More

    ಸಂವಿಧಾನ ಜನರ ಹಕ್ಕುಗಳ ಬುನಾದಿ

    ಹೊಳಲ್ಕೆರೆ: ಸರ್ವರಿಗೂ ಸಮಬಾಳು ಸಮಪಾಲು ಆಶಯ ಹೊಂದಿರುವ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

    ಭಾರತ ಸಂವಿಧಾನದ 70ನೇ ವರ್ಷಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆಯಿಂದ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಅಭಿಯಾನ ಹಾಗೂ ಸಾಂವಿಧಾನಿಕ ಮೌಲ್ಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಂವಿಧಾನ ಜನತೆಯ ಹಕ್ಕುಗಳ ಮೂಲಬೇರು. ವಿಶ್ವದಲ್ಲೇ ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆಯಾದ ಅತಿ ದೀರ್ಘ ಮತ್ತು ಲಿಖಿತ ಸಂವಿಧಾನ ಎಂಬ ಹಿರಿಮೆ ನಮ್ಮ ಸಂವಿಧಾನಕ್ಕಿದೆ ಎಂದರು.

    ಮೂಲ ಹಕ್ಕು-ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಮೂರು ಹಂತದ ಆಡಳಿತ ವ್ಯವಸ್ಥೆ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಂಸದೀಯ ವ್ಯವಸ್ಥೆ, ಜಾತ್ಯತೀತ ನಿಲುವು, ಏಕ ನಾಗರಿಕತ್ವ ವ್ಯವಸ್ಥೆ, ಪ್ರಾಪ್ತ ವಯಸ್ಕರ ಮತದಾನದ ಹಕ್ಕು ಮತ್ತು ಸಂವಿಧಾನ ತಿದ್ದುಪಡಿಗೆ ಇರುವ ಅವಕಾಶದ ಕುರಿತು ಮಾಹಿತಿ ನೀಡಿದರು.

    ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್, ಪ್ರಧಾನ ಸಿವಿಲ್ ನ್ಯಾಯಾಧೀಶ ರವಿಕುಮಾರ್, ಅನಾಥ ಸೇವಾಶ್ರಮದ ವ್ಯವಸ್ಥಾಪಕ ಸಿದ್ದರಾಮಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts