More

    ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!

    ನವದೆಹಲಿ: ಹೊಸ ವರ್ಷ ಎಂದ ಮೇಲೆ ಜನರು ಹೊಸದೇನನ್ನಾದರೂ ಶುರು ಮಾಡುತ್ತಾರೆ. ವಿಶೇಷವಾದ ಏನನ್ನಾದರೂ ಆರಂಭಿಸುವುದಿದ್ದರೆ ಅದಕ್ಕೆ ಹೊಸ ವರ್ಷದಂಥ ವಿಶೇಷ ದಿನಗಳನ್ನೇ ಆರಿಸಿಕೊಳ್ಳುತ್ತಾರೆ. ಇನ್ನು ತಾವು ಅಪ್ಪ-ಅಮ್ಮ ಎನಿಸಿಕೊಳ್ಳುವ ಅಥವಾ ತಮಗೆ ಮಗುವಾಗುವ ದಿನಕ್ಕೂ ಹಲವರು ಜನವರಿ ಒಂದನ್ನೇ ಆರಿಸಿಕೊಳ್ಳುವುದು ಹೊಸದೇನಲ್ಲ.

    ಯುನಿಸೆಫ್​​ ಸಂಸ್ಥೆ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಹೊಸ ವರ್ಷದ ದಿನದಂದು ಎಷ್ಟು ಮಕ್ಕಳು ಹುಟ್ಟಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿದೆ. ವಿಶೇಷವೆಂದರೆ ಇವತ್ತು ಭಾರತದಲ್ಲೇ ಅತಿ ಹೆಚ್ಚು ಮಕ್ಕಳು ಜನಿಸಲಿದ್ದಾರಂತೆ. ಯುನಿಸೆಫ್​ ಲೆಕ್ಕಾಚಾರದ ಪ್ರಕಾರ, ಚೀನಾದಲ್ಲಿ 35,615, ನೈಜೀರಿಯಾ- 21,439, ಪಾಕಿಸ್ತಾನ- 14,161, ಇಂಡೊನೇಷ್ಯಾ- 12,336, ಇಥಿಯೋಪಿಯಾ- 12,006, ಅಮೆರಿಕ- 10,312, ಈಜಿಪ್ಟ್​- 9,455, ಬಾಂಗ್ಲಾ ದೇಶ- 9,236, ಕಾಂಗೋ ಗಣರಾಜ್ಯದಲ್ಲಿ 8,640 ಮಕ್ಕಳು ಇಂದು ಜನಿಸಲಿವೆ.

    ಇದನ್ನೂ ಓದಿ: ಪತ್ನಿಗೆ ತಿಳಿಯದಂತೆ ಆರು ತಿಂಗಳ ಮಗು ಕಯ್ದೊಯ್ದು ಮಾರಾಟ ಮಾಡಿದ ಅಪ್ಪ!

    ಯುಎನ್​​ನ ವರ್ಲ್ಡ್ ಪಾಪ್ಯುಲೇಷನ್​ ಪ್ರಾಸ್ಪೆಕ್ಟ್ಸ್​(2019)ರ ಅಂಕಿ-ಅಂಶಗಳನ್ನು ಆಧರಿಸಿ ಯುನಿಸೆಫ್ 2021ರ ಜನವರಿ 1ರಂದು ಜನಿಸಲಿರುವ ಮಕ್ಕಳ ಪ್ರಮಾಣವನ್ನು ಅಂದಾಜು ಮಾಡಿದೆ. ಆ ಪ್ರಕಾರ ಭಾರತದಲ್ಲಿ ಇಂದು 60 ಸಾವಿರ ಮಕ್ಕಳು ಜನಿಸಲಿದ್ದರೆ, ಜಗತ್ತಿನಲ್ಲಿ ಒಟ್ಟು 3.7 ಕೋಟಿ ಮಕ್ಕಳು ಜನಿಸಲಿವೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ನಿನ್ನೆ ದೀಪಿಕಾ ಪಡುಕೋಣೆ ಹಾಗೇಕೆ ಮಾಡಿದ್ರು?!; ಎಲ್ಲ ತೆಗೆದ ಅವರಿಂದು ಫೀಲಿಂಗ್ ಹೇಳಿಕೊಂಡಿದ್ದಾರೆ…

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ನಮ್ಮ ಪಕ್ಷದ ಬೆಂಬಲಿತರು ಎಂದು ಹೇಳಿದ್ರೆ ಬೀಳುತ್ತೆ ಕೇಸ್​!

    ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts