More

    ಕೋಡಿಹಳ್ಳಿ ರೇಣುಕಾ ಪರಮೇಶ್ವರಿ ದೇವಿ ಜಾತ್ರೋತ್ಸವ

    ಹಿರಿಯೂರು: ತಾಲೂಕಿನ ಕೋಡಿಹಳ್ಳಿಯಲ್ಲಿ ಮಂಗಳವಾರ ಬುಡಕಟ್ಟು ಸಂಸ್ಕೃತಿಯ ಶಕ್ತಿ ದೇವತೆ ಶ್ರೀ ರೇಣುಕಾ ಪರಮೇಶ್ವರಿ ದೇವಿ ಸಿಡಿ-ಬೆಳ್ಳಿ ಆನೆ ಅಂಬಾರಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಡೊಳ್ಳು ಕುಣಿತ, ಕೋಲಾಟ, ನಂದಿ ಧ್ವಜ ಕುಣಿತ ಇತರ ಕಲಾತಂಡಗಳು ಪಾಲ್ಗೊಂಡಿದ್ದವು.

    ಜಾತ್ರೆ ಪ್ರಮುಖ ಆಕರ್ಷಣೆಯಾದ ಅಗ್ನಿ ಕುಂಡೋತ್ಸವ ಮತ್ತು ಬಣ್ಣದ ಆನೆ ಉತ್ಸವ ಮಾ.11 ರಂದು ಜರುಗಲಿದೆ. ಇದಕ್ಕೆ ಕಳೆದ ವರ್ಷದ ಜಾತ್ರೆಯಲ್ಲಿ ಒದ್ದೆ ಬಟ್ಟೆಯಲ್ಲಿ ಕಟ್ಟಿ ಇಡಲಾಗಿದ್ದ ಕೆಂಡ ಬಳಸಲಾಗುತ್ತದೆ. ಈ ಕಾರ್ಯ ಸಂಜೆ 5 ಕ್ಕೆ ಆರಂಭಗೊಂಡು ಮರುದಿನ ಬೆಳಗಿನ ಜಾವ 5 ಗಂಟೆಯವರೆಗೆ ಜರುಗುತ್ತದೆ.

    ಮಾ.12 ರಂದು ಆರತಿ ಸೇವೆ, ಅಭಿಷೇಕ, ಮಹಾಮಂಗಳಾರತಿ. ಕೊನೆಯ ದಿನವಾದ ಮಾ.13 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ, ಓಕುಳಿ, ಮಹಾಶಸ್ತ್ರದಾರತಿ, ಕಂಕಣ ವಿಸರ್ಜನೆ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

    ದೊಡ್ಡ ರಥೋತ್ಸವ ಹಗಲು ವೇಳೆಯಲ್ಲಿ ನಡೆದರೆ, ಉಳಿದೆಲ್ಲ ಧಾರ್ಮಿಕ ಕಾರ್ಯಗಳು ಕದಿರಿ ಹುಣ್ಣಿಮೆ ಬೆಳದಿಂಗಳ ಬೆಳಕಲ್ಲಿ ನಡೆಯುತ್ತದೆ. ಅಮ್ಮನಿಗೆ ಚಿಕ್ಕ ಉಚ್ಛಾಯ ಮತ್ತು ದೊಡ್ಡ ಉಚ್ಛಾಯ ಎಂದು ಎರಡು ಬಗೆಯ ರಥೋತ್ಸವ ನಡೆಯುತ್ತವೆ.

    ಅಗ್ನಿಕುಂಡ-ಬಂಡಿಸಿಡಿ ಜಾತ್ರೆಯ ಪ್ರಮುಖ ಆಚರಣೆಗಳು. ಎರಡು ದಿನ ಕಾಲ ಹರಕೆ ಹೊತ್ತ ಭಕ್ತರು ಸರದಿ ಸಾಲಲ್ಲಿ ನಿಂತು ಸಿಡಿ ಸೇವೆ ಅರ್ಪಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts