More

    ಶಾಲಾ ಕಟ್ಟಡಗಳ ಮೇಲೆ ಹೈಟೆಕ್ ಭೋಜನಾಲಯ: ದೀರ್ಘ ಬಾಳಿಕೆಗೆ ನರೇಗಾದಲ್ಲಿ ಕ್ರಮ

    | ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

    ಶಾಲಾ ಕಟ್ಟಡಗಳ ಮೇಲೆ ಹೈಟೆಕ್ ಭೋಜನಾಲಯ ನಿರ್ಮಿಸಿ ಕಟ್ಟಡಕ್ಕೆ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ನರೇಗಾ ಯೋಜನೆಗೆ ಮತ್ತಷ್ಟು ಮಹತ್ವ ನೀಡುತ್ತಿರುವ ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಅಧಿಕಾರಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

    ಸರ್ಕಾರಿ ಶಾಲೆಗಳೆಂದರೆ ಮೂಲಸೌಕರ್ಯವಿಲ್ಲ, ಕೂರಲು, ಊಟ ಮಾಡಲು, ಪಠ್ಯೇತರ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾದ ಸ್ಥಳವಿಲ್ಲ ಎಂದು ಮಾತನಾಡುತ್ತಿದ್ದವರೇ ಈಗ ಸರ್ಕಾರಿ ಶಾಲೆಗಳ ಹೈಟೆಕ್ ಅಭಿವೃದ್ಧಿ ನೋಡಿ ಮೆಚ್ಚುಗೆ ವಾತುಗಳನ್ನಾಡುವಂತಾಗಿದೆ. ಈ ನಿಟ್ಟಿನಲ್ಲಿ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ತಾಪಂ ಇಒ ಪ್ರದೀಪ್ ಮತ್ತು ಗ್ರಾಪಂ ಆಡಳಿತ ಹಾಗೂ ನರೇಗಾ ಅನುಷ್ಠಾನದ ತಂಡದ ಕಾರ್ಯ ಗಮನ ಸೆಳೆದಿದೆ.

    ಈಗಾಗಲೇ ಶಾಲೆಗಳ ಆಟದ ಮೈದಾನ, ಕಾಂಪೌಂಡ್, ಮೇಲ್ಛಾವಣೆ, ಕಟ್ಟಡ ಇತರ ಅಭಿವೃದ್ಧಿ ಕೆಲಸಗಳು ಕಾರ್ಯಗತಗೊಳ್ಳುತ್ತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಧಿಕಾರಿಗಳು ತಾಲೂಕಿನ ಹಲವು ಶಾಲೆಗಳ ಮೇಲ್ಛಾವಣಿಯಲ್ಲಿ ಭೋಜನಾಲಯ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಹಲವು ಪ್ರಯೋಜನಗಳು ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ.

    ಮಕ್ಕಳು ಊಟ ವಾಡಲು ಅನುಕೂಲವಾಗುವಂತೆ ಟೈಲ್ಸ್ ಅಳವಡಿಸಲಾಗಿದೆ. ಕೈ ತೊಳೆಯುವ ಸ್ಥಳದ ಜತೆಗೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಬಿಡುವಿನ ವೇಳೆಯಲ್ಲಿ ಓದಲು ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳು ಶಾಲೆ ಕಟ್ಟಡ ಮೇಲೆ ಶೀಟ್ ಅಳವಡಿಸಿದ್ದಾರೆ.

    ಅಭಿವೃದ್ಧಿ ಕಾಣುತ್ತಿರುವ ಭೋಜನಾಲಯಗಳು: ರಾಮನಗರ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಪಂ ವ್ಯಾಪ್ತಿಯ ಹುಲಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4.60 ಲಕ್ಷ ರೂ., ತಲಾ 10 ಲಕ್ಷ ರೂ. ವೆಚ್ಚದಲ್ಲಿ ಗೋಪಹಳ್ಳಿ ಗ್ರಾಪಂನ ರಾಮನಹಳ್ಳಿ ಸರ್ಕಾರಿ ಶಾಲೆ, ಎಂ. ಗೋಪಹಳ್ಳಿ ಶಾಲೆ, ಎಂ.ಜಿ.ಪಾಳ್ಯ ಶಾಲೆ, ಬಿಳಗುಂಬ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಭೋಜನಾಲಯಗಳು ಅಭಿವೃದ್ಧಿ ಕಾಣುತ್ತಿವೆ.

    ಶಾಲಾ ಕಟ್ಟಡಗಳ ಮೇಲೆ ಹೈಟೆಕ್ ಭೋಜನಾಲಯ: ದೀರ್ಘ ಬಾಳಿಕೆಗೆ ನರೇಗಾದಲ್ಲಿ ಕ್ರಮ
    ಹುಲಿಕೆರೆ ಶಾಲೆಯಲ್ಲಿ ನೆಲಕ್ಕೆ ಅಳವಡಿಸಿರುವ ಟೈಲ್ಸ್.

    ಏನೇನು ಅನುಕೂಲ? ಮಕ್ಕಳು ಕುಳಿತುಕೊಂಡು ಊಟ ವಾಡಲು ವಿಶಾಲವಾದ ಸ್ಥಳ, ಶಾಲೆಗಳ ಸಭೆ, ಸವಾರಂಭಕ್ಕೆ ಸ್ಥಳ, ಮಕ್ಕಳ ಬಿಡುವಿನ ವೇಳೆಯಲ್ಲಿ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆ ನಡೆಸಲು ಸ್ಥಳ, ಹೆಚ್ಚುವರಿ ಶಾಲಾ ಕೊಠಡಿಯಾಗಿ ಬಳಕೆ ಜತೆಗೆ ಮಳೆಯಿಂದ ಕಟ್ಟಡ ಸೋರುವುದನ್ನು ತಡೆಗಟ್ಟುವುದು, ಕಟ್ಟಡಕ್ಕೆ ಉತ್ತಮ ರಕ್ಷಣೆ, ಕಟ್ಟಡ ದೀರ್ಘಕಾಲ ಬಾಳಿಕೆ ಬರುವಂತೆ ವಾಡುವುದಾಗಿದೆ.

    ಕೇವಲ ಭೋಜನಾಲಯಕ್ಕೆ ಸೀಮಿತಗೊಳಿಸದೆ ಒಂದೇ ಯೋಜನೆಯಲ್ಲಿ ಮಕ್ಕಳಿಗೆ ಹಲವಾರು ಉಪಯೋಗ ಸಿಗಬೇಕು ಎಂಬ ದೃಷ್ಟಿಯೊಂದಿಗೆ ನರೇಗಾ ಯೋಜನೆಯಲ್ಲಿ ಸುಸಜ್ಜಿತವಾಗಿ ಹೈಟೆಕ್ ಭೋಜನಾಲಯ, ಕುಳಿತು ಊಟ ವಾಡಲು ಉತ್ತಮ ನೆಲಹಾಸು, ಶುದ್ಧ ನೀರಿನ ಕಿರು ಟಕ, ಮಕ್ಕಳ ಕಲಿಕೆಗೆ ಪೂರಕವಾಗಿ ಕಟ್ಟಡ ನಿರ್ಮಾಣ, ಸಾಂಸ್ಕೃತಿಕ ಚಟುವಟಿಕೆಗೆ, ಕಟ್ಟಡ ಮಳೆಯಿಂದ ಶಿಥಿಲಗೊಳ್ಳುವುದನ್ನು ತಡೆಯಲು ಈ ಯೋಜನೆ ಅನುಕೂಲವಾಗಿದೆ.
    | ರೂಪೇಶ್ ಕುಮಾರ್, ತಾಪಂ ಸಹಾಯಕ ನಿರ್ದೇಶಕ, ರಾಮನಗರ

    ಶಾಲಾ ಕಟ್ಟಡಗಳ ಮೇಲೆ ಹೈಟೆಕ್ ಭೋಜನಾಲಯ: ದೀರ್ಘ ಬಾಳಿಕೆಗೆ ನರೇಗಾದಲ್ಲಿ ಕ್ರಮ

    ಜಿಪಂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಳೆದ ಸಾಲಿನಿಂದ ನರೇಗಾ ಯೋಜನೆಯಲ್ಲಿ ಶಾಲಾ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಾಲೆಗಳಲ್ಲಿ ಭೋಜನಾಲಯ ನಿರ್ವಾಣ, ಶಾಲಾ ಕಟ್ಟಡಗಳ ದೀರ್ಘ ಬಾಳಿಕೆ ಸೇರಿ ಪಠ್ಯೇತರ ಚಟುವಟಿಕೆಗೂ ಅನುಕೂಲವಾಗುತ್ತದೆ. ಯೋಜನೆ ಉತ್ತಮವಾಗಿದ್ದು ತಾಲೂಕಿನ ಮತ್ತಷ್ಟು ಶಾಲೆಗಳಿಗೆ ವಿಸ್ತಾರಗೊಳ್ಳಲಿದೆ.
    | ಪ್ರದೀಪ್, ಕಾರ್ಯನಿರ್ವಹಣಾಧಿಕಾರಿ, ತಾಪಂ, ರಾಮನಗರ

    ಶಾಲಾ ಕಟ್ಟಡಗಳ ಮೇಲೆ ಹೈಟೆಕ್ ಭೋಜನಾಲಯ: ದೀರ್ಘ ಬಾಳಿಕೆಗೆ ನರೇಗಾದಲ್ಲಿ ಕ್ರಮ

    ನಿರ್ವಹಣೆ ಇಲ್ಲದೆ ಅದೆಷ್ಟೋ ಶಾಲೆಗಳ ಕಟ್ಟಡಗಳು ಹಾಳಾಗುತ್ತಿವೆ. ನರೇಗಾ ಯೋಜನೆ ಮೂಲಕ ಭೋಜನಾಲಯ ನಿರ್ವಾಣ, ಕಟ್ಟಡ ನಿರ್ವಹಣೆಗೆ ಅನುಕೂಲವಾಗುವುದರ ಜತೆಗೆ ಶಾಲಾ ಕೊಠಡಿಗಳ ಕೊರತೆ ಕೂಡ ನೀಗಿಸಬಹುದಾಗಿದೆ.
    | ತೇಜ ಸತೀಶ್, ಅಧ್ಯಕ್ಷೆ ಹುಲಿಕೆರೆಗುನ್ನೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts