More

    ಕಾನೂನು ಪಾಲನೆ ಪ್ರಜೆಗಳ ಹೊಣೆ

    ಹಿರಿಯೂರು: ದೇಶದ ಸಂವಿಧಾನ ಹಾಗೂ ಕಾನೂನು-ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ನ್ಯಾಯಾಧೀಶೆ ದಮಯಂತಿ ಸೋಮಯ್ಯ ಹೇಳಿದರು.

    ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ವಿವೇಕಾನಂದ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ದೇಶದ ಕಾನೂನುಗಳ ಮೂಲ ಸಂವಿಧಾನವಾಗಿದೆ. ಕರ್ತವ್ಯ-ಹಕ್ಕುಗಳ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವುದರಿಂದ ಸುಖೀ ರಾಜ್ಯ ನಿರ್ಮಾಣ ಸಾಧ್ಯ ಎಂದರು.

    ಇಂದು ಸಾಮಾಜಿಕ ಜಾಲತಾಣಗಳು ದುರುಪಯೋಗಕ್ಕೆ ದಾರಿ ಮಾಡುತ್ತಿವೆ. ಜೀವನದಲ್ಲಿ ಸಂಸ್ಕಾರ, ನೈತಿಕ ಮೌಲ್ಯ, ಮಾನವೀಯ ಮೌಲ್ಯ, ದೇಶಾಭಿಮಾನ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಗಮನಹರಿಸಬೇಕು ಎಂದು ತಿಳಿಸಿದರು.

    ನ್ಯಾಯಾಧೀಶೆ ಎನ್.ಬಿ.ಶೇಖ್ ಮಾತನಾಡಿ, ಕಾನೂನಿನ ವ್ಯಾಪ್ತಿ ವ್ಯಾಪಕವಾಗಿದೆ. ಕಾನೂನಿನ ತಿಳಿವಳಿಕೆ ಇದ್ದರೆ ಸಮಾಜದಲ್ಲಿ ಸುಖ-ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿದೆ ಎಂದರು.

    ವಕೀಲರಾದ ಎಸ್.ಶೇಷಾದ್ರಿ, ಮಹಾಲಿಂಗಪ್ಪ, ಪ್ರಾಚಾರ್ಯ ವಾಸುದೇವ್, ತಿಪ್ಪೇಸ್ವಾಮಿ, ಕಾಂತರಾಜ್, ಧೃವಕುಮಾರ್, ಮೀನಾಕ್ಷಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts