More

    ತಾಳಿಕಟ್ಟೆ ಯುವತಿ ವರದಿ ನೆಗೆಟಿವ್!

    ಹೊಳಲ್ಕೆರೆ: ಮಣಿಪಾಲ್ ಆಸ್ಪತ್ರೆಯಲ್ಲಿ ಎರಡನೇ ಬಾರಿ ನಡೆಸಿದ ಕರೊನಾ ಪರೀಕ್ಷೆಯಲ್ಲಿ ತಾಲೂಕಿನ ತಾಳಿಕಟ್ಟೆ ಗ್ರಾಮದ ಯುವತಿಗೆ ನೆಗೆಟಿವ್ ವರದಿ ಬಂದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

    ಮೊದಲ ವರದಿಯಲ್ಲಿ ಯುವತಿಗೆ ಸೋಂಕು ಇದೆ ಎಂದು ಹೇಳಲಾಗಿತ್ತು. ಆಗ ಯುವತಿಯ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದ ಸಂಬಂಧಿಕರು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

    ಈಗ ಯುವತಿ ಸೇರಿ ಎಲ್ಲರಲ್ಲೂ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ.

    ದಿಗ್ಬಂಧನ ತೆರವು: ಸೋಂಕು ಪತ್ತೆಯಾಗಿದೆ ಎಂಬ ಕಾರಣಕ್ಕೆ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿತ್ತು. ವರದಿ ಬಂದ ಬಳಿಕ ತೆರವುಗೊಳಿಸಲಾಗಿದೆ. ಸೋಂಕಿನ ಕುರಿತು ಆಸ್ಪತ್ರೆ ಸರಿಯಾಗಿ ಪರೀಕ್ಷೆ ನಡೆಸದೇ ಸಮಸ್ಯೆ ಸೃಷ್ಟಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಕರೊನಾ ಸೋಂಕು ನಮ್ಮ ಗ್ರಾಮದ ಯುವತಿಯಲ್ಲಿ ಪತ್ತೆಯಾಗಿದೆ ಎಂಬ ಕಾರಣಕ್ಕೆ ಅಕ್ಕಪಕ್ಕದ ಗ್ರಾಮಸ್ಥರು ವಿಚಿತ್ರವಾಗಿ ನೋಡುತ್ತಿದ್ದರು. ಆಸ್ಪತ್ರೆ ಮೊದಲು ನೀಡಿದ ವರದಿಯಿಂದ ನಮ್ಮ ಗ್ರಾಮದ ಜನತೆ ನೋವು ಅನುಭವಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಬೇಕು.
    ಬಿ.ಗಂಗಾಧರ
    ಜಿಪಂ ಮಾಜಿ ಉಪಾಧ್ಯಕ್ಷ, ತಾಳಿಕಟ್ಟೆ

    ತಾಳಿಕಟ್ಟೆ ಯುವತಿಯಲ್ಲಿ ಕರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂಬ ಮಾಹಿತಿ ಬಂದಿದೆ. ಜಿಲ್ಲಾಧಿಕಾರಿ ಆದೇಶದಂತೆ ಯುವತಿ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ.
    ಡಾ.ಜಯಸಿಂಹ
    ತಾಲೂಕು ವೈದ್ಯಾಧಿಕಾರಿ, ಹೊಳಲ್ಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts