More

    ಬೇತೂರಲ್ಲಿ ಕೊಲ್ಲಾಪುರದಮ್ಮ ಜಾತ್ರೆ

    ಹಿರಿಯೂರು: ತಾಲೂಕಿನ ಬೇತೂರು ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

    ಗಂಗಾಪೂಜೆಯೊಂದಿಗೆ ಕಳಸಪ್ರತಿಷ್ಠಾಪನೆಯ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಹಸಿರು ತೋರಣ, ಬಣ್ಣಬಣ್ಣದಬಟ್ಟೆಹಾಗೂ ಹೂ ಮಾಲೆಗಳಿಂದ ಅಲಂಕರಿಸಿದ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ನಂತರ ಕಳಸ ಪೂಜೆ ಹಿಡುಗಾಯಿ, ಬಲಿ ಅನ್ನ, ಕುಂಬಳ ಕಾಯಿ ಹೊಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

    ಮುಂಜಾನೆ ದೇವಸ್ಥಾನದ ಆವರಣದಲ್ಲಿ ಗಂಗಾಪೂಜೆ, ಹೋಮ-ಹವನ, ದೇವಿಗೆ ಮಾಂಗಲ್ಯಧಾರಣೆ, ನೈವೇದ್ಯ, ಆರತಿ, ಅನ್ನಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.

    ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಡೊಳ್ಳು ಕುಣಿತ, ವೀರಗಾಸೆ, ನಾಟಕ ಇತರೆ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಡೆದವು.

    ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಆಂಧ್ರ ಪ್ರದೇಶ ದಿಂದ ನೂರಾರು ಭಕ್ತರು ಆಗಮಿಸಿದ್ದರು.

    ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ತಾಪಂ ಸದಸ್ಯ ನಟರಾಜ್, ಮಾಜಿ ಅಧ್ಯಕ್ಷ ಸದಾನಂದ್, ಗ್ರಾಪಂ ಅಧ್ಯಕ್ಷ ಚಿದಾನಂದಸ್ವಾಮಿ, ಸದಸ್ಯರಾದ ವೆಂಕಟೇಶ್, ಶಿವಮ್ಮ, ಅಲುವೇಲಮ್ಮ, ನಿಜಲಿಂಗಪ್ಪ ಶಿಕ್ಷಕ ತಿಮ್ಮರಾಜ್, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಾಂಜನೇಯ, ದಯಾನಂದ ಹಾಗೂ ಬೇತೂರುಪಾಳ್ಯ, ಕುರಿದಾಸನಹಟ್ಟಿ, ಮಾರಮ್ಮನಹಳ್ಳಿ, ಕಣಜನಹಳ್ಳಿ, ಖಂಡೇನಹಳ್ಳಿ, ಬುರಡಕುಂಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts