More

    ಯುಗಾದಿ ಖುಷಿಗೆ ಭಂಗವಿಲ್ಲ

    ಹಿರಿಯೂರು: ನಗರದಲ್ಲಿ ಕರೊನಾ ವೈರಸ್ ಆತಂಕವಿಲ್ಲದೆ ಜನರು ಯುಗಾದಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.

    ಆರೋಗ್ಯ ಇಲಾಖೆ ನೇತೃತ್ವದಲ್ಲಿ ಜಾಗೃತಿ ಮೂಡಿಸಿದರೂ ಜನರು ಇದಕ್ಕೂ ನಮಗೂ ಸಂಬಂಧವಿಲ್ಲ, ರಣ ಬಿಸಿಲಿಗೆ ಕರೊನಾ ವೈರಸ್ ಏನು ಮಾಡುವುದಿಲ್ಲ ಎಂಬಂತೆ ಹಬ್ಬದ ಖರೀದಿಯಲ್ಲಿ ತೊಡಗಿದ್ದರು.

    ವೇದಾವತಿ ನಗರದಲ್ಲಿ ವಾರದ ಸಂತೆ ಯಾವುದೇ ಅಡೆ-ತಡೆ ಇಲ್ಲದೆ ಸುಗಮವಾಗಿ ನಡೆಯಿತು, ಹೊಟೇಲ್, ಅಂಗಡಿ-ಮುಂಗಟ್ಟುಗಳು, ಬಸ್ ಸಂಚಾರ, ಪ್ರಯಾಣಿಕರ ಓಡಾಟಕ್ಕೆ ಬ್ರೇಕ್ ಬೀಳಲಿಲ್ಲ.

    ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸಿದ ಜನತೆ ಹೊಸ ಬಟ್ಟೆ, ಹಣ್ಣು-ತರಕಾರಿ, ದಿನಸಿ ಸಾಮಾಗ್ರಿ ಖರೀದಿಸಿ ಲವಲವಿಕೆಯಿಂದ ತಮ್ಮ ಊರುಗಳ ಕಡೆ ತೆರಳಿದರು.

    ವಿವಿ ಸಾಗರಕ್ಕೆ ಲಗ್ಗೆ: ಜಲಾಶಯದ ಎಡ-ಬಲ ದಂಡೆ ನಾಲೆಗಳಿಗೆ ನೀರು ಬಿಟ್ಟಿರುವುದು ಜನರಲ್ಲಿ ಖುಷಿ ತಂದಿದೆ, ಜಲರಾಶಿ ನೋಡಲು ಪ್ರವಾಸಿಗರು, ತಾಲೂಕಿನ ವಿವಿಧೆಡೆಯಿಂದ ವಿವಿ ಸಾಗರಕ್ಕೆ ಭೇಟಿ ನೀಡಿದ್ದರು. ರಣ ಬಿಸಿಲಿಗೆ ಬಸವಳಿದ ಪ್ರವಾಸಿಗರು ನಾಲೆ ನೀರಿನಲ್ಲಿ ಈಜುವುದರ ಮೂಲಕ ರಿಲ್ಯಾಕ್ಸ್ ಮೂಡಿಗೆ ಜಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts