More

    ಗುರು, ದೈವ ಕೃಪೆಯಿಂದ ನೆಮ್ಮದಿ

    ಹಿರಿಯೂರು: ಭಗವಂತ ಮತ್ತು ಗುರುವಿನ ಕರುಣೆಯಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೊಸದುರ್ಗ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಹೇಳಿದರು.

    ಶಿವಪುರಿ ಸ್ವಾಮೀಜಿ ಅವರ 72ನೇ ಜಯಂತ್ಯುತ್ಸವ ನಿಮಿತ್ತ ನಗರ ಸಮೀಪದ ಓಂಕಾರ ಫಾರಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಹೋಮ ಹವನ ಧಾರ್ಮಿಕ ಕಾರ್ಯದಲ್ಲಿ ಮಾತನಾಡಿದರು.

    ಹೃದಯದಲ್ಲಿ ಪ್ರೀತಿ, ವಿಶ್ವಾಸ, ದಯೆ, ಕರುಣೆ ತುಂಬಿಕೊಂಡು ಭಕ್ತಿ ಭಾವದೊಂದಿಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾದರೆ ಯಾವುದು ಕಷ್ಟಸಾಧ್ಯವಲ್ಲ ಎಂದು ತಿಳಿಸಿದರು.

    ಶಿವಪುರಿ ಶ್ರೀಗಳು ತಳ ಸಮುದಾಯಗಳ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿ ಹೊಂದಿದ್ದರು. ದೇವಾಂಗ, ಕುರುಬ, ಉಪ್ಪಾರ, ವಾಲ್ಮೀಕಿ, ಮಡಿವಾಳ ಸೇರಿ ಅನೇಕ ಶೋಷಿತ ವರ್ಗದ ಸಂಘಟನೆ, ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.

    ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಉಪ್ಪಾರ ಸಮಾಜ ಸಂಘಟಿತವಾಗುವ ಮೂಲಕ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.

    ಉಪ್ಪಾರ ಸಮಾಜ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಹಿರಿಯೂರು-ಬಳ್ಳಾರಿ ರಸ್ತೆಯ 100 ಎಕರೆ ಜಾಗದಲ್ಲಿ ಸರ್ಕಾರ ಮತ್ತು ಸಮಾಜದ ಸಹಕಾರದೊಂದಿಗೆ ಓಂಕಾರಾಶ್ರಮ ಮಠ ಸ್ಥಾಪಿಸಿ ಶಿವಪುರಿ ಸ್ವಾಮೀಜಿ ಕನಸು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

    ಪುರೋಹಿತ ವಿಶ್ವನಾಥ್ ದೀಕ್ಷಿತ್, ದಾವಣಗೆರೆ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ್ಣ, ಬಳ್ಳಾರಿ ಜಿಲ್ಲಾಧ್ಯಕ್ಷ ಯರ‌್ರಿಸ್ವಾಮಿ, ಮಹೇಶ್, ಶರಣಪ್ಪ, ಬಸವರಾಜಪ್ಪ, ನಾಗರಾಜು, ಮಾರುತಿ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts