More

    ಆಧ್ಯಾತ್ಮಿಕತೆಯಿಂದ ಮನಸ್ಸು ಪರಿಶುದ್ಧ

    ಹಿರಿಯೂರು: ಆಧ್ಯಾತ್ಮಿಕ ಚಿಂತನೆಗಳು ಮನಸ್ಸು ಮತ್ತು ದೇಹವನ್ನು ಪವಿತ್ರಗೊಳಿಸಿ ಪರಿಶುದ್ಧ ವ್ಯಕ್ತಿಯನ್ನಾಗಿಸುತ್ತವೆ ಎಂದು ಶ್ರೀ ವೀರೇಶಾನಂದ ಸ್ವಾಮೀಜಿ ಹೇಳಿದರು.

    ನಗರದ ಶಾರದಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜನರಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬಲು ಮತ್ತು ಸಮಾಜ ಸುಧಾರಣೆಗೆ ಶ್ರೀ ರಾಮಕೃಷ್ಣ ಪರಮ ಹಂಸರು ಶಕ್ತಿ ಮೀರಿ ಶ್ರಮಿಸಿದರು ಎಂದು ಹೇಳಿದರು.

    ಆಧ್ಯಾತ್ಮಿಕ ಚಿಂತನೆ ಇಲ್ಲದ ಪರಿಣಾಮ ಪ್ರಸ್ತುತ ನಾಗರಿಕತೆ ದಿಕ್ಕಾಪಾಲಾಗಿದೆ. ಸಂಗೀತ, ಕೀರ್ತನೆಗಳಿಗೆ ಮೀಸಲಾಗಿರದೆ ರಾಗಗಳು ಉನ್ನತೀಕರಣದಿಂದ ಜನರನ್ನು ಉದ್ದೀಪನಗೊಳಿಸಿ ಸಮಾಜದ ಸ್ಥಿತಿ ದುಸ್ಥಿತಿಯಡೆಗೆ ಸಾಗುತ್ತಿದೆ ಎಂದು ಬೇಸರಿಸಿದರು.

    ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ದೇಶವಾಸಿಗಳಲ್ಲಿ ಅಧ್ಯಾತ್ಮ ಅತ್ಯಂತ ದೃಢವಾಗಿ ನೆಲೆ ನಿಂತಿದೆ. ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ ಅವರು ಧ್ಯಾನ, ತಪಸ್ಸು, ಆಧ್ಯಾತ್ಮದ ಮೂಲಕ ಜ್ಞಾನದ ಬೆಳಕನ್ನು ಪಸರಿಸಿದವರು. ಇಂದಿನ ಯುವ ಸಮೂಹ ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದರು.

    ಶಾರದಾಶ್ರಮದ ಮಾತಾಜೀ ಚೈತನ್ಯಮಯಿ ಮಾತನಾಡಿ, ಆಧ್ಯಾತ್ಮದ ಮೂಲಕ ಜ್ಞಾನದ ಉನ್ನತಿ. ಇದರಿಂದಲೇ ಬದುಕಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿಸಿದರು.

    ಶಿಕ್ಷಕರಾದ ರಾಘವೇಂದ್ರಚಾರ್, ದತ್ತಾತ್ರೇಯ, ಶಿವು, ಯಶವಂತ್, ಸುಗುಣಾ, ಅಪೂರ್ವಾ, ಭವ್ಯಾ, ಶಿವಶಂಕರ್ ಮಠದ್, ರವೀಂದ್ರನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts