More

    ತೇರುಮಲ್ಲೇಶ್ವರ ಜಾತ್ರೋತ್ಸವ ಸಂಪನ್ನ

    ಹಿರಿಯೂರು: ಇಲ್ಲಿನ ಪುರಾತನ ಪ್ರಸಿದ್ಧ ತೇರುಮಲ್ಲೇಶ್ವರ ಸ್ವಾಮಿ ಜಾತ್ರೋತ್ಸವ ಕಳೆದ ಒಂದು ವಾರ ಕಾಲ ವಿಜೃಂಭಣೆಯಿಂದ ಜರುಗಿ, ಶುಕ್ರವಾರ ರಥಾವರೋಹಣ ಉತ್ಸವ ಕಾರ್ಯದೊಂದಿಗೆ ಸಂಪನ್ನಗೊಂಡಿತು.

    ಜ.30ರಂದು ಕಂಕಣ ಕಲ್ಯಾಣೋತ್ಸವದೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು. 10ರಂದು ಅದ್ದೂರಿಯಾಗಿ ರಥೋತ್ಸವ, 12ರಂದು ಕರ್ಪೂದಾರತಿ, 13ಕ್ಕೆ ಉಯ್ಯಲೋತ್ಸವ, ವಸಂತೋತ್ಸವ, ಓಕಳಿ ಪಾರ್ವಟೋತ್ಸವ ಕಾರ್ಯಕ್ರಮ ಜರುಗಿದವು. ಶುಕ್ರವಾರ ಕಂಕಣ ವಿಸರ್ಜನೆಯೊಂದಿಗೆ ಜಾತೋತ್ಸವಕ್ಕೆ ತೆರೆ ಎಳೆಲಾಯಿತು.

    ರಥಾವರೋಹಣ ನಂತರ ತೇರುಮಲ್ಲೇಶ್ವರ, ಉಮಾಮಹೇಶ್ವರ, ಚಂದ್ರಮೌಳೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇಗುಲದ ಆವರಣಕ್ಕೆ ಕರೆ ತಂದು ತಹಸೀಲ್ದಾರ್ ಸತ್ಯನಾರಾಯಣ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.

    ಕಂದಾಯ ಅಧಿಕಾರಿ ಟಿ.ಲಕ್ಷ್ಮಣ, ನಗರಸಭೆ ಸದಸ್ಯರಾದ ಈರಲಿಂಗೇಗೌಡ, ಶಿವರಂಜನಿ, ಮಹೇಶ್ ಪಲ್ಲವ, ದಾದಾಪೀರ್, ಅಂಬಿಕಾ, ಗುಂಡೇಶ್ ಕುಮಾರ್, ದೇಗುಲದ ಅರ್ಚಕ ವಿಶ್ವನಾಥ್ ಚಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts