More

    ಎಚ್‌ಕೆಇ ಅಧ್ಯಕ್ಷರಾಗಿ ನಮೋಶಿ ಅಧಿಕಾರ ಸ್ವೀಕಾರ

    ಶಾಸಕ ಬಿ.ಜಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭ / ನೂತನ ಆಡಳಿತ ಮಂಡಳಿ ಸದಸ್ಯರು ಭಾಗಿ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಇಲ್ಲಿನ ಪ್ರತಿಷ್ಠಿತ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ)ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಉಪಾಧ್ಯಕ್ಷರಾಗಿ ರಾಜಾ ಭೀಮಳ್ಳಿ ಅವರು ಭಾನುವಾರ ಸಂಜೆ ನಗರದ ಪಿಡಿಎ ಕಾಲೇಜಿನ ಆವರಣದಲ್ಲಿರುವ ಸೊಸೈಟಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
    ಬಳಿಕ ಸ್ಯಾಕ್ ಸಭಾಂಗಣದಲ್ಲಿ ಶಾಸಕ ಬಿ.ಜಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರು ಭಾಗಿಯಾದರು. ಸಮಾರಂಭವನ್ನು ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಶಾಸಕ ಬಿ.ಜಿ.ಪಾಟೀಲ್ ಹಾಗೂ ನೂತನ ಅಧ್ಯಕ್ಷ ಶಶೀಲ್ ನಮೋಶಿ ಅವರು ಜಂಟಿಯಾಗಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
    ನಮೋಶಿಯವರು ಉತ್ತಮ ಕೆಲಸ ಮಾಡಿಕೊಂಡು ಹೋಗಲಿ ಎಂದು ಬಿ.ಜಿ.ಪಾಟೀಲ್‌ರು ಹಾಗೂ ಸದಸ್ಯರು ಶುಭ ಹಾರೈಸಿದರು.
    ಪದಗ್ರಹಣ ಮಾಡಿದ ಶಶೀಲ್ ನಮೋಶಿ ಮಾತನಾಡಿ, ಸಂಸ್ಥೆಯನ್ನು ವಿಶ್ವದರ್ಜೆಗೆ ತೆಗೆದುಕೊಂಡು ಹೋಗುತ್ತೇವೆ. ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು. ಚುನಾವಣೆಯ ಕಾಲಕ್ಕೆ ನೀಡಿದ ೯ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.

    ಆಡಳಿತ ಮಂಡಳಿ ಸದಸ್ಯರಾದ ಡಾ.ಕೈಲಾಶ್ಬಿ.ಜಿ.ಪಾಟೀಲ್,ಡಾ.ಶರಣಬಸಪ್ಪ ಹರವಾಳ,ಉದಯಕುಮಾರ ಚಿಂಚೋಳಿ,ಡಾ.ಕಿರಣ ದೇಶಮುಖ,ಮಹಾದೇವಪ್ಪ ರಾಂಪುರೆ,ರಜನೀಶ ವಾಲಿ,ಡಾ.ಅನೀಲ್ ಪಟ್ಟಣ, ಸಿದ್ದರಾಮಪ್ಪ ಧಂಗಾಪುರ, ಮೊದಲಾದವರಿದ್ದರು. ಚಂದ್ರಶೇಖರ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪುತ್ರಪ್ಪ ಚಿಂಚೋಳಿ,ಶಿವಶರಣಪ್ಪ ಸಿರಿ, ಗುರು ಕಾಮಾ ಮೊದಲಾದವರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts