More

    ಇಂದು ಪ್ರೌಢಶಾಲೆ ಲೋಕಾರ್ಪಣೆ; ಎಂಎಲ್‌ಸಿ ಚಿದಾನಂದಗೌಡ ವಿಶೇಷ ಕಾಳಜಿ ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ

    ತುಮಕೂರು;ಶಿರಾ: ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ವಿಶೇಷ ಆಸಕ್ತಿವಹಿಸಿ ನಿರ್ಮಿಸಿರುವ ಸರ್ಕಾರಿ ಶಾಲೆಯ ಸುಸಜ್ಜಿತ, ಹೈಟೆಕ್ ಕಟ್ಟಡ ಗಮನ ಸೆಳೆಯುತ್ತಿದ್ದು, ಫೆ.3ರಂದು ಲೋಕಾರ್ಪಣೆಗೊಳ್ಳಲಿದೆ.

    ಶಿರಾ ಪ್ರೆಸಿಡೆನ್ಸಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಚಿದಾನಂದ ಎಂ.ಗೌಡ ಸರ್ಕಾರಿ ಶಾಲೆಯನ್ನೂ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ನಿರ್ಮಿಸಲು ಶ್ರಮಿಸಿದ್ದು, ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಎದ್ದು ನಿಂತಿದೆ.

    ಇಂದು ಪ್ರೌಢಶಾಲೆ ಲೋಕಾರ್ಪಣೆ; ಎಂಎಲ್‌ಸಿ ಚಿದಾನಂದಗೌಡ ವಿಶೇಷ ಕಾಳಜಿ ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ ಇಂದು ಪ್ರೌಢಶಾಲೆ ಲೋಕಾರ್ಪಣೆ; ಎಂಎಲ್‌ಸಿ ಚಿದಾನಂದಗೌಡ ವಿಶೇಷ ಕಾಳಜಿ ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ

    ಶಾಸಕರಾದ ನಂತರ ಚಿದಾನಂದಗೌಡ ಗಡಿನಾಡಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕು ಎಂದು ನಿರ್ಧರಿಸಿ ತಾವು ಓದಿದ್ದ ಬರಗೂರು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದು ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕುವಂತಾಗಲು ಮೊದಲ ಹೆಜ್ಜೆ ಎನಿಸಿದೆ.

    ಇಂದು ಪ್ರೌಢಶಾಲೆ ಲೋಕಾರ್ಪಣೆ; ಎಂಎಲ್‌ಸಿ ಚಿದಾನಂದಗೌಡ ವಿಶೇಷ ಕಾಳಜಿ ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ
    ಶಿರಾದ ಸರ್ಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲು ವಿಭಾಗದ ಹೈಟೆಕ್ ಶೌಚಾಲಯ.

    ಅದೇ ಮಾದರಿಯಲ್ಲಿ ಶಿರಾ ನಗರದಲ್ಲಿ ಮೈಸೂರು ಅರಸರು ನಿರ್ಮಿಸಿದ್ದ ಸರ್ಕಾರಿ ಪ್ರೌಢಶಾಲೆ ಬಗ್ಗೆಯೂ ವಿಶೇಷ ಆಸಕ್ತಿವಹಿಸಿ ಬರೋಬ್ಬರಿ 1ಕೋಟಿ ರೂ.ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಿಸಿದ್ದಾರೆ. ನೆಲ ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದು, ಮೊದಲನೇ ಅಂತಸ್ತಿನ ಕಟ್ಟಡದ ಕಾಮಗಾರಿಯೂ ನಡೆಯುತ್ತಿದ್ದು, ಯೋಜನಾ ವೆಚ್ಚ 5 ಕೋಟಿ ರೂ.ಗೆ ಏರಿದೆ.

    ಹೈಟೆಕ್ ಕಟ್ಟಡದಲ್ಲಿ ಸುಸಜ್ಜಿತ ಲೈಬ್ರರಿ, ಕಂಪ್ಯೂಟರ್ ಲ್ಯಾಬ್, ವಿಜ್ಞಾನದ ಪ್ರಯೋಗಾಲಯ, ಕ್ರೀಡಾ ಕೊಠಡಿ ಲಭ್ಯವಿದ್ದು, ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಪೀಠೋಪಕರಣಗಳ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

    ‘ಶಿರಾ’ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ!:

    ಇಂದು ಪ್ರೌಢಶಾಲೆ ಲೋಕಾರ್ಪಣೆ; ಎಂಎಲ್‌ಸಿ ಚಿದಾನಂದಗೌಡ ವಿಶೇಷ ಕಾಳಜಿ ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ
    ಪಿಯು ಕಾಲೇಜು ಕಟ್ಟಡದ ಒಳಾಂಗಣ ನೋಟ.

    ಶಾಸಕ ಚಿದಾನಂದ ಎಂ.ಗೌಡ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿರುವ ಶಿರಾ ಹಾಗೂ ಬರಗೂರು ಸರ್ಕಾರಿ ಶಾಲೆಗಳು ರಾಜ್ಯಕ್ಕೆ ಮಾದರಿ ಎನಿಸಿವೆ. ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಇದೆ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ಮೂಡಿದ್ದು, ಗಡಿ ತಾಲೂಕಿನಲ್ಲಿಯೂ ಕನ್ನಡ ಶಾಲೆಗಳ ಉಳಿವು ಸಾಧ್ಯವಾಗಿದೆ.

    ಜನ್ಮದಿನ ಸರ್ಕಾರಿ ಶಾಲೆಗಳ ಉತ್ಸವ: ಚಿದಾನಂದಗೌಡ ತಮ್ಮ ಜನ್ಮದಿನವನ್ನು ಸರ್ಕಾರಿ ಶಾಲೆಗಳ ಉತ್ಸವದ ರೀತಿ ಆಚರಿಸಿಕೊಳ್ಳುತ್ತಿರುವುದು ವಿಶೇಷ ಎನಿಸಿದೆ. ಫೆ.3ರಂದು ಶಿರಾ ಸರ್ಕಾರಿ ಹೈಸ್ಕೂಲ್ ಕಟ್ಟಡ ಉದ್ಘಾಟನೆ ಮೂಲಕ ಜನ್ಮದಿನವನ್ನು ಸಾರ್ಥಕವಾಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಓದಿರುವ ಎಲ್ಲ ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದ್ದು ಮಹಾಸಂಗಮವೇ ನಡೆಯಲಿದೆ.

    ಇಂದು ಕಾರ್ಯಕ್ರಮವೇನು?: ಬೆಳಗ್ಗೆ 9.30ರಿಂದ ತುಮಕೂರು ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಶಾಲೆಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಮತ್ತಿತರರು ಭಾಗವಹಿಸುವರು. ಪಿಯು ಕಾಲೇಜು ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಸಾಂಸ್ಕ ೃತಿಕ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ 6ಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ.

    ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಕಾರಣಕ್ಕೆ ನನಗೆ ಬಂದ ಅನುದಾನವನ್ನು ಸಂಪೂರ್ಣವಾಗಿ ಇದಕ್ಕೆ ಬಳಸಿದ್ದೇನೆ. ಶಿರಾ ಸರ್ಕಾರಿ ಹೈಸ್ಕೂಲ್ ಮಾದರಿಯಾಗಿದೆ. ನನ್ನ ಪ್ರಯತ್ನ ಎಲ್ಲ ಶಾಸಕರಿಗೂ ಮಾದರಿಯಾಗಲಿದೆ.
    | ಚಿದಾನಂದ ಎಂ.ಗೌಡ ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts