More

    ಹಾವಿನ ಮೊಟ್ಟೆ ಒಡೆಯಲು 54 ದಿನ ಹೆದ್ದಾರಿ ಕಾಮಗಾರಿ ಸ್ಥಗಿತ!

    ಕುಂಬಳೆ: ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು 54 ದಿನ ಸ್ಥಗಿತಗೊಳಿಸಿತ್ತು!

    ಹಾವು ಮೊಟ್ಟೆ ಇಡುವ ತನಕ ಕಾಯುತ್ತಿದ್ದುದೇ ಇದಕ್ಕೆ ಕಾರಣ. ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್ ಸೊಸೈಟಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಕಾಮಗಾರಿಯನ್ನು ತಡೆಹಿಡಿದಿತ್ತು. ಸೋಮವಾರ 24 ಮೊಟ್ಟೆಗಳು ಒಡೆದಿವೆ. ಹದಿನೈದು ಹಾವಿನ ಮರಿಗಳನ್ನು ಕಾಡಿಗೆ ಕಳುಹಿಸಲಾಗಿದೆ. ಉಳಿದ ಒಂಬತ್ತು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ಉರಗಜ್ಞ ಅಮೀನ್ ತಿಳಿಸಿದ್ದಾರೆ.

    ಘಟನೆ ಹಿನ್ನೆಲೆ: ರಸ್ತೆ ಕಾಮಗಾರಿ ವೇಳೆ ಹಾವನ್ನು ಗಮನಿಸಿ, ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಮೊಟ್ಟೆಗಳಿಗೆ ಕಾವು ನೀಡುತ್ತಿರುವ ಅಂಶ ಗಮನಕ್ಕೆ ಬಂತು. ನಂತರ ವನ್ಯಜೀವಿ ಇಲಾಖೆ ಸಂಶೋಧನಾ ಮುಖ್ಯಸ್ಥ ಮವೀಶ್ ಕುಮಾರ್, ಈ ಸಂದರ್ಭ ಹಾವಿನ ಸ್ಥಳಾಂತರ ಸರಿಯಲ್ಲ ಎಂದು ಸಲಹೆ ನೀಡಿದರು. ಮೊಟ್ಟೆ ಒಡೆಯಲು 27 ಸೆಂ.ನಿಂದ 31 ಸೆಂ.ತಾಪಮಾನ ಬೇಕು. ತಾಯಿ ಹಾವಿನ ಕಾವು ಮೊಟ್ಟಿಗಳಿಗೆ ಸಿಗಬೇಕು. ಮೊಟ್ಟೆ ಒಡೆದು ಮರಿಗಳು ಹೊರಬರಲು 54ನೇ ದಿನ ಬೇಕು. ಬಳಿಕ ಹಾವನ್ನು ಸ್ಥಳಾಂತರಿಸಬಹುದು ಎಂದು ಅವರು ತಿಳಿಸಿದ್ದರು. ಸೋಮವಾರ ಹೆದ್ದಾರಿ ಕಾಮಗಾರಿ ಪುನರಾರಂಭಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts