More

    ಪ್ರಚಾರಕ್ಕಾಗಿ ಸಭೆ-ಸಮಾರಂಭ ತಪ್ಪಿಸಿ; ರಾಜಕಾರಣಿಗಳಿಗೆ ಹೈಕೋರ್ಟ್ ಸಲಹೆ

    ಮಧ್ಯಪ್ರದೇಶ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಒಂದಷ್ಟು ಮಾರ್ಗಸೂಚಿಗಳು ಇರುವುದರಿಂದ ಅದನ್ನು ಪಾಲಿಸಲೇಬೇಕು ಎಂದು ನಿರ್ದೇಶನ ನೀಡಿರುವ ಹೈಕೋರ್ಟ್​, ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೂ ಸೂಚನೆಯೊಂದನ್ನು ನೀಡಿದೆ.

    ಕೋವಿಡ್​ 19 ನಿಯಮ ಉಲ್ಲಂಘಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್​​ನ ಗ್ವಾಲಿಯರ್​ ಪೀಠ ಈ ಸೂಚನೆಯನ್ನು ನೀಡಿದೆ. ಸಭೆ-ಸಮಾರಂಭಗಳಿಂದ ಕರೊನಾ ವೈರಸ್ ಹರಡುತ್ತದೆ ಎಂಬುದು ಸಾಬೀತಾಗಿದೆ. ಅಲ್ಲದೆ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಹೀಗಾಗಿ ಪ್ರಚಾರಕ್ಕಾಗಿ ಎಲೆಕ್ಟ್ರಾನಿಕ್​ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಪೀಠ ಸಲಹೆ ನೀಡಿದೆ.

    ಮಧ್ಯಪ್ರದೇಶದಲ್ಲಿ ನವೆಂಬರ್​ 3ರಿಂದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಪೈಕಿ 25 ಕೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರು ಬಿಜೆಪಿಗೆ ಪಕ್ಷಾಂತರ ಆಗಿರುವುದರಿಂದ ಹಾಗೂ 3 ಕ್ಷೇತ್ರಗಳಲ್ಲಿ ಶಾಸಕರ ನಿಧನದಿಂದಾಗಿ ಉಪ ಚುನಾವಣೆ ನಡೆಯುವಂತಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts