More

    ಗಾಂಧಿ ಚಿಂತನೆ ಸರ್ವ ಕಾಲಕ್ಕೂ ಶ್ರೇಷ್ಠ

    ಹಿರಿಯೂರು: ಬ್ರಿಟಿಷರ ದಾಸ್ಯದಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಚಿಂತನೆ, ತತ್ವ, ಆದರ್ಶಗಳನ್ನು ಯುವ ಜನತೆ ರೂಢಿಸಿಕೊಳ್ಳಬೇಕೆಂದು ಯಾಜ್ಞವಲ್ಕ್ಯ ಪಬ್ಲಿಕ್ ಶಾ ಸಂಸ್ಥಾಪಕ ಅಧ್ಯಕ್ಷ ಟಿ.ಸುರೇಶ್ ಹೇಳಿದರು.

    ಕಳವಿಭಾಗಿ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ, ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜ್ ವತಿಯಿಂದ ತಾಲೂಕಿನ ಭೀಮನಬಂಡೆ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೋಳವಾರು ಮಹಮ್ಮದ್ ಕುಂಞ ಅವರ ‘ಪಾಪು ಗಾಂಧಿ, ಗಾಂಧಿ ಬಾಪು’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಗಾಂಧೀಜಿ ಅವರು ಸರಳ, ನೇರ ನುಡಿಗಳಿಂದ ಎತ್ತರಕ್ಕೆ ಬೆಳೆದ ಮಹಾನ್ ವ್ಯಕ್ತಿ. ಸತ್ಯ, ಶಾಂತಿ, ಅಹಿಂಸೆಯ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸಿ ಯುಗ ಪುರುಷರಾಗಿದ್ದು, ಅವರ ಜೀವನ ಗಾಥೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕಿದೆ. ಹಿಂದು, ಮುಸ್ಲಿಮರು ಭಾವೈಕ್ಯತೆ, ಏಕತೆಯಿಂದ ಬದುಕಬೇಕು. ಧರ್ಮ ಧರ್ಮದ ಮಧ್ಯೆ ಒಡಕುಂಟು ಮಾಡಬಾರದು ಎಂದು ಸಾರಿದ್ದರು ಎಂದರು.

    ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಮಾತನಾಡಿ, ಗಾಂಧೀಜಿ ಜೀವನ, ಆದರ್ಶ, ಚಿಂತನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಜತೆಗೂಡಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಪ್ರಾಚಾರ್ಯ ಎಂ.ಪಿ.ನವೀನ್ ಕುಮಾರ್, ಗಿರೀಶ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ನಿಜಲಿಂಗಪ್ಪ, ನಾಟಕದ ಸಂಚಾಲಕ ಗಣೇಶ ಹೆಗ್ಗೋಡು, ವ್ಯವಸ್ಥಾಪಕ ಬಿ.ಕೆ.ಮಹಬಲೇಶ್ವರ, ಮುದ್ದುರಾಜ್, ಕೆ.ಎಸ್.ಅನಿಲ್‌ಕುಮಾರ್, ಮಂಜುನಾಥ, ಸೃಷ್ಟಿ, ನಾಟಕ ಕಲಾವಿದರಾದ ಬಿ.ರಂಜಿತ್‌ಕುಮಾರ್, ನಂದೀಶ, ಲಕ್ಷ್ಮಣ್ ರೊಟ್ಟಿ, ಮಂಜುನಾಥ್ ಕಠಾರಿ, ಬಿ.ಬಿ.ಅಶ್ವಿನಿ, ವಿದ್ಯಾರಾಣಿ, ಪೂರ್ಣಿಮಾ, ಸ್ವರೂಪ್, ಜಗದೀಶ್ ಕಟ್ಟೀಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts