More

    ಮೂಢನಂಬಿಕೆ ಈಗಲೂ ಜೀವಂತ

    ಹೊಳಲ್ಕೆರೆ: 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಕ್ರಾಂತಿ ಮೂಲಕ ಅಳಿಸಿ ಹಾಕಿದ್ದ ಕಂದಾಚಾರ, ಮೂಢನಂಬಿಕೆ ಈಗಲೂ ಚಾಲ್ತಿಯಲ್ಲಿವೆ ಎಂದು ಸಾಹಿತಿ ಜಿ.ಎನ್.ಬಸವರಾಜಪ್ಪ ವಿಷಾದ ವ್ಯಕ್ತಪಡಿಸಿದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್, ನಿವೃತ್ತ ನೌಕರರ ಸಂಘ ಶಿವಪುರ ಘಟಕದಿಂದ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಉಚ್ಚಪ್ಪ ಮತ್ತು ಹನುಮಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಂದು ಶರಣರು ನೀಡಿದ ವಚನಗಳು ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸಿವೆ. ದಾಸೋಹದಿಂದ ಸಕಲ ಜೀವಿಗಳನ್ನು ತೃಪ್ತಿಪಡಿಸುವುದರಿಂದ ಜೀವನ ಮೌಲ್ಯ ಹೆಚ್ಚಾಗುತ್ತದೆ ಎಂಬುದು ಶರಣರ ಆಶಯವಾಗಿತ್ತು. ವಚನಗಳ ಸಾರ ಅರಿತು ಬಾಳಿದರೆ ಬದುಕು ಬಂಗಾರವಾಗುತ್ತದೆ ಎಂದರು.

    ದೇವರು ಎಲ್ಲರಲ್ಲೂ ಇದ್ದಾನೆ. ಈ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಕಟ್ಟಿ ಜನರನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದೇವರೆಂದರೆ ನಿರಾಳ ಶಕ್ತಿ ಮತ್ತು ಚೈತನ್ಯ. ಇದನ್ನು ಅರಿತು ಬಾಳಬೇಕು ಎಂದು ತಿಳಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಪಿ.ರಮೇಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲೇ ಕನ್ನಡ ಕಣ್ಮರೆಯಾಗುತ್ತಿದೆ. ಇದನ್ನು ಉಳಿಸಿ ಬೆಳೆಸುವ, ಭಾಷೆ ಬಳಸಿ ಅದರ ಸಿರಿವಂತಿಕೆ ಹೆಚ್ಚಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರು.

    ಡಾ.ಶಿವಲಿಂಗಪ್ಪ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಜಯಪ್ಪ, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಬಿ.ಬಸವರಾಜಯ್ಯ, ಎಂ.ಜಿ.ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts