More

    ‘ಇನ್ನು ನಮ್ದೇನಿದೆ?’ ಎಂದು ನಟ ರಿಷಬ್​ ಶೆಟ್ಟಿ ಬೇಸರದಿಂದ ಹೇಳಿದ್ಯಾಕೆ?; ‘ಹೀರೋ’ಗೆ ವಿಲನ್ ಆಗಿ ಕಾಡುತ್ತಿರುವುದ್ಯಾರು?

    ಬೆಂಗಳೂರು: ಶುಕ್ರವಾರವಷ್ಟೇ ಬಿಡುಗಡೆ ಆಗಿರುವ ‘ಹೀರೋ’ ಸಿನಿಮಾದ ಮೂಲಕ ಮತ್ತೊಮ್ಮೆ ಹೀರೋ ಆದ, ನಿರ್ಮಾಪಕರೂ ಆದ ಖುಷಿಯಲ್ಲಿರುವ ರಿಷಬ್​ ಶೆಟ್ಟಿ, ಸಿನಿಮಾ ರಿಲೀಸ್​ ಸಂತೋಷದ ಜತೆಗೆ ಬೇಸರದಲ್ಲೂ ಇದ್ದಾರೆ. ‘ಹೀರೋ’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ರಿಷಬ್​ ಬೇಸರಗೊಂಡಿದ್ಯಾಕೆ ಎಂಬುದಕ್ಕೆ ಉತ್ತರ ಆ ವಿಲನ್​.

    ಹೌದು.. ಹೀರೋ ಸಿನಿಮಾಗೆ ಈ ಪೈರಸಿಯೇ ದೊಡ್ಡ ವಿಲನ್ ಆಗಿ ಕಾಡುತ್ತಿದೆ. ಈ ಬಗ್ಗೆ ಬೇಸರ ತೋಡಿಕೊಂಡಿರುವ ರಿಷಬ್ ಶೆಟ್ಟಿ, ‘ಎರಡು ಕಡೆಗಳಲ್ಲಿ ‘ಹೀರೋ’ ಸಿನಿಮಾ ಯಶಸ್ವಿಯಾಗಿ ಓಡುತ್ತಿದೆ. ಒಂದು ಚಿತ್ರಮಂದಿರಗಳಲ್ಲಿ, ಮತ್ತೊಂದು ಪೈರಸಿಯಲ್ಲಿ..ಇನ್ನು ನಮ್ದೇನಿದೆ?’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಊರು ಮಲಗಿದ್ದಾಗ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ 24 ಜನ ಸೇರಿ ಈ ಸಿನಿಮಾ ಮಾಡಿದ್ದೇವೆ. ಅದರಂತೆ ಚಿತ್ರಮಂದಿರಗಳಿಗೆ ಜನ ಸಹ ಹರಿದು ಬರುತ್ತಿದ್ದಾರೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಪೈರಸಿ ಕಾಪಿಗಳು ಹರಿದಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಚಿತ್ರಮಂದಿರದೊಳಕ್ಕೆ ಮೊಬೈಲ್​ಫೋನ್​-ಕ್ಯಾಮರಾ ತೆಗೆದುಕೊಂಡು ಹೋಗಿ ಒಂದಿಡೀ ಸಿನಿಮಾ ರೆಕಾರ್ಡ್​ ಮಾಡಿಕೊಳ್ಳಲು ಅದು ಹೇಗೆ ಸಾಧ್ಯ? ನಿಜಕ್ಕೂ ಇದು ಬೇಸರದ ಸಂಗತಿ. ಸರ್ಕಾರ ಯಾವ್ಯಾವುದೋ ಆ್ಯಪ್​ಗಳನ್ನು, ಪೋರ್ಟಲ್​ಗಳನ್ನು ಬ್ಯಾನ್​ ಮಾಡುತ್ತಿದೆ. ಪೈರಸಿ ಕಾಪಿಗಳನ್ನು ಹಾಕುವ ಇಂಥ ವೇದಿಕೆಗಳನ್ನು ಯಾಕೆ ಬ್ಯಾನ್​ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ರಿಷಬ್ ಶೆಟ್ಟಿ, ‘ದಯಮಾಡಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಪೈರಸಿ ಲಿಂಕ್​ಗಳು ಕಂಡುಬಂದಲ್ಲಿ ಸೋಷಿಯಲ್ ಮೀಡಿಯಾಗ ಮೂಲಕ ತಮ್ಮ ಗಮನ ಸೆಳೆಯುವಂತೆಯೂ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ. ಆ ಮೂಲಕ ಅಂಥ ಲಿಂಕ್​ಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಅಶೋಕವನದಲ್ಲಿ ಮನರಂಜನೆಯ ಜೋಕಾಲಿ; ಹೀರೋ ಸಿನಿಮಾ ವಿಮರ್ಶೆ

    ದ್ವೇಷ-ಪ್ರೀತಿಯ ಹದವಾದ ಮಿಶ್ರಣ; ‘ರಕ್ತ ಗುಲಾಬಿ’ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts