More

    20 ಮೆಟ್ರಿಕ್ ಟನ್ ಮರಳು ಕಳ್ಳತನ, ಬಜೆ ಡ್ಯಾಂ ಪ್ರದೇಶದಿಂದ ಸಂಗ್ರಹಿಸಿದ್ದ ಹೊಯ್ಗೆ

    ಉಡುಪಿ: ಸ್ವರ್ಣ ನದಿ ಬಜೆ ಡ್ಯಾಂ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧಿಸಿ ಗಣಿ ಇಲಾಖೆ ವಶದಲ್ಲಿದ್ದ 20 ಮೆಟ್ರಿಕ್ ಟನ್ ಮರಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಗಣಿ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

    ಮೇ 16ರಂದು ಲೋಕಾಯುಕ್ತ, ಗಣಿ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಅನಧಿಕೃತವಾಗಿ ಹೂಳೆತ್ತಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡು 70 ಮೆಟ್ರಿಕ್ ಟನ್ ಹೂಳನ್ನು ಹಿರಿಯಡ್ಕದಲ್ಲಿ ದಾಸ್ತಾನು ಮಾಡಲಾಗಿತ್ತು. ಅನಧಿಕೃತ ಹೂಳೆತ್ತಿದ್ದ ಯೋಜಕ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳಾದ ದಯಾನಂದ ಮಲ್ಯ, ಅಶೋಕ ಜೋಗಿ ಮೇಲೆ ಕೇಸು ದಾಖಲಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

    ಈ ವೇಳೆ ಈಗಾಗಲೆ ದಾಸ್ತಾನು ಮಾಡಿಟ್ಟ ಮರಳನ್ನು ಸಾಗಾಟ ಮಾಡುವುದಿಲ್ಲ, ಮತ್ತು ಹೂಳನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳುತ್ತೇವೆ ಎಂದು ಆರೋಪಿಗಳು ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೆ ಜೂನ್ 24ರಂದು ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ, ಉಡುಪಿ ತಹಸೀಲ್ದಾರ್, ಕಂದಾಯ ನಿರಿಕ್ಷಕ, ಗ್ರಾಮಕರಣಿಕ ಜಂಟಿಯಾಗಿ ದಾಸ್ತಾನು ಪರಿಶೀಲನೆ ನಡೆಸುವಾಗ 8 ಸಾವಿರ ರೂ. ಮೌಲ್ಯದ 20 ಮೆಟ್ರಿಕ್ ಟನ್ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲಾಗಿರುವುದು ತಿಳಿದು ಬಂದಿದೆ ಎಂದು ಗಣಿ ಇಲಾಖೆ ಅಧಿಕಾರಿ ಗೌತಮ್ ಶಾಸ್ತ್ರಿ ದೂರು ನೀಡಿದ್ದಾರೆ.

    ಮತ್ತೆ ಮರಳು ಲೂಟಿ: ಬುಧವಾರ ಪ್ರಕರಣ ದಾಖಲಾಗಿದ್ದರೆ, ಗುರುವಾರ ಮತ್ತದೆ ಆರೋಪಿಗಳು ಟೆಂಪೋ ಮೂಲಕ ಮರಳು ಸಾಗಾಟ ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕೂಡಲೆ ದಾಳಿ ನಡೆಸಿ ಟೆಂಪೋ ಸಮೇತ ಮರಳು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೆ ಪ್ರಕರಣ ಕೋರ್ಟ್‌ನಲ್ಲಿ ನಡೆಯುತಿದ್ದು, ಇನ್ನೂ ದಾಸ್ತಾನು ಇರುವ 50 ಮೆಟ್ರಿಕ್ ಟನ್ ಮರಳನ್ನು ಉಳಿಸಿಕೊಳ್ಳುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts