More

    ಜಾನಪದ, ಗ್ರಾಮೀಣ ಸೊಗಡು ಕಣ್ಮರೆ

    ಹಿರಿಯೂರು: ಆಧುನಿಕತೆಯ ಭರಾಟೆಯಲ್ಲಿ ಜಾನಪದ, ಗ್ರಾಮೀಣ ಸಾಂಸ್ಕೃತಿಕ ಸೊಗಡು ಅವನತಿಯತ್ತ ಸಾಗಿದೆ ಎಂದು ಪ್ರಾಚಾರ್ಯ ಡಾ.ವಿ.ವೀರಣ್ಣ ಅಭಿಪ್ರಾಯಪಟ್ಟರು.

    ಇಲ್ಲಿನ ಪಂಚಲಿಂಗೇಶ್ವರ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಆದರ್ಶ ಯುವಕ ಸಂಘ ಮತ್ತು ಪಂಚಲಿಂಗೇಶ್ವರ ಪದವಿ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದರು.

    ಭಜನೆ, ತತ್ವಪದ, ಗೊರವರ ಕುಣಿತ, ಸೋಬಾನೆ ಪದ, ಕೋಲಾಟ, ಜನಪದ ಹಾಡುಗಳು ಮೊದಲಾದ ಸಾಂಸ್ಕೃತಿಕ ಅಂಶಗಳು ಯುವ ಪೀಳಿಗೆಯ ನಿರಾಸಕ್ತಿಯಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಮುಂದುವರಿಸುವುದು ನಮ್ಮ ಕರ್ತವ್ಯವಾಗಬೇಕು ಎಂದರು.ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತರಾಯ, ಪ್ರೊ. ಬಿ.ಆರ್. ತಿಮ್ಮರಾಜು ಮಾತನಾಡಿದರು.

    ಕಾಲ್ಕೆರೆ ಚಂದ್ರಪ್ಪ ಜನಪದ ಗೀತೆ, ಕೆ.ಪಿ.ಗಣೇಶಯ್ಯ ರಂಗಗೀತೆ, ಅಮಕುಂದಿ ಗಂಗಾಧರ್ ಸುಗಮ ಸಂಗೀತ ಗಾಯನ, ಪ್ರಹ್ಲಾದಮೂರ್ತಿ ಮತ್ತು ತಂಡದವರು ಬಯಲಾಟ, ಭಾಗವತ ಸಂಗೀತ, ಹನುಮಂತಪ್ಪ ಮತ್ತು ತಂಡದವರು ತತ್ವಪದ, ವಚನ ಹಾಡಿದರು. ಶಿವಣ್ಣ ಮತ್ತು ತಂಡದವರು ಗೊರವರ ಕುಣಿತ, ತ್ರಿವೇಣಿ ನಾಡಗೀತೆ, ಬೋರಣ್ಣ ಮತ್ತು ತಂಡ ಭಜನೆ, ಪೂಜಾರಿ ವೀರಣ್ಣ ಮತ್ತು ತಂಡ ಕೋಲಾಟ, ಆಂಜಿನಪ್ಪ ಮತ್ತು ತಂಡ ವಚನ ಗಾಯನ, ಗುರುಮೂರ್ತಿ ಮತ್ತು ತಂಡ ಹಗಲು ವೇಷ ಕಾರ್ಯಕ್ರಮ ನಡೆಸಿಕೊಟ್ಟರು.

    ರಾಜಕುಮಾರ್, ಕೃಷ್ಣಮೂರ್ತಿ, ಜೆ.ಮಂಜುನಾಥ್, ಪ್ರೊ. ತಿಮ್ಮರಾಜು, ಚಂದ್ರಯ್ಯ, ಗಣೇಶಯ್ಯ, ತ್ರಿವೇಣಿ, ಶ್ರೀನಿವಾಸ್, ಓಂಕಾರಮ್ಮ, ಕಮಲಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts