More

    ಗಡ್ಡೆ, ಗೆಣಸಿನಲ್ಲಿ ವಿಟಮಿನ್ ಹೆಚ್ಚು

    ಜೊಯಿಡಾ: ಗಡ್ಡೆ, ಗೆಣಸುಗಳಲ್ಲಿ ಹೆಚ್ಚಿನ ವಿಟಮಿನ್​ಗಳಿವೆ. ಇವುಗಳ ಬಳಕೆಯಿಂದ ಆರೊಗ್ಯ ವೃದ್ಧಿಯಾಗುತ್ತದೆ. ಇವುಗಳ ಮೌಲ್ಯವರ್ಧನೆ ಮಾಡುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಿ ಆರ್ಥಿಕವಾಗಿ ಸದೃಡರಾಗಬೇಕು ಎಂದು ಕೊಲ್ಲಾಪುರದ ಶಿವಾಜಿ ಯುನಿವರ್ಸಿಟಿಯ ವಿಜ್ಞಾನಿ ಎಸ್.ಆರ್. ಯಾದವ ಹೇಳಿದರು.

    ಜೊಯಿಡಾ ಕುಣಬಿ ಸಮಾಜ ಭವನದಲ್ಲಿ ಕುಣಬಿ ಸಮಾಜ ಅಭಿವೃದ್ಧಿ ಸಂಘ, ತಾಲೂಕು ಗಡ್ಡೆ, ಗೆಣಸು ಬೆಳೆಗಾರರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಗಡ್ಡೆ, ಗೆಣಸುಗಳ ಪ್ರದರ್ಶನ- ಸ್ಪರ್ಧೆ- ಮಾರಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಬೆಂಗಳೂರಿನ ಐಐಎಸ್​ಸಿ ವಿಜ್ಞಾನಿ ಡಾ. ಸುಭಾಷಚಂದ್ರ ಮಾತನಾಡಿ, ಹಿಂದುಳಿದ ತಾಲೂಕು ಜೊಯಿಡಾದಲ್ಲಿ ನಡೆಯುತ್ತಿರುವ ಗಡ್ಡೆ, ಗೆಣಸು ಮೇಳ ನನಗೆ ಖುಷಿ ತಂದಿದೆ. ಕುಣಬಿ ಸಮಾಜದವರು ಕಾಲಕಾಲದಿಂದ ಕುಂಬ್ರಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಗಡ್ಡೆ, ಗೆಣಸು ಮಳೆಯಲ್ಲೂ ಚೆನ್ನಾಗಿ ಬೆಳೆಯುತ್ತದೆ. ಭತ್ತದ ಕೃಷಿ ಜತೆಗೆ ಉಪಬೆಳೆಯಾಗಿ ಇವುಗಳನ್ನು ಬೆಳೆಯಲಾಗುತ್ತದೆ. ಈಗ ಗಡ್ಡೆ, ಗೆಣಸುಗಳ ಜೀವ ವೈವಿಧ್ಯದ ದಾಖಲಾತಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದರು.

    ನಾಣಿಜ ಪೀಠದ ವೆರ್ಣೆಕರ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿದರು. ಬಾಲಚಂದ್ರ ಹೆಗಡೆ, ಜಯಾನಂದ ಡೇರೆಕರ, ವಿನೋದ ಮೀರಾಶಿ ಇತರರು ಇದ್ದರು. ಪ್ರಸನ್ನ ಗಾವಡಾ ನಿರ್ವಹಿಸಿದರು.

    172ಕ್ಕೂ ಹೆಚ್ಚು ಮಳಿಗೆ
    ಒಟ್ಟು 52 ಜಾತಿಯ ಗಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗಡ್ಡೆ, ಗೆಣಸು ಬೆಳೆಗಾರರು ಭಾಗವಹಿಸಿದ್ದು, 172ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ಅದರಲ್ಲಿ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ಜೊಯಿಡಾ ಕುಣಬಿ ಮುಡ್ಲಿ (ಕೇಸುವಿನ ಗಡ್ಡೆ) ಮಾರಾಟಕ್ಕಾಗಿ ಬಂದಿವೆ. ಗೋವಾ ಮತ್ತು ಹೊರ ಜಿಲ್ಲೆಯಿಂದ ಬಂದವರು ಹೆಚ್ಚಾಗಿ ಇದನ್ನು ಖರೀದಿಸುತ್ತಿರುವುದು ಕಂಡು ಬಂತು. ವಿವಿಧ ಬಗೆಯ ಖಾದ್ಯಗಳನ್ನು ಸಹ ಜನರು ಖರೀದಿಸಿ ಸವಿಯುತ್ತಿದ್ದ ದೃಶ್ಯ ಕಂಡು ಬಂತು. ಇಲ್ಲಿ ಪ್ರದರ್ಶನಕ್ಕೆ ತಂದಿದ್ದ ಕುಣಬಿ ಮುಡ್ಲಿ, ಕೋನ, ಆಳೆ ಕೋನ, ಗೆಣಸಿನಿಂದ ಮಾಡಿದ ಖಾದ್ಯಕ್ಕೆ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts