ಚಂಡೀಗಢ: ಕಳೆದ ವಾರ ಹರಿಯಾಣದ ಸೋನಿಪತ್ನಲ್ಲಿ ನಡೆದ ಕರ್ತವ್ಯನಿರತ ಇಬ್ಬರು ಪೊಲೀಸ್ ಸಿಬ್ಬಂದಿಯ ಹತ್ಯೆಗೆ ಸಂಬಂಧಿಸಿದಂತೆ ಆರು ಆರೋಪಿಗಳಲ್ಲಿ ಐವರನ್ನು ಬಂಧಿಸಿರುವುದಾಗಿ ಹರಿಯಾಣ ಪೊಲೀಸರು ಖಚಿತಪಡಿಸಿದ್ದಾರೆ. ಕೊಲೆಗಾರರನ್ನು ಹಿಡಿಯಲು ಹೈರಾಣಾಗಿದ್ದ ಪೊಲೀಸರಿಗೆ ನೆರವಾಗಿದ್ದು, ಮೃತ ಪೊಲೀಸರೇ ಎಂಬುದು ಇಲ್ಲಿನ ವಿಶೇಷ.
ಹರಿಯಾಣದ ಜಿಂಧ್ ಜಿಲ್ಲೆಯಲ್ಲಿ ಪೊಲೀಸರ ಹತ್ಯೆ ನಡೆದಿತ್ತು. ಮೃತ ಪೊಲೀಸರಲ್ಲಿ ಒಬ್ಬರಾದ ರವೀಂದರ್ ಸಿಂಗ್ (28) ಅವರು ಸಾವಿನ ಕೊನೆಗಳಿಗೆಯಲ್ಲಿ ತನ್ನ ಅಂಗೈಯಲ್ಲಿ ಬರೆದುಕೊಂಡು ಕೊಲೆಗಾರರ ವಾಹನದ ನಂಬರ್ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಲು ನೆರವಾಯಿತು.
ಇದನ್ನೂ ಓದಿ: PHOTOS| ಥ್ರಿಲ್ ನೀಡಲು ಅಪ್ಸರಾ ರೆಡಿ: ಹಾಟ್ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್ಜಿವಿ!
ಇದಕ್ಕೂ ಮುನ್ನ ಕೊಲೆಗಾರರನ್ನು ಪತ್ತೆಹಚ್ಚಲು ಪೊಲೀಸರು ಹೆಣಗಾಡಿದ್ದರು. ಆದರೂ ಸಾಧ್ಯವಾಗಿರಲಿಲ್ಲ. ಮೃತ ಪೊಲೀಸ್ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವೇಳೆ ಅವರ ಕೈಮೇಲೆ ಬರೆಯಲಾಗಿದ್ದ ಸುಳಿವು ಪೊಲೀಸರಿಗೆ ದೊರೆತಿದೆ. ಇದೇ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾಗಿದೆ.
ಈ ಬಗ್ಗೆ ಮಾತನಾಡಿರುವ ಹರಿಯಾಣ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್, ನಮ್ಮ ದಿಟ್ಟ ಸಿಬ್ಬಂದಿ ರವೀಂದರ್ ಸಿಂಗ್ ಅವರು ಸಾವಿನ ಕೊನೆಗಳಿಗೆಯಲ್ಲೂ ನಮ್ಮ ಪೊಲೀಸ್ ಕೌಶಲ್ಯವನ್ನು ಮೆರದಿದ್ದಾರೆ. ಅವರಿಗೆ ಮರಣೋತ್ತರ ಪೊಲೀಸ್ ಪದಕಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರವಿಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ರಕ್ತಸಿಕ್ತವಾಗಿ ಬಿದ್ದಿರುವ ಸ್ಥಿತಿಯಲ್ಲಿ ಕಳೆದ ಮಂಗಳವಾರ ಶವವಾಗಿ ಪತ್ತೆಯಾಗಿದ್ದರು. ಸೋನಿಪತ್-ಜಿಂಧ್ ಹೆದ್ದಾರಿಯಲ್ಲಿ ಕಾರು ಪಾರ್ಕಿಂಗ್ ವಿಚಾರವಲ್ಲದೆ, ಪಾನಮತ್ತರಾಗಿದ್ದ ಕಾರು ಪ್ರಯಾಣಿಕರನ್ನು ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದು ತಾರಕಕ್ಕೇರಿ ಗುಂಡಿನ ದಾಳಿಯಲ್ಲಿ ಮೃತ್ತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಸಿಬ್ಬಂದಿಯನ್ನು ಕೊಲೆ ಮಾಡಿ ಆರೋಪಿಗಳು ಜಿಂಧ್ ಕಡೆ ವೇಗವಾಗಿ ತೆರಳಿದ್ದರು.
ಇದನ್ನೂ ಓದಿ: ನೇಣಿಗೆ ಕೊರಳೊಡ್ಡಿದ ಯುವತಿಗೆ ವರವಾಗಬೇಕಿದ್ದ ಪ್ರೀತಿಯೇ ಶಾಪವಾಯ್ತು
ಪೊಲೀಸ್ ಸಿಬ್ಬಂದಿಯ ಕೈನಲ್ಲಿದ್ದ ವಾಹನ ನಂಬರಿನ ಸಹಾಯದ ಮೂಲಕ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇನ್ನೊರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)