More

    ಮಾಜಿ ಸಚಿವ ಡಿ.ಮಂಜುನಾಥ್ ನಿಧನ

    ಚಿತ್ರದುರ್ಗ: ಹಿರಿಯ ರಾಜಕಾರಣಿ, ಸಮಾಜವಾದಿ ನಾಯಕ ಮಾಜಿ ಸಚಿವ ಡಿ.ಮಂಜುನಾಥ್ (91) ಸೋಮವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದರು.

    ಪತ್ನಿ ಲಿಂಗಮ್ಮ, ಐವರು ಮಕ್ಕಳು ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಪಾರ್ಥೀವ ಶರೀರವನ್ನು ಸಂಜೆ ಹಿರಿಯೂರಿನ ಮನೆಗೆ ತರಲಾಯಿತು.

    ಮಂಗಳವಾರ (ಫೆ.4) ಬೆಳಗ್ಗೆ ಸಾರ್ವಜನಿಕ ದರ್ಶನದ ಬಳಿಕ ಹಿರಿಯೂರಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ಜಿಪಂ ಮಾಜಿ ಸದಸ್ಯ ಜಗದೀಶ್ ತಿಳಿಸಿದ್ದಾರೆ.

    ಜನತಾಪರಿವಾರದ ಹಿರಿಯ ರಾಜಕಾರಣಿಯಾಗಿದ್ದ ಡಿ.ಮಂಜುನಾಥ್ 1983-1984 ರ ಅವಧಿಯಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    ಉಳಿದಂತೆ ಶಾಸಕರಾಗಿ, ಸಚಿವರಾಗಿ,ಉಪಸಭಾಪತಿಯಾಗಿ ಮಾತ್ರವಲ್ಲ ಒಂದು ಸರ್ಕಾರದಲ್ಲಿ ಇರಬಹುದಾದ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.

    ಡಿ.ಮಂಜುನಾಥ್ ಮೂಲತಃ ಚಳ್ಳಕೆರೆ ತಾಲೂಕಿನವರಾದರೂ ಹಿರಿಯೂರು ವಿಧಾನಸಭೆ ಕ್ಷೇತ್ರ ಅವರ ರಾಜಕೀಯದ ಕರ್ಮಭೂಮಿ ಆಗಿತ್ತು. ಹಿರಿಯೂರು ಕ್ಷೇತ್ರದ ಮೂಲಕವೇ ನಾಲ್ಕು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದರು.

    ಹಿರಿಯ ಮುತ್ಸದ್ಧಿ ನಡೆದುಬಂದ ಹಾದಿ: ಜನನ-1928 ರ ಆಗಸ್ಟ್ 26 ಚಳ್ಳಕೆರೆ ತಾಲೂಕು ಜಾಜೂರು. ತಂದೆ: ದುರುಗಪ್ಪ ರೈತ, ತಾಯಿ: ಯಲ್ಲಮ್ಮ. ವಿದ್ಯಾಭ್ಯಾಸ: ಬಿ.ಎಸ್ಸಿ. ಬಿ.ಎಲ್. ಪ್ರಾಥಮಿಕ ಶಾಲೆ ಜಾಜೂರು (1936-42), ಮೆಟ್ರಿಕುಲೇಷನ್ ಚಿತ್ರದುರ್ಗ (1947), ಇಂಟರ್‌ಮೀಡಿಯಟ್ (ಸಿಟಿಎ-1950), ಬಿ.ಎಸ್ಸಿ ಸೆಂಟ್ರಲ್ ಕಾಲೇಜು-ಬೆಂಗಳೂರು (1953), ಬಿ.ಎಲ್-1957. 1957-ಲಿಂಗಮ್ಮ ಜತೆ ವಿವಾಹ, ಐವರು ಮಕ್ಕಳು. 1957 ವಕೀಲಿ ವೃತ್ತಿ ಪ್ರಾರಂಭ. 1959-ತಾಲೂಕು ಅಭಿವೃದ್ಧಿ ಮಂಡಲಿ ಸದಸ್ಯ, ಚಳ್ಳಕೆರೆ. 1967- ಹಿರಿಯೂರು ಕ್ಷೇತ್ರದಿಂದ ವಿಧಾನಸಭೆಗೆ(ಕಾಂಗ್ರೆಸ್) ಆಯ್ಕೆ. ವಿಧಾನಸಭೆ ಉಪಾಧ್ಯಕ್ಷ. 1977-ಜನತಾಪಕ್ಷಕ್ಕೆ ಸೇರ್ಪಡೆ. 1983-ವಿಧಾನ ಪರಿಷತ್‌ಗೆ ಆಯ್ಕೆ. 1983-84: ಜನತಾಪಕ್ಷದ ರಾಜ್ಯಾಧ್ಯಕ್ಷ. 1984-ಯೋಜನೆ ಖಾತೆ ಸಚಿವ. 1985-ಕಾರ್ಮಿಕ ಸಚಿವ. 1986-87: ಶಿಕ್ಷಣ ಸಚಿವ. 1987-92: ವಿಧಾನಪರಿಷತ್ ಸಭಾಪತಿ. 1994-95: ಉನ್ನತ ಶಿಕ್ಷಣ ಸಚಿವ. 1997-99: ಅರಣ್ಯ ಸಚಿವ. 2004-ಉನ್ನತ ಶಿಕ್ಷಣ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts