More

    ಡಾಕ್ಟರ್ ಆಗಬೇಕೆಂಬ ರೈತನ ಮಗಳ ಕನಸು ನನಸಾಗಿಸಿದ ಕ್ರಿಕೆಟ್ ದಿಗ್ಗಜ ತೆಂಡುಲ್ಕರ್

    ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಬಡ ರೈತನ ಮಗಳಿಗೆ ವೈದ್ಯೆಯಾಗುವ ಕನಸು ನನಸು ಮಾಡಿಕೊಳ್ಳಲು ನೆರವಾಗಿದ್ದಾರೆ. ಈ ಮೂಲಕ ಸಚಿನ್ ನಿವೃತ್ತಿಯ ನಂತರದಲ್ಲೂ ಅಭಿಮಾನಿಗಳ ಹೃದಯ ಗೆಲ್ಲುವುದನ್ನು ಮುಂದುವರಿಸಿದ್ದಾರೆ.

    ‘ಮಹಾರಾಷ್ಟ್ರದ ರತ್ನಗಿರಿಯ ದೀಪ್ತಿ ವಿಶ್ವಾಸ್‌ರಾವ್ ಅವರು ಈಗ ತಮ್ಮ ಗ್ರಾಮದ ಮೊದಲ ವೈದ್ಯೆ ಎನಿಸಲು ಸಜ್ಜಾಗಿದ್ದಾರೆ. ವೈದ್ಯಕೀಯ ಕಾಲೇಜು ಸೇರುವ ಅವರ ಕನಸು ನನಸಾಗಿಸಲು ಸಚಿನ್ ನೆರವಾಗಿದ್ದಾರೆ. ದೀಪ್ತಿ ಜತೆಗೆ ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಸಚಿನ್ ನೆರವು ನೀಡಿದ್ದಾರೆ’ ಎಂದು ಸೇವ ಸಹಯೋಗ ಫೌಂಡೇಷನ್ ಟ್ವಿಟರ್‌ನಲ್ಲಿ ತಿಳಿಸಿದೆ. ಜತೆಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ದೀಪ್ತಿ, ಸಚಿನ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

    ಇದನ್ನೂ ಓದಿ: VIDEO | ಒಲಿಂಪಿಕ್ಸ್‌ನಲ್ಲೊಂದು ಪ್ರೇಮ ನಿವೇದನೆ, ಕೋಚ್ ಜತೆ ಮದುವೆ ಫಿಕ್ಸ್​​!

    ‘ನಾನೀಗ ಅಕೋಲದ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆ ರೈತರು. ನನ್ನ ಕಠಿಣ ಪರಿಶ್ರಮಕ್ಕೆ ಈ ಫಲ ಸಿಗುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ನನಗೆ ವೈದ್ಯಕೀಯ ಸೀಟು ಲಭಿಸಿದೆ. ನನಗೆ ಸ್ಕಾಲರ್‌ಶಿಪ್ ನೀಡಿದ ಸಚಿನ್ ತೆಂಡುಲ್ಕರ್ ಫೌಂಡೇಷನ್‌ಗೆ ಧನ್ಯವಾದಗಳು’ ಎಂದು ದೀಪ್ತಿ ಹೇಳಿದ್ದಾರೆ. ಇದೇ ವಿಡಿಯೋದಲ್ಲಿ ಸಚಿನ್ ಕೂಡ ಮಾತನಾಡಿದ್ದು, ‘ಕನಸುಗಳನ್ನು ಬೆನ್ನಟ್ಟಿ ನನಸು ಮಾಡಿಕೊಳ್ಳುವುದಕ್ಕೆ ದೀಪ್ತಿ ಅವರ ಜರ್ನಿ ಒಂದು ಉತ್ತಮ ಉದಾಹರಣೆ. ಕಠಿಣ ಪರಿಶ್ರಮದಿಂದ ಗುರಿಯತ್ತ ಮುನ್ನಡೆದಿರುವ ಆಕೆಯ ಯಶೋಗಾಥೆ ಹಲವರಿಗೆ ಸ್ಫೂರ್ತಿ ತುಂಬಲಿದೆ. ದೀಪ್ತಿಯ ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗಳು’ ಎಂದಿದ್ದಾರೆ.

    ಕ್ಷಮೆಯಾಚಿಸಿದ ‘ಟೋಕಿಯೋ ಒಲಿಂಪಿಕ್ಸ್​’ ಸಂಘಟಕರು… ಕಾರಣವೇನು ಗೊತ್ತಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts