More

    ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿ ಗುತ್ತಿಗೆ ರದ್ದು ನಿರ್ಧಾರಕ್ಕೆ ಹೈಕೋರ್ಟ್ ತಡೆ

    ಬೆಂಗಳೂರು: ಲಾಲ್‌ಬಾಗ್​ನಲ್ಲಿದ್ದ ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌‌ಗೆ ನರ್ಸರಿ ನಡೆಸಲು ನೀಡಿದ್ದ ಗುತ್ತಿಗೆ ರದ್ದುಗೊಳಿಸಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಗುತ್ತಿಗೆ ರದ್ದುಪಡಿಸುವ ಸರ್ಕಾರದ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಆಕ್ಷೇಪಿಸಿ ಸೊಸೈಟಿಯ ಉಪಾಧ್ಯಕ್ಷ ಗೋವಿಂದ್ ಮತ್ತು ಸದಸ್ಯ ನಿರ್ದೇಶಕ ಆರ್. ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

    ನರ್ಸರಿಗೆ ಏಕಾಏಕಿ ಬೀಗ ಹಾಕಿರುವುದರಿಂದ ಅ.21ರಿಂದ ಅಂದಾಜು ಒಂದೂವರೆ ಕೋಟಿ ಮೌಲ್ಯದ ಗಿಡಗಳಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಇದರಿಂದ, ಸೊಸೈಟಿಯ ಆದಾಯಕ್ಕೆ ನಷ್ಟ ಉಂಟಾಗಿದೆ. ಆದ್ದರಿಂದ, ತಕ್ಷಣವೇ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

    ಅರ್ಜಿದಾರರ ಆಕ್ಷೇಪವೇನು?: ಸರ್ಕಾರ 1991ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಲಾಲ್‌ಬಾಗ್‌ನಲ್ಲಿ 1 ಎಕರೆ 29 ಗುಂಟೆ ಭೂಮಿಯನ್ನು 25 ವರ್ಷಗಳ ಅವಧಿಗೆ ನರ್ಸರಿ ಚಟುವಟಿಕೆ ನಡೆಸಲು ಗುತ್ತಿಗೆ ರೂಪದಲ್ಲಿ ಪರವಾನಿಗೆ ನೀಡಿತ್ತು. ಗುತ್ತಿಗೆ ಅವಧಿಯು 2016ರಲ್ಲಿ ಪೂರ್ಣಗೊಂಡಿತ್ತು. ಇದಕ್ಕೂ ಮುನ್ನವೇ ಸರ್ಕಾರಕ್ಕೆ ಪತ್ರ ಬರೆದು ಮತ್ತೆ 25 ವರ್ಷಗಳವರೆಗೆ ಗುತ್ತಿಗೆಯನ್ನು ನವೀಕರಿಸಲು ಸೊಸೈಟಿ ಮನವಿ ಮಾಡಿತ್ತಾದರೂ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹೀಗಿದ್ದರೂ, 2016ತರಿಂದ 2022 ರ ನಡುವೆ ಸರ್ಕಾರಕ್ಕೆ ಅಗತ್ಯ ತರಿಗೆಗಳನ್ನು ಪಾವತಿಸಿಲಾಗಿದೆ. ಆದರೆ, ಈಗ ಸರ್ಕಾರ ಏಕಾಏಕಿ ಗುತ್ತಿಗೆ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

    ಟ್ವಿಟರ್​ಗೆ ಎಲಾನ್ ಮಸ್ಕ್ ಮಾಲೀಕತ್ವ; ಮರಳಿ ಸಿಗುತ್ತಾ ನಟಿ ಕಂಗನಾಗೆ ಟ್ವಿಟರ್ ಅಕೌಂಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts