More

    ಬಂಪರ್ ಬೆಳೆ ನಿರೀಕ್ಷೇಲಿ ಶೇಂಗಾ ಬೆಳೆಗಾರರು

    ಹಿರಿಯೂರು: ಬಯಲು ಸೀಮೆಯ ಬಹುತೇಕ ಕಡೆ ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ನಿರೀಕ್ಷೆಗೂ ಮೀರಿ ಶೇಂಗಾ ಬಿತ್ತನೆ ಮಾಡಲಾಗಿದೆ. ಶೇಂಗಾ ಬೆಳೆ ಬಯಲು ಸೀಮೆ ರೈತರ ಪ್ರಮುಖ ಬೆಳೆ. ಪ್ರಸಕ್ತ ವರ್ಷ 40 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.

    ಮುಂಗಾರು ಆರಂಭದಿಂದ ಇಲ್ಲಿಯವರೆಗೆ ವರುಣ ಕೃಪೆಯಿಂದ ಉತ್ತಮ ಮಳೆಯಾಗುತ್ತಿದ್ದು, ಬಂಪರ್ ಬೆಳೆ ಕೈ ಸೇರುವ ಕನಸು ರೈತರಲ್ಲಿ ಗರಿಗೆದರಿದೆ.
    ಬಿತ್ತನೆ ಪ್ರಮಾಣ ಹೆಚ್ಚಳ: ಉದ್ಯೋಗಕ್ಕಾಗಿ ಪಟ್ಟಣ ಸೇರಿದ್ದ ರೈತ ಕುಟುಂಬಗಳು ಲಾಕ್‌ಡೌನ್ ಎಫೆಕ್ಟ್‌ನಿಂದ ಮತ್ತೆ ಹಳ್ಳಿಗಳತ್ತ ಬಂದಿದ್ದು, ಈ ಬಾರಿ ಉತ್ತಮ ಮುಂಗಾರು ಮಳೆ ಕಾರಣ ಬಹುತೇಕ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಎಲ್ಲಿ ನೋಡಿದರು ಹಸಿರ ಸಿರಿ ನಳನಳಿಸುತ್ತಿದೆ.

    ಪ್ರತಿ ವರ್ಷ ಸಕಾಲಕ್ಕೆ ಮಳೆ ಇಲ್ಲದೆ ಶೇಂಗಾ ಬಿತ್ತನೆ ಶೇ.50ರಷ್ಟು ತಲುಪುತ್ತಿರಲಿಲ್ಲ. ಈ ವರ್ಷ ಪ್ರಕೃತಿ ರೈತನ ಕೈ ಹಿಡಿದಿದ್ದು, ಬೆಳೆಗೆ ರೋಗಬಾಧೆ ಕಾಣಿಸುತ್ತಿಲ್ಲ. ಹೂ-ಕಾಯಿ ಕಟ್ಟುವ ಹಂತದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೆಚ್ಚು ಇಳುವರಿ ಬರುವ ನಿರೀಕ್ಷೆ ರೈತರಲ್ಲಿದೆ. ವಾಣಿಜ್ಯ ಬೆಳೆಗಳಾದ ತೊಗರಿ, ಸೂರ್ಯಕಾಂತಿ, ಹುರುಳಿ, ಹೆಸರುಕಾಳ, ಜೋಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
    ಬಯಲು ಸೀಮೆಯ ಹಿರಿಯೂರು, ಚಳ್ಳಕೆರೆ, ಶಿರಾ, ಪಾವಗಡ, ಮಧುಗಿರಿ, ಮೊಳಕಾಲ್ಮೂರು, ಹೊಸದುರ್ಗ ಇತರೆಡೆ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ.

    ಎಲ್ಲಿ ನೋಡಿದರು ಹಸಿರ ಸಿರಿ ನಳನಳಿಸುತ್ತಿದೆ:

    ಬಯಲು ಸೀಮೆ ರೈತರಿಗೆ ಶೇಂಗಾ ಬೆಳೆ ಜೀವನಾಧಾರ. ಲಾಕ್‌ಡೌನ್ ಕಾರಣಕ್ಕೆ ಪಟ್ಟಣದಿಂದ ಹಳ್ಳಿಗೆ ವಾಪಸಾದ ಬಹುತೇಕ ರೈತರು ಶೇಂಗಾ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಕ್ಷಿಂಟಾಲ್ ಶೇಂಗಾಕ್ಕೆ ಕನಿಷ್ಟ 10 ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಬೇಕು.
    > ರಾಘವೇಂದ್ರ, ಬೇತೂರು ಪಾಳ್ಯ, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts