More

    ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್​: ಭರ್ಜರಿ ಮಾರಾಟ

    ಭೋಪಾಲ್​ (ಮಧ್ಯಪ್ರದೇಶ): ಕರೊನಾ ವೈರಸ್​ ಶುರುವಾದಾಗಿನಿಂದಲೂ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಮಾಸ್ಕ್​ಗಳಿಗೆ ಭಾರಿ ಡಿಮಾಂಡ್​ ಶುರುವಾಗಿದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಉದ್ಯೋಗ ಇಲ್ಲದವರೆಲ್ಲರೂ ಮಾಸ್ಕ್​ ಮಾರಾಟಕ್ಕೆ ಮುಂದಾಗಿರುವುದು ಹೊಸ ವಿಷಯವಲ್ಲ. ಕರೊನಾ ವೈರಸ್​ ಸದ್ಯ ನಮ್ಮ ವಾತಾವರಣವನ್ನು ಬಿಟ್ಟು ಹೋಗುವುದಿಲ್ಲ ಎಂದು ತಿಳಿಯುತ್ತಲೇ ಮಾಸ್ಕ್​ನಲ್ಲಿಯೇ ಹೊಸ ಹೊಸ ರೀತಿಯ ಆವಿಷ್ಕಾರ ಮಾಡಲು ಮಾರಾಟಗಾರರು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಜೋಕ್​ಗಳು ಕೂಡ ಇದಾಗಲೇ ಹರಿದಾಡುತ್ತಿವೆ.

    ಮಾಸ್ಕ್​ನ ತಯಾರಿಕೆಯಲ್ಲಿ ಕಾಂಪಿಟೇಷನ್​ ಹೆಚ್ಚುತ್ತಲೇ ಭೋಪಾಲ್​ನ ಮಾರಾಟಗಾರರು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಕ್​ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಇದಾಗಿದೆ.

    ಇದನ್ನೂ ಓದಿ: ಕರೊನಾ ಸಂಕಷ್ಟದ ನಡುವೆ ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ

    ಇದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದಂತೆಯೇ ಗ್ರಾಹಕರು ತಾಮುಂದು, ನಾಮುಂದು ಎಂದು ಖರೀದಿಸುತ್ತಿದ್ದಾರಂತೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಸಹ ಲಭ್ಯವಿದ್ದು, ಜನರು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಧಾನಿಯವರ ಮಾಸ್ಕ್​ ಬೇಕೆಂದು ಬೇಡಿಕೆ ಇಡುತ್ತಿದ್ದಾರೆ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಕುನಲ್ ಪರಿಯಾನಿ.

    ಒಂದೇ ದಿನ ನೂರಾರು ಮಾಸ್ಕ್​ಗಳು ಸೇಲ್​ ಆಗುತ್ತಿದ್ದು, ಈ ಪೈಕಿ ಅತ್ಯಧಿಕ ಬೇಡಿಕೆ ಇರುವುದು ಮೋದಿ ಅವರ ಮಾಸ್ಕ್​ಗೆ. ಅನೇಕ ಮಂದಿ ಇದೇ ರೀತಿಯ ಮಾಸ್ಕ್​ ತಯಾರಿ ಮಾಡಿ ತಮಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ ಎನ್ನುತ್ತಾರವರು.

    ಮಧ್ಯ ಪ್ರದೇಶದಲ್ಲಿ ಇಲ್ಲಿಯವರೆಗೆ 10,935 ಜನರು ಕರೊನಾ ಸೋಂಕಿತರಾಗಿದ್ದು, 465 ಮಂದಿ ಮೃತಪಟ್ಟಿದ್ದಾರೆ.. ಭೋಪಾಲ್ ನಗರದಲ್ಲಿ ಮಾತ್ರ 2235 ಜನರಿಗೆ ಸೋಂಕು ಅಂಟಿಕೊಂಡಿದ್ದು, 72 ಮಂದಿ ಮೃತಪಟ್ಟಿದ್ದಾರೆ. ಆದ್ದರಿಂದ ಮಾಸ್ಕ್​ ಬೇಡಿಕೆ ಇಲ್ಲಿ ಸಹಜವಾಗಿ ಹೆಚ್ಚಾಗಿದೆ.

    ಮದುವೆಗೆ ಎಂಟ್ರಿ ಕೊಟ್ಟ ಪ್ರೇಮಿಯನ್ನು ಎಲ್ಲರೆದುರೇ ಅಪ್ಪಿ ಮುದ್ದಾಡಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts