More

    ಅಂಗವಿಕಲರಲ್ಲಿ ಪ್ರತಿಭೆ ಪತ್ತೆ ಹಚ್ಚಿ

    ಹಿರಿಯೂರು: ಅಂಗವಿಕಲರಲ್ಲಿ ಅಗಾಧ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು ಎಂದು ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ಹೇಳಿದರು.

    ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಚೇತನ ಸರ್ಕಾರಿ ನೌಕರರ 2ನೇ ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ಅಂಗವಿಕಲರಿಗೆ ಸೂಕ್ತ ಮಾರ್ಗದರ್ಶ ನೀಡಿದರೆ ಇತರರಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.

    ಅಂಗವಿಕಲತೆ ಶಾಪವಲ್ಲ, ಸವಾಲನ್ನು ಮೆಟ್ಟಿನಿಂತು ಸಾಧಿಸುವ ಛಲವಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ, ಅಂಗವಿಕಲರಿಗೆ ಎಲ್ಲ ಕ್ಷೇತ್ರದಲ್ಲಿ ಅವಕಾಶ ನೀಡಿ ನಮ್ಮಂತೆ ಕಾಣುವ ಮನೋಭಾವ ಸರ್ವರೂ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ರಾಜ್ಯ ಅಂಗವಿಕಲ ನೌಕರರ ಸಂಘದ ಗೌರವಾಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ಸರ್ಕಾರದಿಂದ ಸಿಗುವ ಭತ್ಯೆ, ವಿದ್ಯಾರ್ಥಿ ವೇತನ ಇತರ ಸೌಲಭ್ಯಗಳ ಕುರಿತು ಅಂಗವಿಕಲರಿಗೆ ಮಾಹಿತಿ ನೀಡುವ ಮನೋಧರ್ಮ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಟನೆ ಮುಖಂಡರು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಸಂಘದ ರಾಜ್ಯಾಧ್ಯಕ್ಷ ಆರ್.ಇಂದ್ರೇಶ್, ಜಿಪಂ ಸದಸ್ಯೆ ರಾಜೇಶ್ವರಿ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಜಯಲಕ್ಷ್ಮಿ, ಅಂಗವಿಕಲ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬುರುಜನಹಟ್ಟಿ ಎಚ್.ಶ್ರೀನಿವಾಸ್, ತಾಲೂಕಾಧ್ಯಕ್ಷ ಎಂ.ಜಯ್ಯಣ್ಣ, ರವೀಂದ್ರನಾಥ್ ಜಿ.ಹೆಗ್ಗಡೆ, ಹರ್ತಿಕೋಟೆ ಮಹಾಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಕೆಂಚವೀರಪ್ಪ, ಖಜಾಂಚಿ ವಿರೂಪಣ್ಣ, ಕಾರ್ಯದರ್ಶಿ ಗಾಯತ್ರಿ, ಶಿಶು ಅಭಿವೃದ್ದಿ ಅಧಿಕಾರಿ ಎಂ.ಮುದ್ದಪ್ಪ, ಸುಧೀಂದ್ರ ಕುಮಾರ್, ಗೋವಿಂದಯ್ಯ, ಧರಣಿಕುಮಾರ್, ಸುರೇಶ್, ಎಂ.ಶ್ರೀನಿವಾಸ್, ಉದಯಕುಮಾರ್ ಇತರರಿದ್ದರು.

    ಸಿದ್ದಗಂಗಮ್ಮ ಶಿವಲಿಂಗಪ್ಪ ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ಸಿದ್ದೇಶ್ವರ ಬುದ್ಧಿಮಾಂದ್ಯ ವಸತಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts