More

    ವೀರ ಸಾವರ್ಕರ್​ ಹಾಗೂ ಶ್ಯಾಮ್​ ಪ್ರಸಾದ್​ ಮುಖರ್ಜಿಗೆ ಗಣರಾಜ್ಯೋತ್ಸವದಂದು ಭಾರತ ರತ್ನ ಪುರಸ್ಕಾರ ಘೋಷಣೆ?

    ನವದೆಹಲಿ: ಗಣರಾಜ್ಯೋತ್ಸವದಂದು ಕೇಂದ್ರ ಸರ್ಕಾರ ವೀರ ಸಾವರ್ಕರ್​ ಹಾಗೂ ಶ್ಯಾಮ್​ ಪ್ರಸಾದ್​ ಮುಖರ್ಜಿ ಅವರಿಗೆ ಭಾರತ ರತ್ನ ಪುರಸ್ಕಾರ ಘೋಷಣೆ ಮಾಡಲಿದೆ ಎಂದು ಅಖಿಲ ಭಾರತ ಹಿಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ತಿಳಿಸಿದ್ದಾರೆ.

    ವೀರ ಸಾವರ್ಕರ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡುವಂತೆ ಅಖಿಲ ಭಾರತ ಹಿಂದು ಮಹಾಸಭಾ ಪ್ರಧಾನಿ ಅವರನ್ನು ಒತ್ತಾಯಿಸಿದೆ. ಅಲ್ಲದೆ ಸ್ವಾಮಿ ಚಕ್ರಪಾಣಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಕೂಡ ಬರೆದಿದ್ದಾರೆ.

    ಇಬ್ಬರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಹಲವು ಬಾರಿ ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ. ಇಬ್ಬರು ಮಹಾನ್​ ದೇಶ ಭಕ್ತರು. 2ನೇ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇಬ್ಬರಿಗೆ ಭಾರತ ರತ್ನ ನೀಡುವ ಭರವಸೆಯನ್ನು ಬಿಜೆಪಿ ನೀಡಿತ್ತು. ಈಗ ಅಧಿಕಾರದಲ್ಲಿ ಇದೆ. ಗಣರಾಜ್ಯೋತ್ಸವದಂದು ಘೋಷಣೆ ಮಾಡಬೇಕು ಎಂದರು.

    ವೀರ ಸಾವರ್ಕರ್ 1937 ರಿಂದ 1942 ರವರೆಗೆ ಅಖಿಲ ಭಾರತ ಹಿಂದು ಮಹಾಸಭಾದ 15 ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಸಭಾದ 16 ನೇ ರಾಷ್ಟ್ರೀಯ ಅಧ್ಯಕ್ಷರಾಗಿ 1943 ರಿಂದ 1944 ರವರೆಗೆ ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts