More

    ಹಿಂದುಗಳಿಗೆ ಪವಿತ್ರ ದಿನ

    ಮಸ್ಕಿ: ನೂರಾರು ವರ್ಷಗಳ ಹೋರಾಟದ ಫಲದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಉದ್ಘಾಟನೆ ಆಗುತ್ತಿದ್ದು, ಅದರ ಸಂಭ್ರಮಾಚರಣೆಯನ್ನು ಪಟ್ಟಣದ ಮಂದಿರಗಳಲ್ಲಿ ಆಚರಿಸುವ ಮೂಲಕ ಹಿಂದುಗಳ ಒಗ್ಗಟ್ಟನ್ನು ಪ್ರದರ್ಶಿಸೋಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಆನಂದ ಆಪ್ಟೆ ಹೇಳಿದರು.

    ಪಟ್ಟಣದ ಭ್ರಮರಾಂಬ ದೇವಸ್ಥಾನದ ಸಭಾಂಗಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ ಸ್ಥಳೀಐ ಘಟಕದ ವತಿಯಿಂದ ಆಯೋಜಿಸಿದ್ದ ಅಯೋಧ್ಯೆಯಿಂದ ತಂದ ಅಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
    1200 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿದ್ದ ರಾಮ ಮಂದಿರ ಕಟ್ಟಡವನ್ನು ದಾಳಿಕೋರರು ನಾಶ ಮಾಡಿದ್ದರು. ಈ ಕುರಿತು ನ್ಯಾಯಾಲಯಗಳಲ್ಲಿ ಹಲವಾರು ವರ್ಷ ಹೋರಾಟ ನಡೆಸಿದ ಬಳಿಕ 2019 ರಲ್ಲಿ ಹಿಂದುಗಳ ಪರವಾಗಿ ತೀರ್ಪು ಬಂದಿದೆ. ಆ ಬಳಿಕ ಆರಂಭವಾದ ರಾಮ ಮಂದಿರ ನಿರ್ಮಾಣ ಕಾರ್ಯ ಮುಗಿದಿದ್ದು, ಜ.22 ರಂದು ಉದ್ಘಾಟನೆಯಾಗಲಿದೆ. ಹಿಂದುಗಳಿಗೆ ಜ.22 ಪವಿತ್ರ ದಿನವಾಗಲಿದೆ ಎಂದು ಆನಂದ ಆಪ್ಟೆ ತಿಳಿಸಿದರು.

    ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಜ.22 ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿಯೊಂದು ಮನೆಗೆ ಅಕ್ಷತೆ ವಿತರಣೆ ಮಾಡಿ, ದೀಪ ಬೆಳಗುವ ಮೂಲಕ ಅಖಂಡತೆ ಪ್ರದರ್ಶಿಸೋಣ. ಈ ಕುರಿತು ಹಿಂದೂ ಸಮಾಜದ ಕಾರ್ಯಕರ್ತರು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಬೇಕೆಂದು ಸಲಹೆ ನೀಡಿದರು. ವರರುದ್ರಮುನಿ ಶಿವಾಚಾರ್ಯರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಶಿವಕುಮಾರ ಎನ್., ಪರಮೇಶ, ಬಿ.ಎಚ್.ದಿವಟರ್ ಹಾಗೂ ಇತರರಿಗೆ ಅಕ್ಷತೆ ವಿತರಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts