More

    ಅನಗೋಳದಲ್ಲಿ ಕಲ್ಲು ತೂರಾಟ

    ಬೆಳಗಾವಿ: ನಗರದ ಅನಗೋಳದಲ್ಲಿ ಮಂಗಳವಾರ ಮರಗಾಯಿ ದೇವಿಯ ಕುಂಭಮೇಳ ಮೆರವಣಿಗೆ ಬಳಿಕ ಕಲ್ಲು ತೂರಾಟ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬುಧವಾರ ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಅನಗೋಳದ ಹರ್ಷದ್ ಮದನ್ ಜಾದವ್ (29), ಉಮೇಶ ಮಾರುತಿ ಶಿಂಧೆ (19) ರೋಹಿತ್ ಪಾಟೀಲ (19) ಹಾಗೂ ಆಕಾಶ ಜೋಂಗರೂಚ್ಯ (23) ಬಂಧಿತರು. ಮರಗಾಯಿ ದೇವರ ನೂತನ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಸೋಮವಾರದಿಂದ ದೇವಿ ಆರಾಧನೆ ಹಾಗೂ ಮೆರವಣಿಗೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ಮೆರವಣಿಗೆ ನಡೆಯುತ್ತಿರುವಾಗ ಎರಡು ಸಂಘಟನೆಗಳ ಮಧ್ಯೆ ಗುಂಪು ಘರ್ಷಣೆ ನಡೆದು, ಕಲ್ಲು ತೂರಾಟ ಮಾಡಲಾಗಿದೆ.

    ಗಲಾಟೆಯಲ್ಲಿ ಅನಗೋಳದ ರಘುನಾಥ ಪೇಟೆಯ ಸೂರಜ್ ಸುರೇಶ ಬಿರ್ಜೆ(20), ಪಾಟೀಲ ಗಲ್ಲಿಯ ಆಕಾಶ ಶಂಕರ ಜಿಂಗರುಚೆ(23) ಹಾಗೂ ಕಾಸಾರ್ ಗಲ್ಲಿಯ ತಬರೇಜ್ ಉಮರ್ ಸನದಿ ಎಂಬುವರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಇನ್‌ಸ್ಪೆಕ್ಟರ್ ಎದುರಲ್ಲೇ ಮುಂದುವರಿದ ಗಲಾಟೆ!

    ಇನ್‌ಸ್ಪೆಕ್ಟರ್ ಎದುರಲ್ಲೇ ಮುಂದುವರಿದ ಗಲಾಟೆ!

    15 ಪೇದೆ, ಇಬ್ಬರು ಎಎಸ್‌ಐ ಜತೆಗೆ ಬಂದೋಬಸ್ತ್‌ಗೆ ಆಗಮಿಸಿದ್ದ ಟಿಳಕವಾಡಿ ಠಾಣೆ ಸಿಪಿಐ ವಿನಾಯಕ ಬಡಿಗೇರ ಅವರ ಕಣ್ಣೆದುರೇ ಗಲಾಟೆ ನಡೆದಿದೆ. ಪರಿಸ್ಥಿತಿ ಹತೋಟಿಗೆ ತರುವಲ್ಲಿ ಸಿಪಿಐ ವಿಫಲವಾಗಿದ್ದು, ಪೊಲೀಸ್ ಸಿಬ್ಬಂದಿ ಮೇಲೂ ಕಲ್ಲು ಎಸೆಯಲಾಗಿದೆ. ಸ್ಥಳದಲ್ಲೇ ಪೆಟ್ರೋಲಿಂಗ್‌ನಲ್ಲಿ ತೊಡಗಿದ್ದ ರಕ್ಷಕ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಂಪು ಲೈಟ್ ಜಖಂಗೊಂಡಿದೆ.

    ಸ್ಥಳದಲ್ಲಿದ್ದ ಖಾಸಗಿ ವಾಹನಗಳು, ಮನೆಯ ಕಿಟಕಿಗಳು ಹಾಗೂ ಅಂಗಡಿಗಳು ಜಖಂಗೊಂಡಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ ಪರಿಶೀಲನೆ ನಡೆಸಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts