆ ಎಂದು ಅಳಲು ತೋಡಿಕೊಂಡರು.

    ನಮ್ಮ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಮುಖ್ಯಶಿಕ್ಷಕರನ್ನು ವರ್ಗಾಯಿಸಿ, ಇಲ್ಲದಿದ್ದರೆ ನಮಗೆ ವರ್ಗಾವಣೆ ಪತ್ರ ಕೊಡಿ ಎಂದು ಪಟ್ಟುಹಿಡಿದರು.

    ವಿಷಯ ತಿಳಿದು ಶಾಲೆಗೆ ಆಗಮಿಸಿದ ಮುಖಂಡ ರಾಮಗಿರಿ ರಾಮಣ್ಣ ಇತರರು ಸಭೆ ನಡೆಸಿದರು.

    ಸಮಸ್ಯೆ ಏನೇ ಇದ್ದರೂ ಕುಳಿತು ಬಗೆಹರಿಸೋಣ. ಶಾಲೆ ತೊರೆಯುವ ಮಾತು ಸಲ್ಲದು. ಕಾಳಜಿ ಇರುವ ಬೇರೆ ಮುಖ್ಯಶಿಕ್ಷಕರನ್ನು ಕರೆಯಿಸಿಕೊಳ್ಳೋಣ ಎಂದು ಮಕ್ಕಳು, ಪಾಲಕರ ಮನವೊಲಿಸಿದರು.

    ಹಾಗೆಯೇ ಮುಖ್ಯಶಿಕ್ಷಕರನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡು, ಇದೇ ಶಾಲೆಯ ವಿದ್ಯಾರ್ಥಿಯಾದ ತಾವು ಈ ರೀತಿ ಮಾಡುವುದು ಸರಿಯಲ್ಲ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

    ಎಪಿಎಂಸಿ ಸದಸ್ಯ ಡಿ.ಬಿ.ಕುಮಾರ್, ಮುಖಂಡ ಷಡಕ್ಷರಿ ದೇವ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎನ್.ಜಯಣ್ಣ, ಕೆಂಚವೀರಪ್ಪರ ರುದ್ರಸ್ವಾಮಿ, ಪಾಲಕರು, ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts