More

    ಸುಧಾಕರ್-ಸೋಮಶೇಖರ್ ಮುನಿಸು ಶಮನ

    ಹಿರಿಯೂರು: ಕ್ಷೇತ್ರದಲ್ಲಿ ಪಕ್ಷದಲ್ಲಿನ ಬಣ ರಾಜಕೀಯಕ್ಕೆ ಕಾಂಗ್ರೆಸ್ ವರಿಷ್ಠರು ಬ್ರೇಕ್ ಹಾಕಿದ್ದು, ಮಾಜಿ ಸಚಿವ ಡಿ.ಸುಧಾಕರ್-ಮುಖಂಡ ಬಿ.ಸೋಮಶೇಖರ್ ನಡುವಿನ ಮುನಿಸು ಶಮನವಾಗಿ, ಇಬ್ಬರು ನಾಯಕರು ಶನಿವಾರ ಒಗ್ಗಟ್ಟು ಪ್ರದರ್ಶಿಸಿದರು.

    ತಾಲೂಕಿನ ಧರ್ಮಪುರದಲ್ಲಿ ಈಚೆಗೆ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಇಬ್ಬರೂ ನಾಯಕರ ಬೆಂಬಲಿಗರು ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದರು, ಪೊಲೀಸ್ ಠಾಣೆಯಲ್ಲಿ ಸುಧಾಕರ್ ಬೆಂಬಲಿಗರ ಮೇಲೆ ದೂರು ದಾಖಲಾಗಿತ್ತು.

    ಇಬ್ಬರು ನಾಯಕರ ಬಣ ರಾಜಕೀಯದ ಮಾಹಿತಿ ಪಡೆದಿದ್ದ ವರಿಷ್ಠರು ಭಿನ್ನಮತಕ್ಕೆ ಬ್ರೇಕ್ ಹಾಕಿ, ಇಬ್ಬರೂ ಒಗ್ಗೂಡಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಒಗ್ಗೂಡಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ನಾಯಕರಿಬ್ಬರು ಘೋಷಿಸಿದರು.

    ಪಕ್ಷದ ಆದೇಶ ಪಾಲನೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರಿನಿಂದ ಸ್ಪರ್ಧೆಗೆ ಇಬ್ಬರೂ ಆಕಾಂಕ್ಷಿಗಳಾಗಿದ್ದು, ಪಕ್ಷದ ಆದೇಶ ಪಾಲನೆಗೆ ಬದ್ಧ ಎಂದು ಸ್ಪಷ್ಟಪಡಿಸಿದರು.

    ರಾಜೀನಾಮೆ: ಹೈಕಮಾಂಡ್ ಸೂಚನೆ ಮೇರೆಗೆ ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಸುಧಾಕರ್ ಹೇಳಿದರು.

    ಕಾಡುಗೊಲ್ಲರಿಗೆ ಅವಕಾಶ ನೀಡಿ: ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಸ್ಥಾನವನ್ನು ಕಾಡುಗೊಲ್ಲರಿಗೆ ಕೊಡಬೇಕು, ಹಿಂದೆ ಅಧ್ಯಕ್ಷರಾಗಿದ್ದ ಯಾದವ ಸಮುದಾಯದ ಕಲ್ಲಹಟ್ಟಿ ತಿಪ್ಪೇಸ್ವಾಮಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದು, ಅವರಿಗೆ ಅವಕಾಶ ಕಲ್ಪಿಸಿದರೆ ಅನುಕೂಲ ಆಗಲಿದೆ ಎಂದುಸೋಮಶೇಖರ್ ತಿಳಿಸಿದರು.

    ಬ್ಲಾಕ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಕೃಷ್ಣಮೂರ್ತಿ, ಶ್ರವಣಗೆರೆ ಚಂದ್ರಶೇಖರ್, ಗುರುಪ್ರಸಾದ್, ಜ್ಞಾನೇಶ್, ಶಿವಕುಮಾರ್, ಈಶ್ವರಪ್ಪ, ಓಬಳೇಶ್, ಈ. ಮಂಜುನಾಥ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts