More

    ನುಗ್ಗಿ ಹೊಡೀರಿ… ಆ. 5ರಂದು ಶ್ರೀರಾಮಪೂಜೆಯಲ್ಲಿ ತೊಡಗಿದ್ದವರಿಗೆ ಧಮಕಿ!

    ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲೇ ಪಶ್ಚಿಮ ಬಂಗಾಳದಲ್ಲಿ ಶ್ರೀರಾಮಪೂಜೆ ಮಾಡುತ್ತಿದ್ದ ಹಿಂದುಗಳ ಮೇಲೆ ಮುಸ್ಲಿಮರು ದೌರ್ಜನ್ಯ ಎಸಗಿದ್ದುದರ ಕುರಿತಂತೆ ಹೆಚ್ಚಿನ ಮಾಹಿತಿ ಹೊರಬರತೊಡಗಿದೆ.

    ಅಂದು ಪಶ್ಚಿಮ ಬಂಗಾಳದಲ್ಲಿ ಒಂದು ದಿನದ ಲಾಕ್‌ಡೌನ್ ಘೋಷಿಸಲಾಗಿತ್ತು. ಶ್ರೀರಾಮಪೂಜೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಕೆಲವು ಪ್ರದೇಶಗಳಲ್ಲಿ ಹಿಂದುಗಳು ಸಣ್ಣ ಪ್ರಮಾಣದಲ್ಲಿ ಶ್ರೀರಾಮಪೂಜೆ ಏರ್ಪಡಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ ಕೆಲವರನ್ನು ಎಳೆದೊಯ್ದಿದ್ದರು. ಪೂಜಾ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಹೀಗೆ ಮಾಡಿದ್ದು ಪೊಲೀಸರು ಮಾತ್ರವಲ್ಲ, ಅವರ ಜತೆ ಮುಸ್ಲಿಮರೂ ಸೇರಿದ್ದರು ಎಂಬ ಅಂಶ ಈಗ ಬಯಲಾಗಿದೆ. ಇದನ್ನೂ ಓದಿ ಮುಂದಿನ ಪೀಳಿಗೆಗೆ ಶ್ರೀರಾಮಮಂದಿರ ಸ್ಫೂರ್ತಿ: ಪ್ರಧಾನಿ ಮೋದಿ

    ಅಂದು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದ ಮುಸ್ಲಿಮರು ಶ್ರೀರಾಮಮಂದಿರ ನಿರ್ಮಾಣ ಶಿಲಾನ್ಯಾಸದ ಐತಿಹಾಸಿಕ ಕ್ಷಣವನ್ನು ಆಚರಿಸಲು ಹಿಂದುಗಳಿಗೆ ಅಡ್ಡಿ ಮಾಡುತ್ತಿದ್ದರು. ಪೂಜಾ ಸ್ಥಳಗಳಿಗೆ ದಾಳಿ ಮಾಡುತ್ತಿದ್ದರು. ಪೊಲೀಸರು ಇವರನ್ನು ನಿಯಂತ್ರಿಸುವ ಗೋಜಿಗೇ ಹೋಗಲಿಲ್ಲ. ಕೋಲ್ಕತಾದ ರಜಾಬಜಾರ್ ಎಂಬ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಈ ದೃಶ್ಯಗಳು ಕಂಡುಬಂದವು. ಅಲ್ಲಿನ ಅಂಗಡಿಗಳ ಮುಂದೆ ಹಾಕಲಾಗಿದ್ದ ಕೇಸರಿ (ಭಗವಾ) ಧ್ವಜಗಳನ್ನು ನೋಡಿಯೇ ಅವರು ಕೆರಳಿ ಕೆಂಡವಾಗಿದ್ದರು. ಆ ಧ್ವಜಗಳನ್ನು ಅವರು ಕಿತ್ತೆಸೆಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಹಿಂದುಗಳ ಜತೆ ವಾದಕ್ಕಿಳಿದ ಮುಸ್ಲಿಮರು, ‘‘ಈ ಏರಿಯಾ ಮಾತ್ರವಲ್ಲ, ಇಡೀ ದೇಶವೇ ನಮ್ಮದು. ಎಲ್ಲಾ ಕೇಸರಿ ಧ್ವಜಗಳನ್ನೂ ಸುಟ್ಟು ಹಾಕುತ್ತೇವೆ’’ ಎನ್ನುತ್ತಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಇನ್ನಷ್ಟು ಮುಸ್ಲಿಮರು ಬರುತ್ತಾರೆ. ಜಗಳ ಇನ್ನಷ್ಟು ತಾರಕಕ್ಕೆ ಏರುತ್ತದೆ. ಇವರ‌್ಯಾರಿಗೂ ಪೊಲೀಸರ ಭಯವೇ ಇರುವುದಿಲ್ಲ. ‘ಉತಾರೋ ಉತಾರೋ ಸಬ್ ಕೋ’ (ಧ್ವಜಗಳನ್ನೆಲ್ಲ ಕೆಳಗಿಳಿಸಿ) ಎಂದು ಕೂಗುತ್ತಾರೆ. ಅವರಲ್ಲೊಬ್ಬ ‘ಘುಸ್ ಕೆ ಮಾರೋ ಸಾಲೋ ಕೊ’ (ನುಗ್ಗಿ ಹೊಡೀರಿ) ಎಂದು ಧಮಕಿ ಹಾಕುತ್ತಾನೆ. ಇದೆಲ್ಲವೂ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಗಳು ವೈರಲ್ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts