More

    ಕೋವಿಡ್​ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ ಎಂಬ ಚಿಂತೆಯೇ?; ಇಲ್ಲಿದೆ ನೋಡಿ ರಿಯಲ್ ಟೈಮ್ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್​-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದಲ್ಲದೆ, ಸಾವಿನ ಪ್ರಮಾಣವೂ ಭಾರಿ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಈ ಎಲ್ಲದರ ನಡುವೆ ಗಂಭೀರ ರೋಗಲಕ್ಷಣಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬ ದೂರುಗಳು ದಿನೇದಿನೆ ಕೇಳಿಬರುತ್ತಿವೆ.

    ಕರೊನಾ ಸೋಂಕಿತರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರಿಗೇ ಹಾಸಿಗೆ ಸಿಕ್ಕಿಲ್ಲ ಎಂದು ಜೆಡಿಎಸ್​ ನಾಯಕರು ಹೇಳಿಕೊಂಡಿದ್ದರು. ಮಾತ್ರವಲ್ಲ ಸರ್ಕಾರಿ-ಖಾಸಗಿ ಯಾವ ಆಸ್ಪತ್ರೆಗಳಲ್ಲೂ ಹಾಸಿಗೆ ಸಿಗುತ್ತಿಲ್ಲ ಎಂಬ ಕಾರಣಕ್ಕೇ ಕೆಲವರು ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂಬ ಮಾಹಿತಿ ಅಲ್ಲಲ್ಲಿ ಕೇಳಿಬಂದಿವೆ.

    ಇದನ್ನೂ ಓದಿ: ಕರೊನಾ ಸೋಂಕಿತ ಉಚ್ಚ ನ್ಯಾಯಾಲಯದ​ ಸಿಬ್ಬಂದಿಗೂ ಹಾಸಿಗೆ ಸಿಗುತ್ತಿಲ್ಲ; ಹೈಕೋರ್ಟ್ ಕಳವಳ 

    ಹೀಗೆ ಕೋವಿಡ್ ಸೋಂಕಿತರಿಗೆ ಹಾಸಿಗೆ ಸಿಗದೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಕ್ರಮಕೈಗೊಂಡಿರುವ ಸರ್ಕಾರ, ಆ ಬಗ್ಗೆ ರಿಯಲ್​ ಟೈಮ್​ ಮಾಹಿತಿ ಕೊಡುವ ವ್ಯವಸ್ಥೆ ಮಾಡಿದೆ. ರಾಜ್ಯದ ಒಟ್ಟಾರೆ ಕೋವಿಡ್​ ಪ್ರಕರಣಗಳ ಪೈಕಿ ಅತಿ ಹೆಚ್ಚು ಬೆಂಗಳೂರಿನಲ್ಲೇ ಪತ್ತೆ ಆಗಿರುವುದರಿಂದ ಸರ್ಕಾರ ಸದ್ಯ ಬೆಂಗಳೂರಿನಲ್ಲಿರುವ ನಿಗದಿತ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ತಕ್ಷಣದ ಮಾಹಿತಿ ನೀಡಲು ಕ್ರಮಕೈಗೊಂಡಿದೆ. ಇದರಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಮಾಹಿತಿ ಅಪ್​ಡೇಟ್​ ಆಗುತ್ತಿರುವುದರಿಂದ ಅಗತ್ಯವಿರುವವರಿಗೆ ತಕ್ಷಣದ ಮಾಹಿತಿ ಸಿಕ್ಕಿ ಅನುಕೂಲವಾಗುತ್ತದೆ.

    ಬೆಂಗಳೂರಿನಲ್ಲಿ ಕೋವಿಡ್​ ಸೋಂಕಿತರಿಗೆ ಮೀಸಲಿರಿಸಿರುವ ಹಾಸಿಗೆಗಳ ಲಭ್ಯತೆ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

    https://docs.google.com/spreadsheets/u/1/d/e/2PACX-1vS-ipQLaCHZ8id4t4_NHf1FM4vQmBGQrGHAPFzNzJeuuGKsY_It6Tdb0Un_bC9gmig5G2dVxlXHoaEp/pubhtml?gid=1381543057&single=true

    ಮೂವರೂ ಮಕ್ಕಳನ್ನು ಕೊಂದು ತಪ್ಪೊಪ್ಪಿಕೊಂಡ ತಾಯಿ; ಗಂಡನಿಂದ ಮಕ್ಕಳನ್ನು ಪಾರು ಮಾಡಲು ಹೀಗೆ ಮಾಡಿದ್ಲಂತೆ!

    ಕರೊನಾಕ್ಕೆ ಸ್ಯಾಂಡಲ್​ವುಡ್ ನಟ, ನಿರ್ಮಾಪಕ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts